ಬೆಂಗಳೂರು : ಆ ವೃದ್ಧ ತನ್ನ ಮಕ್ಕಳ ಕಾಲೇಜು ಫೀಜ್ ಹಾಗಿ ಹಣ ಕೂಡಿಟ್ಟಿದ್ದ.. ಅದನ್ನ ಬ್ಯಾಂಕ್ಗೆ ತೆಗೆದುಕೊಂಡು ಹೋಗಿ ಡೆಪಾಸಿಟ್ ಮಾಡಿದ್ದ.. ಆತನಿಗೆ ತನ್ನ ಎಟಿಎಂ ಪಿನ್ ಮರೆತೋಗೊತ್ತು.. ಪಿನ್ ಚೇಂಜ್ ಮಾಡಲು ಎಟಿಎಂಗೆ ಹೋಗಿದ್ದೆ ಮುಳುವಾಗಿಹೋಯ್ತು.. ಬಕಪಕ್ಷಿಗಳಂತೆ ಕಾಯ್ತಿದ್ದ ಐದನೇ ತರಗತಿ ಓದಿದ್ದ ಗಿರಾಕಿಗಳು ಖೆಡ್ಡ ತೋಡಿದ್ರು.. ಸಹಾಯ ಮಾಡೊ ನೆಪದಲ್ಲಿ ಬಂದು ಎಟಿಎಂ ಅನ್ನೇ ಚೇಂಜ್ ಮಾಡಿ ಹಣ ಎಗರಿಸಿದ್ರು..
ಹರಕಲು ಬಟ್ಟೆ.. ಕಾಲೆಲ್ಲ ಕೆಸರು.. ಇಳಿ ವಯಸ್ಸಲ್ಲು ಗಾರೆ ಕೆಲಸ ಮಾಡ್ತಿದ್ದ ಈ ವೃದ್ಧ ತನ್ನ ಇಬ್ಬರು ಹೆಣ್ಣುಮಕ್ಕಳ ಓದಿಗಾಗಿ ಜೀವನವನ್ನೇ ಮುಡಿಪಾಗಿ ಇಟ್ಟುಬಿಟ್ಟಿದ್ದ.. ಅದಕ್ಕಾಗಿ ಕಷ್ಟ ಪಟ್ಟು ದುಡಿದು ಒಳ್ಳೆ ಕಾಲೇಜಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನ ಓದಿಸ್ತಿದ್ದ... ಒಬ್ಬಾಕೆ ಪಿಯುಸಿ ಓದ್ತಿದ್ರೆ ಮತ್ತೊಬ್ಬಾಕೆ ಪದವಿ ಡಿಗ್ರಿ ಮಾಡ್ತಿದ್ಳು.. ಒಂದೊಂದೆ ರೂಪಾಯಿ ಜೋಡಿಸಿ ಕಾಲೇಜು ಫೀಸ್ ಗಾಗಿ ಹಣ ಕೂಡಿಟ್ಟಿದ್ದ.. ಆದ್ರೆ ಒಂದೇ ದಿನದಲ್ಲಿ ಆ ಹಣ ಕಂಡವರ ಪಾಲಾಗಿತ್ತು..
ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ವಿವೇಕ್ ಕುಮಾರ್ ಹಾಗೂ ಚುನಿಲಾಲ್ ಕುಮಾರ್.. ಬಿಹಾರ ಮೂಲದ ಈ ಆಸಾಮಿಗಳು ಓದಿರೋದು ಐದನೇ ತರಗತಿ ಮಾತ್ರ..ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈ ಕ್ರಿಮಿಗಳು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ರು..ಇದು ಪಾರ್ಟ್ ಟೈಂ ಕೆಲಸ ಆದ್ರೆ ಫುಲ್ ಟೈಂ ಕೆಲಸ ಬೇರೆಯದ್ದೇ ಇತ್ತು..
ಎಟಿಎಂ ನಲ್ಲಿ ಹಣ ವಿಥ್ ಡ್ರಾ ಮಾಡಲು ಬರೊ ವೃದ್ಧರನ್ನೇ ಟಾರ್ಗೆಟ್ ಮಾಡಿ ಎಟಿಎಂ ಎಕ್ಸ್ ಚೇಂಜ್ ಮಾಡಿ ವಂಚಿಸ್ತಿದ್ರು.. ಅದೇ ರೀತಿ ಜುಲೈ 15 ರ ಬೆಳಗ್ಗೆ 10 ಗಂಟೆಗೆ ಉತ್ತರಹಳ್ಳಿಯ ಕೆನೆರಾ ಬ್ಯಾಂಕ್ ಗೆ ಬಂದಿದ್ದ ವೃದ್ಧ ಸಂಜಯ್ ಸಿಂಗ್ ತನ್ನ ಬ್ಯಾಂಕ್ ಖಾತೆಗೆ ಒಂದೂವರೆ ಲಕ್ಷ ಹಣ ಜಮೆ ಮಾಡಿದ್ರು..
ಇದನ್ನೂ ಓದಿ:4ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ
ಎಟಿಎಂ ಕಾರ್ಡ್ ಬಳಸಿ ತುಂಬಾ ದಿನ ಆಗಿದ್ದರಿಂದ ಎಟಿಎಂ ಪಿನ್ ಬದಲಾಯಿಸಲು ಅಲ್ಲೇ ಇದ್ದ ಎಟಿಎಂ ಗೆ ಬಂದಿದ್ರು..ಇಂತಹವರನ್ನೇ ಕಾದು ನಿಂತಿದ್ದ ಆಸಾಮಿ ಗಳಾದ ವಿವೇಕ್ ಕುಮಾರ್ ಹಾಗೂ ಚುನಿಲಾಲ್ ಸಹಾಯ ಮಾಡೊ ನೆಪದಲ್ಲಿ ಬಂದು ಹಳೆ ಪಿನ್ ತಿಳಿದುಕೊಂಡು ಹೊಸ ಪಿನ್ ಕೂಡ ಜನರೇಟ್ ಮಾಡಿದ್ರು.. ಆದ್ರೆ ಸಂಜಯ್ ಸಿಂಗ್ ನ ಎಟಿಎಂ ಬದಲಾಗಿ ಬೇರೊಂದು ಎಟಿಎಂ ಕೊಟ್ಟು ಹೊರ ನಡೆದಿದ್ರು.. ಸಂಜಯ್ ಸಿಂಗ್ ಹೊರ ಬಂದು 10 ನಿಮಿಷ ಆಗ್ತಿದ್ದಂತೆ 10 ಸಾವಿರದಂತೆ ಹಣ ಕಡಿತವಾಗೋಕೆ ಪ್ರಾರಂಭವಾಯ್ತು... ಬ್ಯಾಂಕ್ ಗೆ ಬಂದು ವಿಚಾರಿಸುವಷ್ಟರಲ್ಲಿ 75 ಸಾವಿರ ಹಣವನ್ನು ಖದೀಮರು ವಿಥ್ ಡ್ರಾ ಮಾಡಿಕೊಂಡಿದ್ರು...
ಸಂಜಯ್ ಸಿಂಗ್ ತಕ್ಷಣ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ರು.. ತನಿಖೆಗೆ ಇಳಿದ ಪೊಲೀಸರು ಆರೋಪಿಗಳು ಬಂದ ಬಸ್ ನಂಬರ್ ಆಧರಿಸಿ ಸಿಸಿಟಿವಿ ಪರಿಶೀಲನೆ ನಡೆಸಿದ್ದು.. ಸೀದಾ ಅವರು ಉಳಿದುಕೊಂಡಿದ್ದ ಎಲೆಕ್ಟ್ರಾನಿಕ್ ಸಿಟಿ ಮನೆವರೆಗೆ ಹೋಗಿದ್ರು.. ಅಲ್ಲಿಂದ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿಂದ 37 ವಿವಿಧ ಬ್ಯಾಂಕ್ ನ ಎಟಿಎಂ ಹಾಗೂ 75 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ..
ಇದನ್ನೂ ಓದಿ: ಪಿ.ಜಿಗಳ ಸುರಕ್ಷತೆಗಾಗಿ ಹೊಸ ನಿಯಮ ರೂಪಿಸಿದ ಬಿಬಿಎಂಪಿ
ಇತ್ತ ಸಂಜಯ್ ಸಿಂಗ್ ಈ ಹಣವನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ಫೀಸ್ ಗಾಗಿ ಕೂಡಿಟ್ಟಿದ್ರು ಅನ್ನೋ ವಿಚಾರ ಕೂಡ ಗೊತ್ತಾಗಿದೆ.. ಕಾಲೇಜಿನಲ್ಲಿ ನಡೆದ ಘಟನೆ ವಿವರಿಸಿ ಫೀಸ್ ಕಟ್ಟಲು ಸಮಯ ಕೂಡ ತೆಗೆದುಕೊಂಡಿದ್ದಾರೆ.. ಬೆವರು ಸುರಿಸಿ ದುಡಿದ ಹಣ ಕಂಡವರ ಪಾಲಾದ್ರು ಮತ್ತೆ ವೃದ್ಧನ ಕೈಸೇರುವಂತಾಗಿದೆ. ಆರೋಪಿಗಳು ಇದೇ ಮೊದಲ ಬಾರಿಗೆ ಕೃತ್ಯ ನಡೆಸಿರೋದಲ್ಲ.. ಅವರ ಬಳಿ 37 ಎಟಿಎಂ ಪತ್ತೆಯಾಗಿದ್ದು ಹಲವು ವೃದ್ದರನ್ನು ಇದೇ ರೀತಿ ವಂಚಿಸಿರೊ ಸಾಧ್ಯತೆ ಇದ್ದು ತನಿಖೆ ಮುಂದುವರೆದಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.