Government schemes For Women: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಪ್ರತಿ ಕ್ಷೇತ್ರದಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಆದಾಗ್ಯೂ, ಇಂದಿಗೂ ಕೂಡ ಅನೇಕ ಸ್ಥಳಗಳಲ್ಲಿ ಮಹಿಳೆಯರಿಗೆ ಅರ್ಹವಾದ ಸ್ಥಾನ ಸಿಗುತ್ತಿಲ್ಲ. ಅವರು ತಮ್ಮ ಹಕ್ಕುಗಳಿಗಾಗಿ ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಸಾಮಾಜಿಕವಾಗಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಮತ್ತು ಅವರ ಕೊಡುಗೆಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ಕಾರವು ಮಹಿಳೆಯರನ್ನು ಬಲಿಷ್ಠರನ್ನಾಗಿಸಲು, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಮಹಿಳೆಯರ ಅಭಿವೃದ್ಧಿಗಾಗಿ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡಲು ಅವರ ಭವಿಷ್ಯವನ್ನು ಸದೃಢವಾಗಿಸಲು ಭಾರತ ಸರ್ಕಾರ ನಡೆಸುತ್ತಿರುವ ಯೋಜನೆಗಳು ಯಾವುವು. ಅವು ಮಹಿಳೆಯರಿಗೆ ಹೇಗೆ ಪ್ರಯೋಜನಕಾರಿ ಆಗಿವೆ ಎಂದು ತಿಳಿಯೋಣ...
ಸುಕನ್ಯಾ ಸಮೃದ್ಧಿ ಯೋಜನೆ ( Sukanya Samriddhi Yojane):
ಹೆಣ್ಣು ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಭಾರತ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಸ್ತುತ ಈ ಯೋಜನೆಗೆ ಶೇಕಡಾ 8.2 ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಪೋಷಕರು 10 ವರ್ಷದೊಳಗಿನ ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 250ರೂ. ನಿಂದ ಗರಿಷ್ಠ 1.5ಲಕ್ಷ ರೂ.ಗಳವರೆಗೆ ಠೇವಣಿ ಮಾಡಬಹುದು. ನಿಯಮಗಳ ಪ್ರಕಾರ, ಎಸ್ಎಸ್ವೈಯಲ್ಲಿ 15ವರ್ಷಗಳವರೆಗೆ ಹೂಡಿಕೆಮಾಡಬೇಕಾಗುತ್ತದೆ. ಈ ಖಾತೆ 21 ವರ್ಷಗಳಲ್ಲಿ ಪಕ್ವವಾಗುತ್ತದೆ. ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ಠೇವಣಿ ಮಾಡಿರುವ ಹಣವನ್ನು ಆಕೆಯ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆಗಾಗಿ ಖರ್ಚು ಮಾಡಬಹುದು.
ಇದನ್ನೂ ಓದಿ- Women's Day 2024: ಮಹಿಳೆಯರಿಗಾಗಿ 5 ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು
ಉಚಿತ ಹೊಲಿಗೆ ಯಂತ್ರ (Free sewing machine):
ಹೊಲಿಗೆ ಮತ್ತು ಕಸೂತಿಯಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೆ ತಂದಿದೆ. ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ದುರ್ಬಲವಾಗಿರುವ 20 ರಿಂದ 40 ವರ್ಷದೊಳಗಿನ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
ಪ್ರಧಾನಮಂತ್ರಿ ಉಜ್ವಲ ಯೋಜನೆ (Pradhan Mantri Ujwala Yojana):
ಬಡ ಕುಟುಂಬಗಳ ಮಹಿಳೆಯರಿಗೆ ಸೌದೆ ಒಲೆಯಿಂದ ಮುಕ್ತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಆರಂಭಿಸಿತು.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Savings):
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ವಿಶೇಷವಾಗಿ ಮಹಿಳೆಯರಿಗಾಗಿ ಪ್ರಾರಂಭಿಸಲಾದ ಠೇವಣಿ ಯೋಜನೆಯಾಗಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಒದಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಮಹಿಳೆಯರು 2 ಲಕ್ಷದವರೆಗೆ ಠೇವಣಿ ಇಡಬಹುದು. ಈ ಮೊತ್ತವನ್ನು ಎರಡು ವರ್ಷಗಳವರೆಗೆ ಠೇವಣಿ ಇಡಲಾಗುತ್ತದೆ. ಇದರಲ್ಲಿ ಮಹಿಳೆಯರು ಉತ್ತಮ ಬಡ್ಡಿದರದ ಲಾಭವನ್ನು ಪಡೆಯುತ್ತಾರೆ. ಪ್ರಸ್ತುತ, ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ- LPG Price Cut : ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಇಳಿಕೆ ! ಕೋಟ್ಯಾಂತರ ಗ್ರಾಹಕರಿಗೆ ಸಿಹಿ ಸುದ್ದಿ
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (Pradhan Mantri Matru Vandana Yojana):
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯು ಮಾತೃತ್ವ ಪ್ರಯೋಜನ ಯೋಜನೆಯಾಗಿದೆ. ಮಹಿಳೆಯರಲ್ಲಿ ಗರ್ಭಿಣಿ, ಬಾಣಂತಿಯ ಸಂದರ್ಭದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು 6,000 ರೂ.ಗಳ ಆರ್ಥಿಕ ನೆರವು ನೀಡುತ್ತದೆ. ಸರ್ಕಾರ ಈ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ. ಅರ್ಹ ಮಹಿಳೆಯರು ಮಾತ್ರ ಈ ಹಣವನ್ನು ಪಡೆಯುತ್ತಾರೆ. ಈ ಯೋಜನೆಗೆ ಗರ್ಭಿಣಿಯರ ವಯಸ್ಸು 19 ವರ್ಷಕ್ಕಿಂತ ಕಡಿಮೆ ಇರಬಾರದು. ಈ ಯೋಜನೆಯ ಮೊದಲ ಹಂತದಲ್ಲಿ 1000 ರೂ., ಎರಡನೇ ಹಂತದಲ್ಲಿ 2000 ರೂ. ಮತ್ತು ಮೂರನೇ ಹಂತದಲ್ಲಿ 2000 ರೂ.ಗಳನ್ನು ಗರ್ಭಿಣಿಯರಿಗೆ ನೀಡಲಾಗುತ್ತಿದ್ದು, ಕೊನೆಯ 1000 ರೂ.ಗಳನ್ನು ಸರ್ಕಾರದಿಂದ ಮಗು ಜನನದ ಸಮಯದಲ್ಲಿ ಆಸ್ಪತ್ರೆಗೆ ನೀಡಲಾಗುತ್ತದೆ.
ಬೇಟಿ ಬಚಾವೋ ಬೇಟಿ ಪಡಾವೋ (Beti Bachao Beti Padao):
ಹರಿಯಾಣದ ಪಾಣಿಪತ್ನಲ್ಲಿ 22 ಜನವರಿ 2015 ರಂದು ಪ್ರಧಾನಿಯವರು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಉದ್ದೇಶವು ಹೆಣ್ಣು ಲಿಂಗ ಅನುಪಾತದ ಕುಸಿತವನ್ನು ನಿಲ್ಲಿಸುವುದು ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವುದಾಗಿದೆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.