ATM ನಿಂದ ಕ್ಯಾಶ್ ಪಡೆಯುವುದು ಇನ್ಮುಂದೆ ಮತ್ತಷ್ಟು ದುಬಾರಿ, ಹೊಸ ದರಗಳು ಎಂದಿನಿಂದ ಜಾರಿ?

ATM Transaction Charges - ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ. RBI ಇತ್ತೀಚೆಗಷ್ಟೇ ಎಲ್ಲಾ ಬ್ಯಾಂಕುಗಳ ATM ವಹಿವಾಟಿನ ಶುಲ್ಕವನ್ನು ರೂ.21 ಪ್ರತಿ ಟ್ರಾನ್ಸಾಕ್ಷನ್ ಹೆಚ್ಚಿಸಲು ಅನುಮತಿ ನೀಡಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jul 19, 2021, 07:07 PM IST
  • ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ.
  • ATMಗಳಿಂದ ಕ್ಯಾಶ್ ಪಡೆಯುವುದು ಇನ್ಮುಂದೆ ಮತ್ತಷ್ಟು ದುಬಾರಿ.
  • ಇತರ ಚಾರ್ಜ್ ಗಳೂ ಕೂಡ ಹೆಚ್ಚಾಗಲಿವೆ.
ATM ನಿಂದ ಕ್ಯಾಶ್ ಪಡೆಯುವುದು ಇನ್ಮುಂದೆ ಮತ್ತಷ್ಟು ದುಬಾರಿ, ಹೊಸ ದರಗಳು ಎಂದಿನಿಂದ ಜಾರಿ? title=
ATM Transaction Charges (File Photo)

ನವದೆಹಲಿ: ATM Transaction Charges - ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇನ್ಮುಂದೆ ATM ಗಳಿಂದ ಹಣ ಹಿಂಪಡೆಯುವಿಕೆ ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳಿಂದ (Debit Card Transaction Charges) ನಡೆಸುವ ವಹಿವಾಟು ದುಬಾರಿಯಾಗಲಿದೆ. ಹೀಗಾಗಿ ಒಂದು ವೇಳೆ ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದುಕೊಂಡರೆ, ಬಂಕುಗಳು ಅವರಿಗೆ ಹೆಚ್ಚಿನ ಶುಲ್ಕ ವಿಧಿಸಲಿವೆ. ಏಕೆಂದರೆ ATMಗಳ ಪ್ರತಿ ವಹಿವಾಗಿನ ಶುಲ್ಕವನ್ನು ರೂ.21ಕ್ಕೆ ಹೆಚ್ಚಿಸುವ ಬ್ಯಾಂಕ್ ಗಳ ಪ್ರಸ್ತಾವನೆಗೆ ಇತ್ತೀಚಿಗೆ RBI ಅಂಗೀಕಾರ ನೀಡಿದೆ. ಈ ನೂತನ ದರಗಳು ಜನವರಿ 1, 2022ರಿಂದ ಅನ್ವಯಿಸಲಿವೆ.

ಪ್ರತಿ ವಹಿವಾಟಿಗೆ ಶುಲ್ಕ ಪಾವತಿಸಬೇಕಾಗಲಿದೆ
ಹಾಗೆ ನೋಡಿದರೆ ಪ್ರತಿ ತಿಂಗಳು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 5 ಉಚಿತ ವಹಿವಾಟುಗಳಿಗೆ ಅನುಮತಿಸುತ್ತವೆ. ಇದರಲ್ಲಿ ಹಣಕಾಸು ಅಥವಾ ಹಣಕಾಸೇತರ ವಹಿವಾಟುಗಳು ಶಾಮೀಲಾಗಿವೆ. ಇದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗ್ರಾಹಕರು ಶುಲ್ಕ ಪಾವತಿಸಬೇಕು. ಇದಕ್ಕಾಗಿ ಪ್ರತಿ ವಹಿವಾಟಿಗೆ (Credit Card Transaction Charges) ಇನ್ಮುಂದೆ ಹೆಚ್ಚುವರಿಯಾಗಿ ರೂ.20 ಪಾವತಿಸಬೇಕಾಗಲಿದೆ. ಬೇರೆ ಬ್ಯಾಂಕುಗಳ ATM ಗಳನ್ನು ಬಳಸುವ ಗ್ರಾಹಕರಿಗಾಗಿ ಮೆಟ್ರೋ ಸಿಟಿಯಲ್ಲಿ ಮೂರು ಹಾಗೂ ನಾನ್ ಮೆಟ್ರೋ ಸಿಟಿಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- ನಿಮ್ಮ ಬಳಿ ಈ ಹಳೆಯ ನೋಟುಗಳಿದ್ದರೆ ಸಿಗುತ್ತೆ 3 ಲಕ್ಷ ರೂ.: ಹೇಗೆಂದು ತಿಳಿಯಿರಿ...

ಶುಲ್ಕಕ್ಕೆ ಸಂಬಂಧಿಸಿದ ಈ ಹೊಸ ನಿಯಮಗಳು ಯಾವಾಗ ಜಾರಿಗೆ ಬರಲಿವೆ?
ATM ವಹಿವಾಟುಗಳ ಇಂಟರ್ ಚೇಂಜ್ ಶುಲ್ಕ ವನ್ನು ಪ್ರತಿ ಹಣಕಾಸಿನ ವಹಿವಾಟಿಗೆ ರೂ.15 ರಿಂದ ರೂ.17ಕ್ಕೆ ಹಾಗೂ ಹಣಕಾಸೇತರ ವಹಿವಾಟುಗಳಿಗೆ ರೂ.5 ರಿಂದ ರೂ. 6 ಕ್ಕೆ RBI ಹೆಚ್ಚಿಸಿದೆ. ಈ ದರಗಳು ಆಗಸ್ಟ್ 1, 2021 ರಿಂದ ಅನ್ವಯಿಸಲಿವೆ.  ಆರ್‌ಬಿಐ ಪ್ರಕಾರ, ಇಂಟರ್ಚೇಂಜ್ ಶುಲ್ಕವು ಕ್ರೆಡಿಟ್ ಕಾರ್ಡ್‌ಗಳು ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ವ್ಯಾಪಾರಿಗಳಿಗೆ ಬ್ಯಾಂಕುಗಳು ವಿಧಿಸುವ ಶುಲ್ಕವಾಗಿದೆ.

ಇದನ್ನೂ ಓದಿ- PM Kisan : ಯಾವಾಗ ಖಾತೆ ಸೇರಲಿದೆ 9ನೇ ಕಂತು ? ಇಲ್ಲಿದೆ ಸಂಪೂರ್ಣ ಮಾಹಿತಿ

SBI ಕೂಡ ಸೇವಾ ಶುಲ್ಕಗಳಲ್ಲಿ ಹೆಚ್ಚಳ ಮಾಡಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಜುಲೈ ಆರಂಭದಿಂದ ತನ್ನ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣವನ್ನು ಹಿಂಪಡೆಯುವ  ಸೇವಾ ಶುಲ್ಕಗಳನ್ನು ಪರಿಷ್ಕರಿಸಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಹಲವು ರೀತಿಯ ಶುಲ್ಕಗಳನ್ನು ಹೆಚ್ಚಿಸಿದೆ. ಎಸ್‌ಬಿಐ ಪ್ರಕಾರ, ಬಿಎಸ್‌ಬಿಡಿ ಖಾತೆದಾರರು  (BSBD Accounts)ಈಗ ಯಾವುದೇ ಸೇವಾ ಶುಲ್ಕವಿಲ್ಲದೆ ಕೇವಲ ನಾಲ್ಕು ಬಾರಿ ಶಾಖೆಗಳು ಮತ್ತು ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ. ಗ್ರಾಹಕರು ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿಎಟಿಎಂ ಅಥವಾ ಶಾಖೆಯಿಂದ ಹಣವನ್ನು ಹಿಂತೆಗೆದುಕೊಂಡರೆ, ನಂತರ ಅವರು ಪ್ರತಿ ವಹಿವಾಟಿಗೆ 15 ರೂ. ಸೇವಾ ಶುಲ್ಕ ಮತ್ತು ಜಿಎಸ್‌ಟಿಯಾಗಿ ಪಾವತಿಸಬೇಕಾಗುತ್ತದೆ. ಎಸ್‌ಬಿಐ ಹೊರತುಪಡಿಸಿ ಯಾವುದೇ ಎಟಿಎಂನಿಂದ ಹಣವನ್ನು ಹಿಂಪಡೆಯಲು ಇದೆ ನಿಯಮ ಅನ್ವಯಿಸಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-SBI ಗ್ರಾಹಕರೇ ಗಮನಿಸಿ! ಬ್ಯಾಂಕಿಂಗ್ ಸೇವೆಯನ್ನು ಮುಂದುವರಿಸಲು ತಕ್ಷಣವೇ ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News