ಹೈದರಾಬಾದ್: ಇಲ್ಲಿನ ತಾಜ್ ಕೃಷ್ಣಾ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗದ ನಾಯಕರಾಗಿ ಆಯ್ಕೆಯಾಗಿದ್ದಾರೆ.
Karnataka Congress Legislature Party met in Hyderabad and unanimously elected Shri @siddaramaiah as the leader of the CLP as per the directions of Congress President Shri @RahulGandhi pic.twitter.com/lsyVdgVSLX
— Karnataka Congress (@INCKarnataka) May 18, 2018
ಈ ಮೊದಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ ಪರಮೇಶ್ವರ್ ಅವರ ಹೆಸರು ಶಾಸಕಾಂಗದ ನಾಯಕರಾಗಿ ಆಯ್ಕೆ ಮಾಡಲು ಬಲವಾಗಿ ಕೇಳಿಬಂದಿತ್ತು, ಆದರೆ, ಸಿದ್ದರಾಮಯ್ಯನವರು ಬಹುತೇಕ ಕ್ಲಿಷ್ಟ ಸಂದರ್ಭದಲ್ಲಿ ಸವಾಲುಗಳನ್ನು ನಿರ್ವಹಿಸಬಲ್ಲರು ಎನ್ನುವ ಕಾರಣದಿಂದಾಗಿ ಸಿದ್ದರಾಮಯ್ಯನವರಿಗೆ ಮಣೆ ಹಾಕಲಾಗಿದೆ. ಅಲ್ಲದೆ ಅವರು ಸ್ಪೀಕರ್ ಬೋಪಯ್ಯನವರಿಗೆ ಟಾಂಗ್ ಕೊಡಲು ಸೂಕ್ತ ವ್ಯಕ್ತಿ, ಮತ್ತು ಅವರಿಗೆ ಇರುವ ಕಾನೂನಾತ್ಮಕ ಜ್ಞಾನದ ಅರಿವು ಈ ಎಲ್ಲ ಅಂಶಗಳ ಕಾರಣಕ್ಕಾಗಿ ಅವರಿಗೆ ಮನ್ನಣೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯನವರು ಪ್ರಮುಖ ನಾಯಕರಾಗಿರುವುದರಿಂದ ಅವರ ವರ್ಚಸ್ಸನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೇಸ್ ಅವರಿಗೆ ಆಧ್ಯತೆ ನೀಡಿದೆ ಎಂದು ಹೇಳಲಾಗಿದೆ.