ನವದೆಹಲಿ : Home Loan Rates : ಆರ್ಬಿಐ (RBI) ತನ್ನ ಸಾಲ ನೀತಿಯಲ್ಲಿ ಬಡ್ಡಿದರಗಳನ್ನು ಬದಲಾಯಿಸದಿದ್ದರೂ, ಅನೇಕ ಸರ್ಕಾರಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ದರದಲ್ಲಿ ಸಾಲವನ್ನು ನೀಡುತ್ತಿವೆ. ಈಗ ಬ್ಯಾಂಕ್ ಆಫ್ ಬರೋಡಾ (Bank of Baroda) ಸಾಲದ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ನಿಧಿ ಆಧಾರಿತ ಸಾಲ ದರವನ್ನು (MCLR) ಶೇಕಡಾ 0.05 ರಷ್ಟು ಬ್ಯಾಂಕ್ ಕಡಿತಗೊಳಿಸಿದೆ.
ಬ್ಯಾಂಕ್ ಆಫ್ ಬರೋಡಾ ನೀಡುತ್ತಿದೆ ಕಡಿಮೆ ದರದಲ್ಲಿ ಸಾಲ :
ಬ್ಯಾಂಕ್ ಆಫ್ ಬರೋಡಾ (Bank of Baroda ) ಸಾಲದ ಮೇಲಿನ ಬಡ್ಡಿ ದರವನ್ನು ಕಡಿತ ಗೊಳಿಸಿದೆ. ಹಿದ ದರ ರ ಜೂನ್ 12 ರಿಂದ ಜಾರಿಗೆ ಬರಲಿದೆ. ಬಡ್ಡಿದರ (Interset rate) ಕಡಿತಗೊಳಿಸಿದ ನಂತರ ಇದೀಗ ಬ್ಯಾಂಕ್ ಆಫ್ ಬರೋಡಾದ 1 ವರ್ಷದ ಎಂಸಿಎಲ್ಆರ್ (MCLR ) ಶೇಕಡಾ 7.35 ರಷ್ಟಾಗಲಿದೆ.ಇದಲ್ಲದೆ, 6 ತಿಂಗಳು ಮತ್ತು 3 ತಿಂಗಳ ಅವಧಿಗೆ ಎಂಸಿಎಲ್ಆರ್ ಅನ್ನು 0.05 ಶೇಕಡಾದಷ್ಟು ಕಡಿತಗೊಳಿಸಿ ಶೇ 7.20 ಮತ್ತು 7.10 ಶೇಕಡಾದಷ್ಟು ಮಾಡಲಾಗಿದೆ.
ಇದನ್ನೂ ಓದಿ : Petrol Price Today : ಮತ್ತೆ ಏರಿಕೆಯಾದ ಪೆಟ್ರೋಲ್ ಬೆಲೆ, ತಿಳಿಯಿರಿ ಇಂದಿನ ದರ
ಪಿಎನ್ಬಿ ಕೂಡ ದರಗಳನ್ನು ಕಡಿಮೆಗೊಳಿಸಿತ್ತು :
ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB ) ಮತ್ತು ಕೆನರಾ ಬ್ಯಾಂಕ್ ಕೂಡ ಎಂಸಿಎಲ್ಆರ್ ದರವನ್ನು ಕಡಿತಗೊಳಿಸಿತ್ತು. ಪಿಎನ್ಬಿ ಎಂಸಿಎಲ್ಆರ್ ಅನ್ನು ಶೇಕಡಾ 0.05 ರಷ್ಟು ಕಡಿತಗೊಳಿಸಿದ್ದು, ಹೊಸ ದರಗಳು ಜೂನ್ 1ರಿಂದಲೇ ಜಾರಿಗೆ ಬಂದಿವೆ. ಪಿಎನ್ಬಿ 6 ತಿಂಗಳ 3 ತಿಂಗಳ ಅವಧಿಯಲ್ಲಿ ಎಂಸಿಎಲ್ಆರ್ ಅನ್ನು ಶೇಕಡಾ 0.10 ರಷ್ಟು ಕಡಿತಗೊಳಿಸಿತ್ತು.
ಕೆನರಾ ಬ್ಯಾಂಕ್ ಸಹ ಸಾಲ ಕೂಡಾ ಈಗ ಅಗ್ಗ :
ಕೆನರಾ ಬ್ಯಾಂಕ್ (Canara Bank) ನಿಧಿಯ ಆಧಾರಿತ ಸಾಲ ದರ (MCLR) ಮತ್ತು ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (RLLR)ಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಹೊಸ ದರಗಳು ಈ ವರ್ಷದ ಮೇ 21 ರಿಂದಲೇ ಜಾರಿಗೆ ಬಂದಿವೆ.
ಇದನ್ನೂ ಓದಿ : ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.