ಬೆಂಗಳೂರು: ಕನ್ನಡ ಸಿನಿಮಾ 'ಕೆಜಿಎಫ್-2' ರಿಲೀಸ್‌ಗೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಅಭಿಮಾನಿಗಳಿಗೆ ಇವತ್ತು ಮರೆಯಲಾಗದ ದಿನ. ಕಾರಣ 4 ವರ್ಷದ ಬಳಿಕ ಕಡೆಗೂ 'ಕೆಜಿಎಫ್' ಚಾಪ್ಟರ್ 2 ಕಣ್ತುಂಬಿಕೊಳ್ಳುವ ಭಾಗ್ಯ ಅಭಿಮಾನಿಗಳಿಗೆ ಒಲಿದು ಬಂದಿದೆ. ಹೀಗಾಗಿಯೇ ಅಭಿಮಾನಿಗಳು ತುಂಬಾ ಡಿಫರೆಂಟ್ ಆಗಿ, 'ಕೆಜಿಎಫ್-2' ಬರಮಾಡಿಕೊಂಡರು. ಅದರಲ್ಲೂ ಬೆಂಗಳೂರಿನ ಹಲವು ಥಿಯೇಟರ್‌ಗಳ ಎದುರು ಮಧ್ಯರಾತ್ರಿ 12 ಗಂಟೆಗೆ ಫಸ್ಟ್ ಶೋ ಶುರುವಾಗಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು.
ಪಟಾಕಿ ಸಿಡಿಸಿ, ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ 'ಕೆಜಿಎಫ್' ಚಾಪ್ಟರ್ 2 ಎಂಟ್ರಿ ಸಂಭ್ರಮಿಸಿದ ಅಭಿಮಾನಿಗಳು. ಸಿನಿಮಾದ ಒಂದೊಂದು ಸೀನ್ ನೋಡಿದಾಗಲೂ ಕುಣಿದಾಡಿದರು. ಇನ್ನು ಶೋ ಮುಗಿದ ಬಳಿಕ ಪ್ರತಿಯೊಬ್ಬರ ಪ್ರತಿಕ್ರಿಯೆ 'ಸೂಪರ್' ಅನ್ನೋದೆ ಆಗಿತ್ತು.
ಇದನ್ನೂ ಓದಿ- KGF 2 Release: 10 ಸಾವಿರ ಥಿಯೇಟರ್, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ 'ಕೆಜಿಎಫ್-2' ಹವಾ..?
ತೆರೆಯಿತು 'ನರಾಚಿ' ಬಾಗಿಲು
ಹಲವು ದಿನಗಳಿಂದ 'ಕೆಜಿಎಫ್' ಚಾಪ್ಟರ್ 2 ಬರಮಾಡಿಕೊಳ್ಳಲು ಯಶ್ ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಕೊರೊನಾ ಕಾರಣಕ್ಕೆ 'ಕೆಜಿಎಫ್' ಚಾಪ್ಟರ್ 2 ಬಿಡುಗಡೆ ಒಂದಷ್ಟು ದಿನ ಮುಂದಕ್ಕೆ ಹೋಗುತ್ತಾ ಬಂದಿತ್ತು. ಆದರೆ ರಿಲೀಸ್ ಮಾಡಲು ಡೆಡ್‌ಲೈನ್ ಫಿಕ್ಸ್ ಮಾಡಿಕೊಂಡಿದ್ದ 'ಕೆಜಿಎಫ್' ಚಾಪ್ಟರ್ 2 ಟೀಂ, ಏಪ್ರಿಲ್ 14ಕ್ಕೆ 'ನರಾಚಿ' ಬಾಗಿಲು ತೆರೆಯುವ ಆಶ್ವಾಸನೆ ನೀಡಿತ್ತು. ಇಂದು ಆ ಆಶ್ವಾಸನೆ ಪೂರ್ಣಗೊಂಡಿದೆ.
ಇದನ್ನೂ ಓದಿ- KGF 2 Release: ಗರುಡ ಫಿನಿಶ್.. ಅಧೀರ ಉಡೀಸ್..! ಹೇಗಿತ್ತು ಗೊತ್ತಾ ರಾಕಿಭಾಯ್ ರಿಯಲ್ ಸಾಮ್ರಾಜ್ಯ..?
ಕೋಟಿ ಕೋಟಿ ಅಭಿಮಾನಿಗಳು 'ಕೆಜಿಎಫ್' ಚಾಪ್ಟರ್ 2 ನೋಡಲು ಕಾದು ಕುಳಿತಿದ್ದರು. ಅದ್ರಲ್ಲೂ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ 'ಕೆಜಿಎಫ್' ಚಾಪ್ಟರ್ 2 ದೊಡ್ಡ ದಾಖಲೆ ಸೃಷ್ಟಿಸಿದೆ. ಜೊತೆಗೆ ಮೊದಲ ದಿನದ ಗಳಿಕೆಯ ವಿಚಾರದಲ್ಲೂ ಹಲವು ದಾಖಲೆಗಳನ್ನು ಕನ್ನಡದ ಸಿನಿಮಾ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.