RBI Repo Rates Update : RBI ಇಂದು ಹಣಕಾಸು ನೀತಿ ಸಭೆಯ ನಿರ್ಧಾರವನ್ನು ಪ್ರಕಟಿಸಿದೆ.ಈ ಬಾರಿ ಕೂಡಾ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.ಸತತ 7ನೇ ಬಾರಿಗೆ ದರಗಳನ್ನು ಸ್ಥಿರವಾಗಿ ಇರಿಸಲಾಗಿದೆ.ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಬದಲಾಯಿಸಿದರೆ, ಅದು ನಿಮ್ಮ ಸಾಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ ನಿಮ್ಮ ಸಾಲದ EMI ಹೆಚ್ಚಾಗುತ್ತದೆ.ಹೋಮ್ ಲೋನ್,ಆಟೋ ಲೋನ್ ಅಥವಾ ಇನ್ನಾವುದೇ ರೀತಿಯ ಲೋನ್ ಅನ್ನು ತೆಗೆದುಕೊಂಡಿದ್ದರೆ, EMI ನಲ್ಲಿ ಬದಲಾವಣೆಯಾಗುತ್ತದೆ.
ರೆಪೊ ದರ ಸ್ಥಿರ :
ರೆಪೋ ದರಗಳನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸತತ 7ನೇ ಬಾರಿಗೆ ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನೀವು ಕೂಡಾ ಸಾಲವನ್ನು ತೆಗೆದುಕೊಂಡಿದ್ದರೆ, ನಿಮ್ಮ EMI ಎಷ್ಟು ಬದಲಾಗಿದೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
ಇದನ್ನೂ ಓದಿ : ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಇಷ್ಟವಾಗುತ್ತಿಲ್ಲವೇ ? ಹೀಗೆ ಬದಲಾಯಿಸಿಕೊಳ್ಳಿ ನಿಮ್ಮ ಫೋಟೋ
>> ನೀವು 20 ವರ್ಷಗಳ ಅವಧಿಗೆ 25 ಲಕ್ಷ ರೂ.ಗಳ ಗೃಹ ಸಾಲವನ್ನು ಪಡೆದುಕೊಂಡಿದ್ದು, ಶೇಕಡಾ 8.60 ರಷ್ಟು ಬಡ್ಡಿ ಪಾವತಿಸುತ್ತಿದ್ದೀರಿ ಎಂದು ಇಟ್ಟು ಕೊಳ್ಳೋಣ. ಈ ಪರಿಸ್ಥಿತಿಯಲ್ಲಿ ನಿಮ್ಮ ಮಾಸಿಕ EMI ಸುಮಾರು 21,854 ರೂ. ಆಗಿರುತ್ತದೆ. ರೆಪೊ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲದ ಕಾರಣ, ನಿಮ್ಮ ಸಾಲದ EMI ನಲ್ಲಿ ಕೂಡಾ ಯಾವುದೇ ಬದಲಾವಣೆ ಇರುವುದಿಲ್ಲ.
>> ಇದರ ಹೊರತಾಗಿ, ನೀವು 20 ವರ್ಷಗಳ ಅವಧಿಗೆ ಶೇಕಡಾ 8.60 ರ ದರದಲ್ಲಿ 40 ಲಕ್ಷ ಸಾಲವನ್ನು ತೆಗೆದುಕೊಂಡಿದ್ದರೆ, ಅದರ ಪ್ರಕಾರ ನಿಮ್ಮ ಇಎಂಐ 34,967 ರೂ. ಆಗಿರುತ್ತದೆ. ಇಲ್ಲಿ ಕೂಡಾ ನಿಮ್ಮ ಸಾಲದ EMI ಮೊದಲಿನಂತೆಯೇ ಇರುತ್ತದೆ.
ರಿಸರ್ವ್ ಬ್ಯಾಂಕ್ ನಿರ್ಧಾರದ ನಂತರ,ಹಣಕಾಸು ಕಂಪನಿಗಳು ಮತ್ತು ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಪರಿಶೀಲಿಸುತ್ತವೆ. ನಂತರ ಸಾಲದ ದರಗಳನ್ನು ಪರಿಷ್ಕರಿಸಲಾಗುತ್ತದೆ. ಆಗ ನಿಮ್ಮ ಸಾಲದ EMI ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ.
ಇದನ್ನೂ ಓದಿ : New EV: ಮಾರುಕಟ್ಟೆಗೆ ಲಗ್ಗೆ ಇಟ್ಟ ಮತ್ತೊಂದು ಇಲೆಕ್ಟ್ರಿಕ್ ದ್ವಿಚಕ್ರ ವಾಹನ, ರೆಂಜ್-ಬೆಲೆ ಎಷ್ಟು ಗೊತ್ತಾ?
ರೆಪೋ ದರಗಳಲ್ಲಿ ಹೆಚ್ಚಳ ಅಥವಾ ಇಳಿಕೆ ಬ್ಯಾಂಕ್ಗಳ ಸಾಲದ ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತದೆ. ಆರ್ಬಿಐ ರೆಪೊ ದರವನ್ನು ಹೆಚ್ಚು ಮಾಡಿದರೆ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗುತ್ತವೆ. ಅದೇ ವೇಳೆ, ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಕಡಿತಗೊಳಿಸಿದರೆ,ಸಾಲದ ಬಡ್ಡಿ ದರಗಳು ಸಹ ಕಡಿಮೆಯಾಗುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ