Retail Inflation Rate: 25 ತಿಂಗಳ ಅತ್ಯಂತ ಕನಿಷ್ಠ ಮಟ್ಟಕ್ಕೆ ಜಾರಿದ ಚಿಲ್ಲರೆ ಹಣದುಬ್ಬರ, ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ

Retail Inflation In May 2023: ಮೇ 2023 ರಲ್ಲಿ, ಚಿಲ್ಲರೆ ಹಣದುಬ್ಬರ ಸುಮಾರು 25 ತಿಂಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಆಹಾರ ಉತ್ಪನ್ನಗಳು ಮತ್ತು ಇಂಧನ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಈ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ.  

Written by - Nitin Tabib | Last Updated : Jun 12, 2023, 07:36 PM IST
  • ಕಳೆದ ತಿಂಗಳು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖವಾಗಿ ಆಹಾರ ಉತ್ಪನ್ನಗಳು ಮತ್ತು ಇಂಧನ ಬೆಲೆಯಲ್ಲಿನ ಇಳಿಕೆ ಕಾರಣವಾಗಿತ್ತು.
  • ಆಹಾರ ಹಣದುಬ್ಬರವು ಮೇ ತಿಂಗಳಲ್ಲಿ ಶೇ.2.91 ರಷ್ಟಿದ್ದು, ಏಪ್ರಿಲ್‌ನಲ್ಲಿ ಶೇ. 3.84 ರಷ್ಟಿತ್ತು.
  • ಸಿಪಿಐ ಸೂಚ್ಯಂಕದಲ್ಲಿ ಆಹಾರ ಉತ್ಪನ್ನಗಳ ಪಾಲು ಅರ್ಧದಷ್ಟಿದೆ.
  • ಇದಲ್ಲದೆ, ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರವು ಶೇ.4.64 ಶೇಕಡಾಕ್ಕೆ ಇಳಿದಿದ್ದರೆ, ಏಪ್ರಿಲ್‌ನಲ್ಲಿ ಇದು ಶೇ. 5.52 ರಷ್ಟಿತ್ತು.
Retail Inflation Rate: 25 ತಿಂಗಳ ಅತ್ಯಂತ ಕನಿಷ್ಠ ಮಟ್ಟಕ್ಕೆ ಜಾರಿದ ಚಿಲ್ಲರೆ ಹಣದುಬ್ಬರ, ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ title=

Retail Inflation Eases In May 2023: ಹಣದುಬ್ಬರದ ವಿಷಯದಲ್ಲಿ ಶ್ರೀಸಾಮಾನ್ಯರಿಗೆ ಒಂದು ನೆಮ್ಮದಿಯ ಸುದ್ದಿ ಪ್ರಕಟಗೊಂಡಿದೆ. ಮೇ 2023 ರಲ್ಲಿ, ಚಿಲ್ಲರೆ ಹಣದುಬ್ಬರ ಸುಮಾರು 25 ತಿಂಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಆಹಾರ ಉತ್ಪನ್ನಗಳು ಮತ್ತು ಇಂಧನ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಹಣದುಬ್ಬರ ಕಡಿಮೆಯಾಗಿದೆ ಎನ್ನಲಾಗಿದೆ. ಚಿಲ್ಲರೆ ಹಣದುಬ್ಬರವು 25 ತಿಂಗಳ ಕನಿಷ್ಠ ಮಟ್ಟವಾದ ಶೇ.4.25ಕ್ಕೆ ಇಳಿದಿದೆ. ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಈ ಮಾಹಿತಿ ನೀಡಲಾಗಿದೆ.

ದತ್ತಾಂಶಗಳನ್ನು ಬಿಡುಗಡೆ ಮಾಡಿದ ಸರ್ಕಾರ
ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಮೇ 2023 ರಲ್ಲಿ ಚಿಲ್ಲರೆ ಹಣದುಬ್ಬರವು ಶೇ. 4.25 ರಷ್ಟಕ್ಕೆ ತಲುಪಿದ್ದು, ಇದು ಏಪ್ರಿಲ್ 2021 ರಲ್ಲಿ ಇದ್ದ ಹಣದುಬ್ಬರಕ್ಕಿಂತಲೂ ಕಡಿಮೆ ಮಟ್ಟವಾಗಿದೆ. ಏಪ್ರಿಲ್ 2021 ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.23 ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಏಪ್ರಿಲ್, 2023 ರಲ್ಲಿ ಶೇಕಡಾ 4.7 ರಷ್ಟಿತ್ತು. ಅದೇ ವೇಳೆ, ಒಂದು ವರ್ಷದ ಹಿಂದೆ ಮೇ 2022 ರಲ್ಲಿ, ಚಿಲ್ಲರೆ ಹಣದುಬ್ಬರವು ಶೇಕಡಾ 7.04 ರ ಮಟ್ಟದಲ್ಲಿತ್ತು.

ಇದನ್ನೂ ಓದಿ-RBI ರೆಪೋ ದರಗಳನ್ನು ಯಾವಾಗ ಕಡಿತಗೊಳಿಸಲಿದೆ? ಈ ಸುದ್ದಿ ಓದಿ

ಆರ್ಬಿಐ ಇದನ್ನು ಶೇ.4 ರಷ್ಟು ಸ್ಥಿರವಾಗಿರಿಸುವ ಗುರಿ ಹೊಂದಿದೆ
ಈ ಮೂಲಕ ಚಿಲ್ಲರೆ ಹಣದುಬ್ಬರವು ಸತತ ನಾಲ್ಕನೇ ತಿಂಗಳಿಗೂ ಇಳಿಕೆ ಕಂಡಿದೆ. ಇದರೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಚಿಲ್ಲರೆ ಹಣದುಬ್ಬರವು ತೃಪ್ತಿಕರ ಮಟ್ಟದಲ್ಲಿರುವುದು ಇದು ಸತತ ಮೂರನೇ ತಿಂಗಳಾಗಿದೆ. ಸರ್ಕಾರವು ರಿಸರ್ವ್ ಬ್ಯಾಂಕ್‌ಗೆ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2 ರ ದೋಷದೊಂದಿಗೆ ಶೇಕಡಾ 4 ರಷ್ಟು ಇರಿಸುವ ಜವಾಬ್ದಾರಿಯನ್ನು ವಹಿಸಿದೆ.

ಇದನ್ನೂ ಓದಿ-Rajnath Singh: 2027 ರವರೆಗೆ ಭಾರತ ವಿಶ್ವದ ಟಾಪ್-3 ಅರ್ಥವ್ಯವಸ್ಥೆಗಳಲ್ಲಿ ಒಂದಾಗಲಿದೆ ಎಂದ ರಾಜನಾಥ್ ಸಿಂಗ್

ಕಳೆದ ತಿಂಗಳಲ್ಲೂ ಕುಸಿತ ಕಂಡಿತ್ತು
ಕಳೆದ ತಿಂಗಳು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖವಾಗಿ ಆಹಾರ ಉತ್ಪನ್ನಗಳು ಮತ್ತು ಇಂಧನ ಬೆಲೆಯಲ್ಲಿನ ಇಳಿಕೆ ಕಾರಣವಾಗಿತ್ತು. ಆಹಾರ ಹಣದುಬ್ಬರವು ಮೇ ತಿಂಗಳಲ್ಲಿ ಶೇ.2.91 ರಷ್ಟಿದ್ದು, ಏಪ್ರಿಲ್‌ನಲ್ಲಿ ಶೇ. 3.84 ರಷ್ಟಿತ್ತು. ಸಿಪಿಐ ಸೂಚ್ಯಂಕದಲ್ಲಿ ಆಹಾರ ಉತ್ಪನ್ನಗಳ ಪಾಲು ಅರ್ಧದಷ್ಟಿದೆ. ಇದಲ್ಲದೆ, ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರವು ಶೇ.4.64 ಶೇಕಡಾಕ್ಕೆ ಇಳಿದಿದ್ದರೆ, ಏಪ್ರಿಲ್‌ನಲ್ಲಿ ಇದು ಶೇ. 5.52 ರಷ್ಟಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News