SBI Alert: ಸ್ಟೇಟ್ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ ಅಡಚಣೆ! ನಿಮ್ಮ ಪ್ರಮುಖ ಕೆಲಸವನ್ನು ತಕ್ಷಣ ನಿರ್ವಹಿಸಿ

SBI Alert: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಖಾತೆಯನ್ನು ಹೊಂದಿದ್ದರೆ ಬ್ಯಾಂಕಿಗೆ ಸಂಬಂಧಿಸಿದ ನಿಮ್ಮ ಅಗತ್ಯ ಕೆಲಸಗಳನ್ನು ಈಗಲೇ ಪೂರ್ಣಗೊಳಿಸಿ.  

Written by - Yashaswini V | Last Updated : May 7, 2021, 09:30 AM IST
  • ನೆಟ್‌ವರ್ಕ್ ವಿಷಯದಲ್ಲಿ ಎಸ್‌ಬಿಐ ಅತಿದೊಡ್ಡ ಬ್ಯಾಂಕ್ ಆಗಿದೆ
  • ಎಸ್‌ಬಿಐ ದೇಶಾದ್ಯಂತ 22,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ
  • ದೇಶಾದ್ಯಂತ 57,889 ಕ್ಕೂ ಹೆಚ್ಚು ಎಸ್‌ಬಿಐ ಎಟಿಎಂಗಳಿವೆ
SBI Alert: ಸ್ಟೇಟ್ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ ಅಡಚಣೆ! ನಿಮ್ಮ ಪ್ರಮುಖ ಕೆಲಸವನ್ನು ತಕ್ಷಣ ನಿರ್ವಹಿಸಿ title=
ಎಸ್‌ಬಿಐ ಡಿಜಿಟಲ್ ಸೇವೆಗಳಲ್ಲಿ ವ್ಯತ್ಯಯ

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಖಾತೆಯನ್ನು ಹೊಂದಿದ್ದರೆ ಬ್ಯಾಂಕಿಗೆ ಸಂಬಂಧಿಸಿದ ನಿಮ್ಮ ಅಗತ್ಯ ಕೆಲಸಗಳನ್ನು ಈಗಲೇ ಪೂರ್ಣಗೊಳಿಸಿ.  ಏಕೆಂದರೆ ಇಂದು ರಾತ್ರಿ ನೀವು ಆನ್‌ಲೈನ್ ವಹಿವಾಟಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಸ್‌ಬಿಐ ಈ ಅಪ್‌ಗ್ರೇಡ್‌ ಬಗ್ಗೆ ಹಾಗೂ ಇದರಿಂದ ಆನ್ಲೈನ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸುವುದರಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.  

ಎಸ್‌ಬಿಐ ಡಿಜಿಟಲ್ ಸೇವೆಗಳನ್ನು ಇಂದು ಅಡಚಣೆ:
ಎಸ್‌ಬಿಐ ಮತ್ತೊಮ್ಮೆ ತನ್ನ ಡಿಜಿಟಲ್ ಬ್ಯಾಂಕಿಂಗ್ (Digital Banking) ಪ್ಲಾಟ್‌ಫಾರ್ಮ್ ಅನ್ನು ಅಪ್‌ಗ್ರೇಡ್ ಮಾಡುತ್ತಿದೆ, ಈ ಕಾರಣದಿಂದಾಗಿ ಅದರ ಪರಿಣಾಮವು ಅನೇಕ ಡಿಜಿಟಲ್ ಸೇವೆಗಳ ಮೇಲೆ ಕಂಡುಬರುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್‌ನಿಂದ ಹಿಡಿದು ಮೊಬೈಲ್ ಅಪ್ಲಿಕೇಶನ್‌ಗಳವರೆಗೆ ಎಲ್ಲವೂ ಸುಮಾರು 4 ಗಂಟೆಗಳ ಕಾಲ ಸ್ಥಗಿತಗೊಳ್ಳುತ್ತವೆ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಇದರಲ್ಲಿ ಬ್ಯಾಂಕ್ 2021 ರ ಮೇ 7 ರಂದು 22:15 ಗಂಟೆಯಿಂದ 2021 ರ ಮೇ 8 ರಂದು 1:45 ಗಂಟೆಯವರೆಗೆ ನಾವು ನಿರ್ವಹಣಾ ಕಾರ್ಯಗಳನ್ನು ಮಾಡುತ್ತೇವೆ ಎಂದು ಹೇಳಿದೆ. ಈ ಸಮಯದಲ್ಲಿ INB / YONO / YONO Lite / UPI ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಲಾಗಿದೆ.

ಇದನ್ನೂ ಓದಿ - SBI Alert: ಮೇ 31ರವರೆಗೆ ಈ ಕೆಲಸ ಮಾಡಿಲ್ಲ ಅಂದ್ರೆ Freeze ಆಗುತ್ತೆ ಖಾತೆ

ಆನ್‌ಲೈನ್ ಸೇವೆಗಳು :
ಇದರರ್ಥ ನೀವು ಇಂದು ರಾತ್ರಿ 10:15 ರಿಂದ ನಾಳೆ ಮುಂಜಾನೆ 1:45 ರವರೆಗೆ ಯಾವುದೇ ಡಿಜಿಟಲ್ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೂ ಮೊದಲು ಏಪ್ರಿಲ್ ಆರಂಭದಲ್ಲಿ ನಿರ್ವಹಣಾ ನಿಮಿತ್ತ ಎಸ್‌ಬಿಐನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳಾದ ಯೋನೊ (Yono), ಯೋನೊ ಲೈಟ್, ಇಂಟರ್ನೆಟ್ ಬ್ಯಾಂಕಿಂಗ್, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಸ್ಥಗಿತಗೊಳಿಸಲಾಗಿತ್ತು. 

ಇದನ್ನೂ ಓದಿ - SBI ಗ್ರಾಹಕರಿಗೆ ದೊಡ್ಡ ಪರಿಹಾರ! ಈ ಕೆಲಸಕ್ಕಾಗಿ ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲ

ಎಸ್‌ಬಿಐ 22,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ:
ಎಸ್‌ಬಿಐ ದೇಶಾದ್ಯಂತ 22,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ದೇಶಾದ್ಯಂತ 57,889 ಕ್ಕೂ ಹೆಚ್ಚು ಎಟಿಎಂಗಳಿವೆ. ಅಂದರೆ, ನೆಟ್‌ವರ್ಕ್ ವಿಷಯದಲ್ಲಿ ಎಸ್‌ಬಿಐ ಅತಿದೊಡ್ಡ ಬ್ಯಾಂಕ್ ಆಗಿದೆ. 31 ಡಿಸೆಂಬರ್ 2020 ರ ಹೊತ್ತಿಗೆ, ಎಸ್‌ಬಿಐ 8.5 ಕೋಟಿ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು 1.9 ಕೋಟಿ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರನ್ನು ಹೊಂದಿದೆ. ಯುಪಿಐ ಬಳಕೆದಾರರ ಸಂಖ್ಯೆ 135 ಮಿಲಿಯನ್ಗಿಂತ ಹೆಚ್ಚು. ಪ್ರಸ್ತುತ, ಯೋನೊ 35 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News