ಬೆಂಗಳೂರು: ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ರಾಬಿನ್ ಹುಡ್ ಕಥೆಗಳಲ್ಲಿ ಬರುವಂತೆ ಈತ ವಿಚಿತ್ರ ಕೆಲಸ ಮಾಡಿದ್ದಾನೆ. ಕಂಡ ಕಂಡವರ ಮನೆಗೆ ಕನ್ನ ಹಾಕಿ ತನಗೆ ಎಂಜಾಯ್ ಮಾಡಲು ಎಷ್ಟು ಹಣ ಬೇಕೋ ಅಷ್ಟು ಇಟ್ಟುಕೊಂಡು ಉಳಿದ ಹಣವನ್ನು ಧಾರ್ಮಿಕ ಕೇಂದ್ರಗಳಿಗೆ ದಾನ ಮಾಡುತ್ತಿದ್ದ. ಸದ್ಯ ಖತರ್ನಾಕ್ ಕಳ್ಳನನ್ನ ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಾನ್ ಮೆಲ್ವಿನ್ ಬಂಧಿತ ಆರೋಪಿಯಾಗಿದ್ದಾನೆ.
ಈತ ಐಷಾರಾಮಿ ಜೀವನಕ್ಕಾಗಿ ಶ್ರೀಮಂತರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ತಾನೂ ಎಂಜಾಯ್ ಮಾಡಿದ ಬಳಿಕ ಉಳಿದ ಹಣವನ್ನು ದಾನ ಧರ್ಮ ಮಾಡುತ್ತಿದ್ದ. ಚರ್ಚ್, ದೇವಾಲಯಗಳ ಹುಂಡಿಗೆ ಹಣ ಹಾಕುವುದು ಹಾಗೂ ದಾನ ಮಾಡುವ ಕೆಲಸ ಮಾಡುತ್ತಿದ್ದ. ಜನ ಈತನನ್ನು ನೋಡಿ ದಾನ-ಧರ್ಮ ಮಾಡುತ್ತಿದ್ದಾನೆ. ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಹಾರೈಸುತ್ತಿದ್ದರು. ಆದರೆ ಈತ ಕಂಡವರ ದುಡ್ಡಿನಿಂದಲೇ ಶೋಕಿ ಜೀವನ ನಡೆಸುತ್ತಿದ್ದ.
ಇದನ್ನೂ ಓದಿ- Bangalore Crime : ಹೌಸಿಂಗ್ ಸೊಸೈಟಿ ಹೆಸರಲ್ಲಿ ವಂಚನೆ : ಸಿಲಿಕಾನ್ ಸಿಟಿಯಲ್ಲಿ ಇಬ್ಬರ ಅರೆಸ್ಟ್
ಈತನ ಮೇಲೆ ಬರೋಬ್ಬರಿ ಐವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಪೀಣ್ಯ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ಜಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ- ಬೆಂಗಳೂರಿನಲ್ಲಿ ಪುಣೆ ಪೊಲೀಸರ ಕಾರ್ಯಾಚರಣೆ : ಲೋನ್ ಆಪ್ ಕಾಲ್ ಸೆಂಟರ್ನ 11 ಮಂದಿ ಅರೆಸ್ಟ್..!
ನಗರದ ಅತೀ ಹಳೆಯ ಮನೆಗಳ್ಳರಲ್ಲಿ ಮೆಲ್ವಿನ್ ಕೂಡ ಒಬ್ಬ. ಪ್ರತೀ ಬಾರಿ ಬಂಧನವದಾಗಲೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ. ಸದ್ಯ ಈತನನ್ನು ಬಂಧಿಸಿರುವ ಮಡಿವಾಳ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.