Post Office Scheme: ಈ ಯೋಜನೆಯಲ್ಲಿ ₹5000 ಠೇವಣಿ ಇಟ್ಟರೆ ₹28,72,848 ಹಣ ಪಡೆಯಬಹುದು!

Post Office Scheme: ಈಗ ಶೇಕಡಾ 8 ರ ಬದಲಿಗೆ, ಶೇಕಡಾ 8.2 ರ ದರದಲ್ಲಿ SSY ನಲ್ಲಿ ಬಡ್ಡಿಯನ್ನು ನೀಡಲಾಗುವುದು.   

Written by - Chetana Devarmani | Last Updated : Jan 14, 2024, 09:34 AM IST
  • ಪೋಸ್ಟ್‌ ಆಫಿಸ್‌ ಬಂಪರ್‌ ಯೋಜನೆ
  • ಶೇಕಡಾ 8.2 ರ ದರದಲ್ಲಿ ಬಡ್ಡಿ
  • ಹೆಣ್ಣು ಮಕ್ಕಳ ಭವಿಷ್ಯಕ್ಕೆ ಪ್ರಯೋಜನಕಾರಿ
Post Office Scheme: ಈ ಯೋಜನೆಯಲ್ಲಿ ₹5000 ಠೇವಣಿ ಇಟ್ಟರೆ ₹28,72,848 ಹಣ ಪಡೆಯಬಹುದು!   title=
Post Office Scheme

Sukanya Samriddhi Yojana: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ನಡೆಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯ (ಎಸ್‌ಎಸ್‌ವೈ) ಲ್ಲಿ ಹೂಡಿಕೆ ಮಾಡುವ ಮೂಲಕ ನೀವೂ ಸಾಕಷ್ಟು ಲಾಭವನ್ನು ಪಡೆಯಬಹುದು. ಈಗ ಈ ಯೋಜನೆಯಲ್ಲಿ ಶೇಕಡಾ 8 ರ ಬದಲಿಗೆ ಶೇಕಡಾ 8.2 ರ ದರದಲ್ಲಿ ಬಡ್ಡಿ ನೀಡಲಾಗುವುದು. ನಿಮ್ಮ ಮಗಳ ವಯಸ್ಸು 10 ವರ್ಷದೊಳಗಿದ್ದರೆ, ನೀವು ಈ ಯೋಜನೆಯಲ್ಲಿ ಹಣವನ್ನು ಅವಳ ಹೆಸರಿನಲ್ಲಿ ಠೇವಣಿ ಮಾಡಬಹುದು.  

ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಾವಧಿಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ರೂ 250 ರಿಂದ ರೂ 1.5 ಲಕ್ಷ ಠೇವಣಿ ಮಾಡಬಹುದು. ಇದರಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕು ಮತ್ತು 21 ವರ್ಷಗಳ ನಂತರ ಠೇವಣಿ ಮೊತ್ತವನ್ನು ನೀಡಲಾಗುತ್ತದೆ. ನಿಮ್ಮ ಮಗಳು 2 ವರ್ಷದವಳಾಗಿದ್ದರೆ ಮತ್ತು 2024 ರ ಹೊಸ ವರ್ಷದಲ್ಲಿ ನೀವು SSY ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ. ನೀವು 2045 ರವರೆಗೆ ಅಂದರೆ ನಿಮ್ಮ ಮಗಳಿಗೆ ಸುಮಾರು 22-23 ವರ್ಷ ಆಗುವವರೆಗೆ ದೊಡ್ಡ ನಿಧಿಯನ್ನು ಸೇರಿಸಬಹುದು. 

ಇದನ್ನೂ ಓದಿ: ಕರ್ನಾಟಕದ ಒಂದು ಬ್ಯಾಂಕಿನ ಲೈಸನ್ಸ್ ರದ್ದು ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರಿ ದಂಡ ವಿಧಿಸಿದ ಆರ್ಬಿಐ 

ನೀವು SSY ನಲ್ಲಿ ಪ್ರತಿ ತಿಂಗಳು 5,000 ರೂಪಾಯಿಗಳನ್ನು ಠೇವಣಿ ಮಾಡಿದರೆ, ನೀವು ಒಂದು ವರ್ಷದಲ್ಲಿ ಒಟ್ಟು 60,000 ರೂ. ತುಂಬಿತ್ತೀರಿ. ಈ ರೀತಿಯಾಗಿ, ನೀವು 15 ವರ್ಷಗಳಲ್ಲಿ ಒಟ್ಟು 9,00,000 ರೂ. ಕಟ್ಟುತ್ತೀರಿ. SSY ಕ್ಯಾಲ್ಕುಲೇಟರ್ ಪ್ರಕಾರ, 8.2 ಪ್ರತಿಶತ ಬಡ್ಡಿಯಲ್ಲಿ, 21 ವರ್ಷಗಳ ನಂತರ ನೀವು 28,72,848 ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತೀರಿ. ನಿಮ್ಮ ಮಗಳ ಉನ್ನತ ವ್ಯಾಸಂಗ ಅಥವಾ ಮದುವೆ ಇತ್ಯಾದಿಗಳಿಗೆ ಈ ಹಣ ಉಪಯೋಗಿಸಬಹುದು.  

ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ. ಅದನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಮಾಹಿತಿ, ಫೋಟೋ ಮತ್ತು ಮಗುವಿನ ಜನನ ಪ್ರಮಾಣಪತ್ರ, ಭಾವಚಿತ್ರ, ಪೋಷಕರ ಗುರುತಿನ ಚೀಟಿ ಮುಂತಾದ ಇತರ ದಾಖಲೆಗಳನ್ನು ಲಗತ್ತಿಸಿ. ಭರ್ತಿ ಮಾಡಿದ ಫಾರ್ಮ್ ಮತ್ತು ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ನೀಡಿ. ನೀವು ಖಾತೆಯನ್ನು ತೆರೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನ ಉದ್ಯೋಗಿಗಳು ಫಾರ್ಮ್ ಅನ್ನು ಪರಿಶೀಲಿಸುತ್ತಾರೆ. ಇದಾದ ನಂತರ ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಲಾಗುತ್ತದೆ. ಖಾತೆಯನ್ನು ತೆರೆದ ನಂತರ, ನೀವು ಆನ್‌ಲೈನ್‌ನಲ್ಲಿ ಹಣ ತುಂಬಬಹುದು. 

ಇದನ್ನೂ ಓದಿ: Salary Hike: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಸಂಬಂಧಿದಂತೆ ಮಹತ್ವದ ಅಪ್ಡೇಟ್! ಮಿಸ್ ಮಾಡದೆ ಓದಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News