Benefits of eating peanuts: ಕಡಲೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಬಯೋಟಿನ್, ನಿಯಾಸಿನ್, ಫೋಲೇಟ್, ಮ್ಯಾಂಗನೀಸ್, ವಿಟಮಿನ್ ಇ, ಥಯಾಮಿನ್, ರಂಜಕ ಮತ್ತು ಮೆಗ್ನೀಸಿಯಮ್ ಇದ್ದು, ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಇದನ್ನು ಚಳಿಗಾಲದಲ್ಲಿ ಸೇವಿಸಬೇಕು ಏಕೆಂದರೆ ನೀವು ಇದರಿಂದ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತೀರಿ. ಇದನ್ನು ಚಳಿಗಾಲದಲ್ಲಿ ಏಕೆ ತಿನ್ನಬೇಕು ಮತ್ತು ಒಂದು ದಿನದಲ್ಲಿ ಎಷ್ಟು ತಿನ್ನಬೇಕು ಎಂದು ತಿಳಿಯಿರಿ..
ಈ ಸಮಸ್ಯೆಗಳಿಗೆ ಕಡಲೆಕಾಯಿ ಪ್ರಯೋಜನಕಾರಿ
ತ್ವಚೆಗೆ ಪ್ರಯೋಜನಕಾರಿ: ಕಡಲೆಕಾಯಿಯಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ-ಆಕ್ಸಿಡೆಂಟ್‌ಗಳಿದ್ದು, ಕುದಿಸಿದಾಗ ಅವು ಹೆಚ್ಚು ಪ್ರಯೋಜನಕಾರಿಯಾಗುತ್ತವೆ. ಇದರಲ್ಲಿರುವ ಜೆನಿಸ್ಟೀನ್ ಪ್ರಮಾಣ ನಾಲ್ಕು ಪಟ್ಟು ಹೆಚ್ಚುತ್ತದೆ ಮತ್ತು ಬಯೋಸೈನಿನ್-ಎ ಎಂಬ ಆ್ಯಂಟಿ-ಆಕ್ಸಿಡೆಂಟ್ ದ್ವಿಗುಣಗೊಳ್ಳುತ್ತದೆ. ಇವು ತ್ವಚೆಯಲ್ಲಿ ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ಕಡಿಮೆ ಮಾಡುತ್ತವೆ. ಇದು ಸೋರಿಯಾಸಿಸ್ ಮತ್ತು ಎಸ್ಜಿಮಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಲೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವ ಮಲ್ಟಿವಿಟಮಿನ್‌ಗಳು ಚರ್ಮದ ಆರೈಕೆಗೆ ಒಳ್ಳೆಯದು.
ಇದನ್ನೂ ಓದಿ: ಚಳಿಗಾಲದಲ್ಲಿ 1 ಚಮಚ ಜೇನುತುಪ್ಪದ ಜೊತೆಗೆ 2 ಚಿಟಿಕೆ ಅರಿಶಿನ ಸೇವಿಸಿ..!
ಮೂಳೆಗಳನ್ನು ಬಲಪಡಿಸಲು ಸಹಕಾರಿ: ಕಡಲೆಕಾಯಿಯು ಶಕ್ತಿಯ ಉತ್ತಮ ಮೂಲವಾಗಿದ್ದು, ನಿಮ್ಮ ದೇಹಕ್ಕೆ ಸಾಕಷ್ಟು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಇದರಲ್ಲಿ ಹೇರಳವಾಗಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ರಕ್ತಕ್ಕೆ ಆಮ್ಲಜನಕವನ್ನು ಒದಗಿಸುವಲ್ಲಿ ಮತ್ತು ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೊಲೆಸ್ಟ್ರಾಲ್‌ನಲ್ಲಿ ಪ್ರಯೋಜನಕಾರಿ: ಕಡಲೆಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ವಿಟಮಿನ್ ಬಿ ಯ ಉತ್ತಮ ಮೂಲವಾಗಿದೆ.
ಹೊಟ್ಟೆಗೆಯ ಸಮಸ್ಯೆಗಳಿಗೆ ಸಹಕಾರಿ: ಪಾಲಿ-ಫೀನಾಲಿಕ್‌ನಂತಹ ಉತ್ಕರ್ಷಣ ನಿರೋಧಕಗಳು ಕಡಲೆಕಾಯಿಯಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿವೆ. ಪಿ-ಕೌಮರಿಕ್ ಆಮ್ಲವು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಸಿನೋಜೆನಿಕ್ ನೈಟ್ರಸ್-ಅಮೈನ್ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಇದನ್ನು ಮಾಡಲಾಗುತ್ತದೆ.
ಕಡಲೆಕಾಯಿ ತಿನ್ನಲು ಸರಿಯಾದ ಸಮಯ ಯಾವುದು?
ಕಡಲೆಕಾಯಿಯನ್ನು ತಿನ್ನಲು ಸರಿಯಾದ ಸಮಯವೆಂದರೆ ಬೆಳಗ್ಗೆ ಅಥವಾ ಹಗಲಿನಲ್ಲಿ. ಊಟದ ಸಮಯದಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ. ಒಂದು ದಿನದಲ್ಲಿ ನೀವು ಒಂದರಿಂದ ಎರಡು ಹಿಡಿ ಕಡಲೆಕಾಯಿಯನ್ನು ತಿನ್ನಬೇಕು. 50 ಗ್ರಾಂಗಿಂತ ಹೆಚ್ಚು ಕಡಲೆಕಾಯಿಯನ್ನು ಸೇವಿಸದಿರಲು ಪ್ರಯತ್ನಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.