Dearness Allowance Hike : ನಿರಂತರವಾಗಿ ಹಣದುಬ್ಬರ ಎದುರಿಸುತ್ತಿರುವ ರೈಲ್ವೆ ನೌಕರರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ. ರೈಲ್ವೆ ಮಂಡಳಿಯು ನೌಕರರ ತುಟ್ಟಿಭತ್ಯೆಯನ್ನು ಒಂದೇ ಬಾರಿಗೆ ಶೇ. 14 ರಷ್ಟು ಹೆಚ್ಚಿಸಿದೆ. ಈ ತುಟ್ಟಿಭತ್ಯೆ ಹೆಚ್ಚಳವನ್ನು ಎರಡು ಪಟ್ಟು ಆಧಾರದ ಮೇಲೆ ಮಾಡಲಾಗಿದೆ.
10 ತಿಂಗಳ ಬಾಕಿಯೂ ದೊರೆಯಲಿದೆ
ಈ ಡಿಎ ಹೆಚ್ಚಳ ಅನ್ವಯವಾಗುವ ನೌಕರರು ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಈ ನೌಕರರಿಗೆ 10 ತಿಂಗಳ ಡಿಎ ಹೆಚ್ಚಳ ಬಾಕಿಯನ್ನು ಸಹ ನೀಡುವಂತೆ ತಿಳಿಸಲಾಗಿದೆ. 6 ನೇ ವೇತನ ಆಯೋಗದ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಶೇ. 7 ರಷ್ಟು ಎರಡು ಭಾಗಗಳಲ್ಲಿ ಈ ಡಿಎ ಹೆಚ್ಚಳ ಅನ್ವಯಿಸುತ್ತದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಇದನ್ನೂ ಓದಿ : ಈ ದಿನ ಖಾತೆ ಸೇರಲಿದೆ ಪಿಎಂ ಕಿಸಾನ್ ನಿಧಿಯ 2000 ರೂಪಾಯಿ .! ಕೃಷಿ ಸಚಿವರ ಘೋಷಣೆ
ಡಿಎ ಶೇ.203ರಷ್ಟು ಏರಿಕೆಯಾಗಿದೆ
ಜುಲೈ 1, 2021 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ 7 ರಷ್ಟು ಮತ್ತು ಜನವರಿ 1, 2022 ರಿಂದ ಶೇಕಡಾ 7 ರಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ, ಆರನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುವ ನೌಕರರು 189 ಪ್ರತಿಶತ ಡಿಎ ಪಡೆಯುತ್ತಿದ್ದಾರೆ. ಈ ಉದ್ಯೋಗಿಗಳ ಡಿಎ ಜುಲೈ 1, 2021 ರಿಂದ 7 ಪ್ರತಿಶತದಷ್ಟು ಜಾರಿಗೆ ಬರುವಂತೆ ಶೇಕಡಾ 196 ಕ್ಕೆ ಹೆಚ್ಚಾಗುತ್ತದೆ. ಅಂತೆಯೇ, ಜನವರಿ 1, 2022 ರಿಂದ ಶೇ. 7 ರಷ್ಟು ಹೆಚ್ಚಿಸಿದಾಗ, ಇದು ಶೇ. 203 ಕ್ಕೆ ಹೆಚ್ಚಾಗುತ್ತದೆ, ಉದ್ಯೋಗಿಗಳು 10 ತಿಂಗಳ ಬಾಕಿ ವೇತನದೊಂದಿಗೆ ಮೇ ತಿಂಗಳ ಸಂಬಳವನ್ನು ಪಡೆಯುತ್ತಾರೆ.
ರೈಲ್ವೆ ನೌಕರರಿಗೆ ಡಬಲ್ ಲಾಭ
ರೈಲ್ವೆ ಮಂಡಳಿಯ ಈ ನಿರ್ಧಾರದಿಂದ ನೌಕರರಿಗೆ ದುಪ್ಪಟ್ಟು ಲಾಭವಾಗಲಿದೆ. ಹಣಕಾಸು ನಿರ್ದೇಶನಾಲಯ ಮತ್ತು ರೈಲ್ವೆ ಸಚಿವಾಲಯದ ಅನುಮೋದನೆಯ ನಂತರ ರೈಲ್ವೆ ಮಂಡಳಿಯು ನಿರ್ಧಾರವನ್ನು ಜಾರಿಗೆ ತಂದಿದೆ. ಈ ಹಿಂದೆ ಮಾರ್ಚ್ನಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸಲಾಗಿತ್ತು. 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆದ ಲಕ್ಷಾಂತರ ನೌಕರರು ಇದರ ಲಾಭ ಪಡೆದಿದ್ದಾರೆ.
7ನೇ ವೇತನ ಆಯೋಗದಲ್ಲಿ 34% ಡಿಎ
ಮೂರು ಶೇಕಡಾ ಹೆಚ್ಚಳದ ನಂತರ, ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 31 ರಿಂದ ಶೇಕಡಾ 34 ಕ್ಕೆ ಹೆಚ್ಚಿಸಲಾಯಿತು. ಈ ನೌಕರರ ಕನಿಷ್ಠ ಮೂಲ ವೇತನ 18 ಸಾವಿರ ರೂ. ಸರ್ಕಾರದ ಪರವಾಗಿ 7ನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಿ, ಮೂಲ ಕನಿಷ್ಠ ವೇತನವನ್ನು 7000 ರಿಂದ 18000 ರೂಪಾಯಿಗಳಿಗೆ ಹೆಚ್ಚಿಸಲಾಯಿತು.
ಇದನ್ನೂ ಓದಿ : Petrol-Diesel Price Today: ರಾಜ್ಯದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.