Railway New Rules: ಅಗ್ಗದ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿರುವ ಭಾರತೀಯ ರೈಲ್ವೆ ಇದೀಗ ಕೌಂಟರ್‌ನಿಂದ ಟಿಕೆಟ್ ಖರೀದಿಸುವ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ನೀಡಿರುವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕೌಂಟರ್‌ಗಳಲ್ಲಿ ಖರೀದಿಸಿದ ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡಲು ಟಿಕೆಟ್ ಕೌಂಟರ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದು ಇದಕ್ಕಾಗಿ ಸುಲಭ ಮಾರ್ಗವನ್ನು ತಿಳಿಸಿದೆ.
ಹೌದು, ಟಿಕೆಟ್ ಕೌಂಟರ್‌ನಲ್ಲಿ ಖರೀದಿಸಿದ ರೈಲ್ವೆ ಟಿಕೆಟ್‌ಗಳನ್ನು ಒಂದೊಮ್ಮೆ ರದ್ದುಗೊಳಿಸಲು ಬಯಸಿದರೆ ಐಆರ್‌ಸಿಟಿಸಿ ಇದಕ್ಕಾಗಿ ಆನ್‌ಲೈನ್ ನಲ್ಲಿಯೇ ವ್ಯವಸ್ಥೆಯನ್ನು ಕಲ್ಪಿಸಿದೆ. ವಾಸ್ತವವಾಗಿ, ಮೊದಲು ಟಿಕೆಟ್ ಕೌಂಟರ್‌ಗಳಲ್ಲಿ ಖರೀದಿಸಿದ ಟಿಕೆಟ್ ಅನ್ನು ಕೌಂಟರ್‌ನಲ್ಲಿಯೇ ಹೋಗಿ ಕ್ಯಾನ್ಸಲ್ ಮಾಡಬೇಕಿತ್ತು. ಆದರೆ, ಇದೀಗ ಐಆರ್‌ಸಿಟಿಸಿ ಈ ವ್ಯವಸ್ಥೆಯನ್ನು ಸುಲಭಗೊಳಿಸಿದ್ದು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಕೌಂಟರ್ ಟಿಕೆಟ್ ರದ್ದುಗೊಳಿಸಬಹುದಾಗಿದೆ. ಸಮಯಕ್ಕೆ ಅನುಗುಣವಾಗಿಯೇ ಕ್ಯಾನ್ಸಲೇಷನ್ ಶುಲ್ಕ ಅನ್ವಯಿಸುತ್ತದೆ.
ಇದನ್ನೂ ಓದಿ- ತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ' ಪ್ರಮುಖ ಅಂಶಗಳು..!
ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ರೈಲ್ವೆ ಕೌಂಟರ್ ಟಿಕೆಟ್ ರದ್ದು ಗೊಳಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:-
ಹಂತ-1: ಮೊದಲಿಗೆ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಇದರಲ್ಲಿ ರೈಲುಗಳ ವಿಭಾಗಕ್ಕೆ ಹೋಟಿ ಟಿಕೆಟ್ ಕ್ಯಾನ್ಸಲ್ ಆಯ್ಕೆಗೆ ಹೋಗಿ ಕೌಂಟರ್ ಟಿಕೆಟ್ ಆಯ್ಕೆ ಆರಿಸಿ.
ಹಂತ-2: ನಿಗದಿತ ಜಾಗದಲ್ಲಿ ಪಿಎನ್‌ಆರ್ ಸಂಖ್ಯೆ, ರೈಲು ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಂತಹ ಅಗತ್ಯ ಮಾಹಿತಿಯಗಳನ್ನು ನಮೂದಿಸಿ.
ಹಂತ-3: ಸಂಬಂದಿತ ಪೆಟ್ಟಿಗೆಯನ್ನು ತೀಕ್ ಮಾಡಿ ಟಿಕೆಟ್ ರದ್ದತಿ ಪ್ರಕ್ರಿಯೆಯನ್ನು ದೃಢೀಕರಿಸಿ, ಸಲ್ಲಿಸು ಆಯ್ಕೆಯನ್ನು ಆರಿಸಿ.
ಹಂತ-4: ರೈಲ್ವೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ನಮೂಡಿಸಲಾದ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ನಮೂದಿಸಿ ಟಿಕೆಟ್ ಕ್ಯಾನ್ಸಲೇಷನ್ ದೃಢೀಕರಿಸಿ.
ಹಂತ-5: ದೃಢೀಕರಣದ ಬಳಿಕ ಸ್ಕ್ರೀನ್ ಮೇಲೆ ಪಿಎನ್‌ಆರ್ ವಿವರಗಳನ್ನು ಪ್ರದರ್ಶಿಸಲಾಗುತ್ತದೆ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಟಿಕೆಟ್ ರದ್ದು ಮಾಡಿ ಎಂಬ ಆಯ್ಕೆಯನ್ನು ಆರಿಸಿ.
ಹಂತ-6: ಇದರಲ್ಲಿ ಒಟ್ಟು ಮರುಪಾವತಿ ಮೊತ್ತವನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ.
ಹಂತ-7: ಟಿಕೆಟ್ ಕ್ಯಾನ್ಸಲ್ ಆದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಿಎನ್‌ಆರ್ ಸಂಖ್ಯೆ ಹಾಗೂ ಮರುಪಾವತಿ ವಿವರಗಳನ್ನು ಎಸ್‌ಎಮ್‌ಎಸ್ ಮಾಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಹಣ ರೀಫಂಡ್ ಸಹ ಆಗುತ್ತದೆ.
ಇದನ್ನೂ ಓದಿ- ಬಸ್ ದರದ ಬೆನ್ನಲ್ಲೇ ಮೆಟ್ರೋ ದರವೂ ಏರಿಕೆ: ಚಿಂತೆಬಿಡಿ, ಅಧಿಕ ಮೈಲೇಜ್ ನೀಡುವ ಬೈಕ್‌ಗಳು ಅಗ್ಗದ ಬೆಲೆಯಲ್ಲೇ ಲಭ್ಯ.!
ಕೌಂಟರ್ ಟಿಕೆಟ್ ಕ್ಯಾನ್ಸಲ್ ಮಾಡುವ ಮುನ್ನ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ:
* ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡಲು ಬುಕಿಂಗ್ ವೇಳೆ ನಮೂದಿಸಲಾದ ಮಾನ್ಯ ಮೊಬೈಲ್ ಸಂಖ್ಯೆಯನ್ನು ಒದಗಿಸುವುದು ಅಗತ್ಯ.
* ಟ್ರೈನ್ ಹೊರಡುವ ನಾಲ್ಕು ಗಂಟೆಗಳ ಮೊದಲು ಕನ್ಫರ್ಮ್ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು.
* ಆರ್‌ಎಸಿ//ವೇಟ್‌ಲಿಸ್ಟ್ ಟಿಕೆಟ್‌ಗಳನ್ನು ಟ್ರೈನ್ ಹೊರಡುವ ಅರ್ಧಗಂಟೆ ಮೊದಲು ಆನ್‌ಲೈನ್‌ನಲ್ಲಿ ಕ್ಯಾನ್ಸಲ್ ಮಾಡಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.