JDS Slams CM siddaramaiah: ಡಿಸೆಂಬರ್ 5ರ ಗುರವಾರ ಹಾಸನದಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಇದೀಗ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಟೀಕಿಸಿದೆ. ಇದು ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಜೆಡಿಎಸ್, ʼಜೆಡಿಎಸ್ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್ ಬಿಡುವ ಮುನ್ನ ಸಿದ್ದರಾಮಯ್ಯ ಶುರು ಮಾಡಿಕೊಂಡಿದ್ದಾರೆ!! ಹಾಸನದಲ್ಲಿ ಡಿಸೆಂಬರ್ 5ನೇ ತಾರೀಖು ನಡೆಯುತ್ತಿರುವ ಕಾಂಗ್ರೆಸ್ಸಿನ ಅಡ್ರೆಸ್ಸೇ ಇಲ್ಲದ ಅಹಿಂದಾ ಸಮಾವೇಶ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವಾ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ?ʼ ಎಂದು ಕುಟುಕಿದೆ.
ಇದನ್ನೂ ಓದಿ: ಚಂದ್ರಶೇಖರ ಸ್ವಾಮಿಜಿ ವಿರುದ್ಧ ಎಫ್ಐಆರ್ ದಾಖಲು ಹಿನ್ನೆಲೆ
ಜೆಡಿಎಸ್ ಬಿಡುವಾಗ ಆಡಿದ್ದ ಸದಾರಮೆ ಆಟವನ್ನೇ ಕಾಂಗ್ರೆಸ್ ಬಿಡುವ ಮುನ್ನ @siddaramaiah ಶುರು ಮಾಡಿಕೊಂಡಿದ್ದಾರೆ!!
ಹಾಸನದಲ್ಲಿ ಡಿಸೆಂಬರ್ 5ನೇ ತಾರೀಖು ನಡೆಯುತ್ತಿರುವ ಕಾಂಗ್ರೆಸ್ಸಿನ ಅಡ್ರೆಸ್ಸೆ ಇಲದ ಅಹಿಂದಾ ಸಮಾವೇಶ ಅವರ ಹೊಸ ಗಂಜಿ ಕೇಂದ್ರದತ್ತ ಪಯಣದ ಸಂಕೇತವಾ? ಅಥವಾ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ…
— Janata Dal Secular (@JanataDal_S) November 30, 2024
ಮನೆಯೊಂದು ಮೂವತ್ತೊಂದು ಬಾಗಿಲು ಎನ್ನುವಂತೆ ಆಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಾಹೇಬರಿಗೆ ಸ್ವಯಂ ನಿವೃತ್ತಿ ಕೊಡಿಸಲು ಕೈ ಹೈಕಮಾಂಡ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಸೂಚನೆಯೇ ಇದು ರಾಜ್ಯದಲ್ಲಿ ಈ ಸರ್ಕಾರ ಬಂದಾಗಿನಿಂದಲೂ ಅನೇಕ ಹಗರಣಗಳಿಂದ ದೇಶವ್ಯಾಪಿ ಕಾಂಗ್ರೆಸ್ ಪಕ್ಷವು ಮುಜುಗರಕ್ಕೀಡಾಗುತ್ತಲೇ ಇದೆ. ಆ ಮುಜುಗರದಲ್ಲಿ ಸಿದ್ದು ಸರಕಾರದ್ದು ಸಿಂಹಪಾಲು ಇದೆ ಎಂದು ಜೆಡಿಎಸ್ ಟೀಕಿಸಿದೆ.
ವಾಲ್ಮೀಕಿ ನಿಗಮ, ಮುಡಾ, ಪರಿಶಿಷ್ಟರ ಮೀಸಲು ಹಣ ಲೂಟಿ, ಅಬಕಾರಿ ಹಗರಣ ಸೇರಿ ಲಂಚಾವತಾರದಲ್ಲಿ ದಾಖಲೆ ಬರೆದಿರುವ ಸರ್ಕಾರದಲ್ಲಿ, ದಿನಕ್ಕೊಂದರ ಲೆಕ್ಕದಲ್ಲಿ ಹೊರ ಬರುತ್ತಿರುವ ಹಗರಣಗಳು ಕೈ ಕಮಾಂಡ್ ನಾಯಕರನ್ನೂ ಹೈರಾಣ ಮಾಡಿವೆ. ಹಸ್ತಿನಾವತಿಯಲ್ಲೂ ಇವರ ಮಾನ ಹಾದಿ ಬೀದಿಯಲ್ಲಿ ಹರಾಜಾಗುತ್ತಿದೆ. 50:50 ಅನುಪಾತದ ಲೆಕ್ಕದಲ್ಲಿ ನಡೆದ ಅಧಿಕಾರ ಸೂತ್ರ ಬಿಗಡಾಯಿಸಿದ್ದು, ಕುರ್ಚಿ ಆಕಾಂಕ್ಷಿಗಳು ದೆಹಲಿಯಾತ್ರೆ ಜೊತೆಗೆ ಗುಪ್ತ್ ಗುಪ್ತ್ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಲೇವಡಿ ಮಾಡಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.