ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!

Armaan Malik-Payal Malik: ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಬಿಗ್ ಬಾಸ್‌ʼನಿಂದ ಮೊದಲ ವಾರವೇ ಹೊರನಡೆದಿದ್ದರು. ಆದರೆ ಕಾರ್ಯಕ್ರಮದಿಂದ ಹೊರಬರುತ್ತಿದ್ದಂತೆ,  ಟ್ರೋಲ್‌ʼಗೆ ಒಳಗಾಗಬೇಕಾಯಿತು.

Written by - Bhavishya Shetty | Last Updated : Jul 21, 2024, 02:20 PM IST
    • ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್
    • ಪಾಯಲ್ ಮಲಿಕ್ ಬಿಗ್ ಬಾಸ್‌ʼನಿಂದ ಮೊದಲ ವಾರವೇ ಹೊರನಡೆದಿದ್ದರು
    • ನಿರಂತರ ದ್ವೇಷದಿಂದ ಬೇಸತ್ತ ಪಾಯಲ್
ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!  title=
File Photo

Armaan Malik-Payal Malik: ರಿಯಾಲಿಟಿ ಶೋ 'ಬಿಗ್ ಬಾಸ್ OTT 3' ನಲ್ಲಿ, ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜೊತೆ ಕಾರ್ಯಕ್ರಮಕ್ಕೆ ಎಂಟ್ರಿ ಪಡೆದಿದ್ದರು. ಆದರೆ ಈ ಸಂದರ್ಭದಲ್ಲಿ ಈ ಮೂವರು ಟ್ರೋಲ್‌ʼಗೆ ಗುರಿಯಾಗಿದ್ದು, ಇದೀಗ ಇವರ ವಿಚಾರ ಮಹತ್ವದ ತಿರುವು ಪಡೆದುಕೊಂಡಿದೆ. 

ಇದನ್ನೂ ಓದಿ:   Weight Loss Tips: ಬೆಳ್ಳುಳ್ಳಿಯಿಂದ ತೂಕ ಇಳಿಕೆ ಸುಲಭ.. ಹೇಗೆ ಗೊತ್ತಾ?  

ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಬಿಗ್ ಬಾಸ್‌ʼನಿಂದ ಮೊದಲ ವಾರವೇ ಹೊರನಡೆದಿದ್ದರು. ಆದರೆ ಕಾರ್ಯಕ್ರಮದಿಂದ ಹೊರಬರುತ್ತಿದ್ದಂತೆ,  ಟ್ರೋಲ್‌ʼಗೆ ಒಳಗಾಗಬೇಕಾಯಿತು. ಅರ್ಮಾನ್‌ʼನನ್ನು ಏಕೆ ಬಿಡುತ್ತಿಲ್ಲ ಎಂದು ಜನರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ನಿರಂತರ ದ್ವೇಷದಿಂದ ಬೇಸತ್ತ ಪಾಯಲ್ ಅರ್ಮಾನ್‌ʼಗೆ ವಿಚ್ಛೇದನ ನೀಡುವುದಾಗಿ ಇದೀಗ ಹೇಳಿಕೊಂಡಿದ್ದಾರೆ.
ʼ
ಪಾಯಲ್ ಮಲಿಕ್ ಶುಕ್ರವಾರ ತನ್ನ ಯೂಟ್ಯೂಬ್ ಚಾನೆಲ್‌ʼನಲ್ಲಿ ಹಂಚಿಕೊಂಡ ವ್ಲಾಗ್‌ʼನಲ್ಲಿ ಟ್ರೋಲಿಂಗ್‌ʼಗೆ ಪ್ರತಿಕ್ರಿಯಿಸಿದ್ದಾರೆ. "ಈ ವಿಚಾರ ತನಗೆ ಮಾತ್ರ ಸೀಮಿತವಾಗಿದ್ದರೆ ಪರವಾಗಿಲ್ಲ, ಆದರೆ ಈಗ ದ್ವೇಷದ ಛಾಯೆ ನನ್ನ ಮಕ್ಕಳನ್ನೂ ತಲುಪುತ್ತಿದೆ. ಇದರಿಂದಾಗಿ ಬೇರೆಯಾಗಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.

"ಈ ನಾಟಕ ಮತ್ತು ದ್ವೇಷದಿಂದ ನಾನು ಬೇಸತ್ತಿದ್ದೇನೆ. ನನ್ನ ಬಗ್ಗೆ ಇರುವವರೆಗೂ ಪರವಾಗಿಲ್ಲ. ಆದರೆ ಈಗ ನನ್ನ ಮಕ್ಕಳ ಬಗ್ಗೆಯೂ ಈ ವಿಚಾರ ತಲುಪುತ್ತಿದೆ. ಇದು ಆಘಾತಕಾರಿ ಮತ್ತು ಅಸಹ್ಯಕರ. ಈ ಕಾರಣಕ್ಕಾಗಿ ನಾನು ಅರ್ಮಾನ್‌ʼನಿಂದ ಬೇರೆಯಾಗಲು ನಿರ್ಧರಿಸಿದ್ದೇನೆ. ಅವರು ಕೃತಿಕಾ ಜೊತೆ ಇರಬಹುದು. ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ:  ಗಂಭೀರ್ ಜೊತೆಗಿನ ಹಳೆ ಜಗಳ ಬಿಸಿಸಿಐಗೆ ಕೊಹ್ಲಿ ಸ್ಪಷ್ಟನೆ..!  

2011ರಲ್ಲಿ ಪಾಯಲ್ ಮತ್ತು ಅರ್ಮಾನ್ ಪ್ರೀತಿಸಿ ಮದುವೆಯಾಗಿದ್ದರು. ಆಗಲೇ ಇವರಿಗೆ ಓಬ್ಬ ಮಗನಿದ್ದನು. ಆಮೇಲೆ ಅರ್ಮಾನ್, ಪಾಯಲ್ ಗೆಳತಿ ಕೃತಿಕಾಳನ್ನು ಸಹ ಪ್ರೀತಿಸಿ ವಿವಾಹವಾಗಿದ್ದ.  ಆದರೆ ಕೃತಿಕಾ ಅರ್ಮಾನ್ ಅವರ ಲೀಗಲ್ ವೈಫ್ ಅಲ್ಲ. ಇನ್ನು ಕೃತಿಕಾ ಜೊತೆ ಹನಿಮೂನ್‌ʼಗೆ ಹೋಗಲು ಪಾಯಲ್ ಅವರೇ ಹಣ ನೀಡಿದ್ದರಂತೆ. ಆಮೇಲೆ ಅರ್ಮಾನ್ ಅವರು ಪಾಯಲ್ ಜೊತೆ ದುಬೈಗೆ ಹೋಗಲು ಕೃತಿಕಾ ಅವರೇ ಹೇಳಿದ್ದರಂತೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News