Karnataka : ಕರ್ತವ್ಯದ ವೇಳೆ ಬೆಸ್ಕಾಂ ಲೈನ್‌ ಮೆನ್‌ ಕೆರೆ ನೀರಿನಲ್ಲಿ ಮುಳುಗಿ ಸಾವು

ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಂಬದ ಸಂಪರ್ಕ ಮರುಜೋಡಣೆ ಮಾಡಲು ಹೋಗಿ ಬೆಸ್ಕಾಂನ ಪವರ್ ಮನ್‌ ಮಹೇಶ್‌ ಗೌಡರ (38) ಅವರು ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೆಪ್ಟೆಂಬರ್‌ 10 ರಂದು ನಡೆದಿದೆ.

Written by - Manjunath Hosahalli | Last Updated : Sep 13, 2022, 07:18 PM IST
  • ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿದ್ಯುತ್‌ ಸಂಪರ್ಕ ಕಡಿತ
  • ಬೆಸ್ಕಾಂನ ಪವರ್ ಮನ್‌ ಮಹೇಶ್‌ ಗೌಡರ (38) ಕೆರೆಯಲ್ಲಿ ಮುಳುಗಿ ಮೃತ
  • ಅಪಘಾತ ಗುಂಪು ವಿಮಾ ಯೋಜನೆಯಡಿಯಲ್ಲಿ 10 ಲಕ್ಷ ರೂ. ಪರಿಹಾರ
Karnataka : ಕರ್ತವ್ಯದ ವೇಳೆ ಬೆಸ್ಕಾಂ ಲೈನ್‌ ಮೆನ್‌ ಕೆರೆ ನೀರಿನಲ್ಲಿ ಮುಳುಗಿ ಸಾವು title=

ತುಮಕೂರು : ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಂಬದ ಸಂಪರ್ಕ ಮರುಜೋಡಣೆ ಮಾಡಲು ಹೋಗಿ ಬೆಸ್ಕಾಂನ ಪವರ್ ಮನ್‌ ಮಹೇಶ್‌ ಗೌಡರ (38) ಅವರು ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೆಪ್ಟೆಂಬರ್‌ 10 ರಂದು ನಡೆದಿದೆ.

ಮೃತಪಟ್ಟ ಸಿಬ್ಬಂದಿ ಮಹೇಶ್‌ ಗೌಡರ ಕುಟುಂಬಕ್ಕೆ ಜೀವ ರಕ್ಷಣೆ ಯೋಜನೆಯಡಿಯಲ್ಲಿ 17000 ರೂಪಾಯಿಗಳನ್ನು ಪಾವತಿಸಲಾಗಿದ್ದು, ಮರಣ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. 

ಇದನ್ನೂ ಓದಿ : ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ : ಸಚಿವ ಕಾರಜೋಳ

ಅಪಾಯದ ಅರಿವಿದ್ದರೂ ಕೂಡ ಜೀವವನ್ನು ಲೆಕ್ಕಸಿದೆ ,  ನಮ್ಮ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಮರು ಜೋಡಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದು ದುರ್ದೈವದ ಸಂಗತಿ.  ಮಹೇಶ್‌ ಗೌಡರ ಅವರ ಕುಟುಂಬಕ್ಕೆ ಮರಣ ಪರಿಹಾರ ನಿಧಿ ಚೆಕ್‌ ಹಸ್ತಾಂತರಿಸಲಾಗುವುದು ಎಂದು ಮಹಾಂತೇಶ ಬೀಳಗಿ ತಿಳಿಸಿದ್ದಾರೆ. 

ಕಾರ್ಮಿಕ ಪರಿಹಾರ ನಿಧಿಯಿಂದ ಮೃತ ಮಹೇಶ್‌ ಗೌಡರ ಕುಟುಂಬಕ್ಕೆ ಅವರ ಸೇವಾವಧಿ ಆಧಾರದ ಮೇಲೆ 10 ಲಕ್ಷ ರೂಪಾಯಿ ಪರಿಹಾರವನ್ನು ಬೆಸ್ಕಾಂ ನೀಡಲಿದ್ದು, ಈ ಸಂಬಂಧ ಪೂರಕ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿಗೆ ಬೆಸ್ಕಾಂನಲ್ಲಿ ʼಡಿʼ ಗ್ರೂಪ್‌ ನೌಕರಿ ನೀಡಲಾಗುದು ಎಂದು ಬೆಸ್ಕಾಂ ಎಂಡಿ ಮಾಹಿತಿ ನೀಡಿದ್ದಾರೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನಿಂದ ವೈಯಕ್ತಿಕ ಅಪಘಾತ ಗುಂಪು ವಿಮಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ  ಪರಿಹಾರ ಸಿಗಲಿದೆ. 

ಘಟನೆ ಹೇಗಾಯ್ತು;

ಗುಬ್ಬಿ ಉಪ ವಿಭಾಗದ ಬಿದರೆ ವಿದ್ಯುತ್‌ ಉಪಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ F6 ಜೇನಿಗರಹಳ್ಳಿ ವಿದ್ಯುತ್‌ ಮಾರ್ಗದ ದುರಸ್ಥಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 

ಕೆರೆಯ ಮಧ್ಯದಲ್ಲಿ ಅಳವಡಿಸಿದ್ದ ವಿದ್ಯುತ್‌ ಕಂಬದ ಸಂಪರ್ಕ ಮರು ಜೋಡಿಸಲು ಮಹೇಶ್‌ ಗೌಡರವರು ಕರೆಯಲ್ಲಿ ಈಜಿಕೊಂಡು ಹೋಗಿದ್ದರು, ಜತೆಯಲ್ಲಿದ್ದ ಸಿಬ್ಬಂದಿ ಎಚ್ಚರಿಸಿದ್ದರೂ ಕೂಡ ಈಜಲು ಮುಂದಾದರು. ವಿದ್ಯುತ್‌ ಕಂಬದಿಂದ ಸುಮಾರು 15 ಅಡಿ ದೂರದಲ್ಲಿ ಕೆರೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದರು. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮರುದಿನ ಮೃತ ದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೋಮವಾರ ಬಾಗಲಕೋಟದಲ್ಲಿ ಮಹೇಶ್‌ ಗೌಡರ ಅಂತ್ಯ ಸಂಸ್ಕಾರ ನೆರವೇರಿತು ಎಂದು ಬೆಸ್ಕಾಂ  ಎಂಡಿ ತಿಳಿಸಿದ್ದಾರೆ.

ಇದನ್ನೂ ಓದಿ : Bengaluru floods: ರೇನ್ಬೋ ಲೇಔಟ್ ಮಾಡುವಾಗ "ಮಿಸ್ಟೇಕ್" ಆಗಿದೆ: ಲಿಂಬಾವಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News