ನವದೆಹಲಿ: ಭಾನುವಾರದಂದು ದೆಹಲಿಯ ಮೋತಿನಗರದಲ್ಲಿ ಸ್ವಂತ ತಂದೆ ತಾಯಿಗಳಿರುವ ಮನೆಗೆ ಬೆಂಕಿ ಹಚ್ಚಿ ಅವರನ್ನು ಕೊಳ್ಳಲ್ಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಈ ಘಟನೆಯು ಮೇ 11ರಂದು ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ನಡೆದಿದ್ದು.ಮೃತಪಟ್ಟ ಪೋಷಕರನ್ನು 70 ವರ್ಷದ ಚೇಡಿಲಾಲ್ ಮತ್ತು 62 ವರ್ಷದ ಲಕ್ಮಿ ಎಂದು ಹೇಳಲಾಗಿದೆ. ಈ ಇಬ್ಬರು ದಂಪತಿಗಳನ್ನು ರಕ್ಷಿಸಲು ಹೋದಾಗ ವಿನಯ್ ಎನ್ನುವವನಿಗೆ ಗಂಭೀರ್ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬೆಂಕಿ ಹಚ್ಚಿರುವ ವ್ಯಕ್ತಿಯು ಮಾನಸಿಕವಾಗಿ ಅಸ್ತವ್ಯಸ್ತವಾಗಿದ್ದನೆಂದು ಹೇಳಲಾಗಿದೆ .ಈ ಘಟನೆಯ ನಂತರ ಅವನು ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಹೇಳುವಂತೆ ಪೋಷಕರಿಗೆ ತೊಂದರೆ ನೀಡುತ್ತಿದ್ದನೆಂದು ತಿಳಿದುಬಂದಿದೆ. ಅಲ್ಲದೆ ಇನ್ನೊಬ್ಬ ನೆರೆಹೊರೆಯವನು ಹೇಳುವಂತೆ ಅವನು ಮನೆಯಲ್ಲಿ ಗಲಾಟೆ ಸೃಷ್ಟಿಸುತ್ತಿದ್ದನು ಮತ್ತು ಹಣದ ವಿಚಾರವಾಗಿ ತಾಯಿಯ ಜೊತೆ ಜಗಳವಾಡಿದ್ದನೆಂದು ಎಂದು ತಿಳಿದುಬಂದಿದೆ.
ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.