ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ನಂತರ, ಗ್ರಾಹಕರು ಬ್ಯಾಂಕ್ಗಳಲ್ಲಿ ಈ ನೋಟುಗಳನ್ನು ಠೇವಣಿ ಮಾಡುತ್ತಿದ್ದಾರೆ. ಇದೀಗ ಬ್ಯಾಂಕ್ ಗಲ್ಲಿ ಗ್ರಾಹಕರು ಮಾಡುತ್ತಿರುವ ಠೇವಣಿ ಪ್ರಮಾಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಠೇವಣಿ ಪ್ರಮಾಣ ಆರು ವರ್ಷಗಳ ಗರಿಷ್ಠ ಮಟ್ಟವಾದ 191.6 ಲಕ್ಷ ಕೋಟಿ ರೂ. ತಲುಪಿದೆ. 2,000 ರೂಪಾಯಿ ನೋಟುಗಳಲ್ಲಿ ಒಟ್ಟು 3.62 ಲಕ್ಷ ಕೋಟಿ ರೂಪಾಯಿಗಳ ಪೈಕಿ ನಾಲ್ಕನೇ ಮೂರರಷ್ಟು ಹೆಚ್ಚು ನೋಟುಗಳು ಬ್ಯಾಂಕ್ಗಳಿಗೆ ಮರಳಿವೆ ಎಂದು ಆರ್ಬಿಐ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು.
191.6 ಲಕ್ಷ ಕೋಟಿ ರೂಪಾಯಿಯ ದಾಖಲೆ ಮತ್ತ ತಲುಪಿದ ಠೇವಣಿ :
85 ಪ್ರತಿಶತದಷ್ಟು 2 ಸಾವಿರ ರೂಪಾಯಿ ನೋಟುಗಳನ್ನು ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಉಳಿದ ನೋಟುಗಳನ್ನು ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಜೂನ್ 30ರವರೆಗೆ ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇ.13 ರಷ್ಟು ಏರಿಕೆಯಾಗಿ 191.6 ಲಕ್ಷ ಕೋಟಿ ರೂ. ತಲುಪಿದೆ ಎಂದು 'ಕೇರ್ ರೇಟಿಂಗ್ಸ್' ನ ಹಿರಿಯ ನಿರ್ದೇಶಕ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ. ಇದು ಕಳೆದ ಆರು ವರ್ಷಗಳಲ್ಲಿ ಅತ್ಯಧಿಕ ಠೇವಣಿ ಅಂಕಿ ಅಂಶವಾಗಿದೆ.
ಇದನ್ನೂ ಓದಿ : ಹಣ ಹೂಡಿಕೆ ಮಾಡಬೇಕೆ? ಈ ಸಲಹೆಗಳನ್ನು ಅನುಸರಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ!
ಠೇವಣಿಯಲ್ಲಿ 13 ಶೇ.ದಷ್ಟು ಹೆಚ್ಚಳ :
ಬ್ಯಾಂಕ್ ಗಳಲ್ಲಿ ಠೇವಣಿ ಹೆಚ್ಚಳಕ್ಕೆ ಪ್ರಮುಖ ಕಾರಣ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದು ಮತ್ತು ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ. ಪರಾಮರ್ಶೆಯಲ್ಲಿರುವ ಹದಿನೈದು ದಿನಗಳಲ್ಲಿ ಠೇವಣಿಗಳು ಶೇಕಡಾ 13 ರಷ್ಟು ಹೆಚ್ಚಾಗಿದ್ದು, 191.6 ಲಕ್ಷ ಕೋಟಿಗೆ ಏರಿದೆ. ಕಳೆದ 12 ತಿಂಗಳಲ್ಲಿ ಬ್ಯಾಂಕ್ಗಳ ಠೇವಣಿ 22 ಲಕ್ಷ ಕೋಟಿಯಿಂದ 185.7 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮೇ 19 ರಂದು ಆರ್ಬಿಐ 2000 ನೋಟು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಘೋಷಿಸಿತ್ತು.
ಇಳಿಕೆಯಾಗುವುದು ಸಾಲದ ಮೇಲಿನ ಬಡ್ಡಿ :
ವರದಿಯ ಪ್ರಕಾರ, 2000 ರೂ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲಾಗಿದೆ ಎಂದು ಘೋಷಿಸಿದಾಗಿನಿಂದ, ಬ್ಯಾಂಕ್ನಲ್ಲಿ ಠೇವಣಿ ಮೊತ್ತವು ವೇಗವಾಗಿ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಸಾಲ ಮತ್ತು ಠೇವಣಿಗಳ ನಡುವಿನ ವ್ಯತ್ಯಾಸದಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ನವೆಂಬರ್ 2022 ರಲ್ಲಿ ಸಾಲ ಮತ್ತು ಠೇವಣಿ ನಡುವಿನ ವ್ಯತ್ಯಾಸವು ಶೇಕಡಾ 8.75 ರಷ್ಟಿತ್ತು. ಇದು ಜೂನ್, 2023ರಲ್ಲಿ ಶೇಕಡಾ 3.26 ಕ್ಕೆ ಕಡಿಮೆಯಾಗಿದೆ. ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ನಗದು ಹರಿವಿನ ಲಾಭವನ್ನು ಗ್ರಾಹಕರಿಗೆ ಬಡ್ಡಿದರದ ರೂಪದಲ್ಲಿ ನೀಡಲಾಗುವುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ರೇಲ್ವೆ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ, ಊಟಕ್ಕೆ ಇನ್ಮುಂದೆ ಇಷ್ಟೇ ಹಣ ಪಾವತಿಸಿದರೆ ಸಾಕು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.