Deepika Padukone Saffron Bikini : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಸಿನಿಮಾ ʼಪಠಾನ್ʼ ವಿವಾದದ ಕೇಂದ್ರ ಬಿಂದುವಾಗಿದೆ. ಮಧ್ಯಪ್ರದೇಶದಲ್ಲಿ ದೀಪಿಕಾ ಕೇಸರಿ ಬಿಕನಿ ವಿವಾದ ತಾರಕ್ಕೇರಿದೆ. ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ನಿಷೇಧಿಸಲು ಒತ್ತಾಯಗಳು ಹೆಚ್ಚುತ್ತಿವೆ. ಈ ನಡುವೆ ಸೋಮವಾರದಿಂದ ಪ್ರಾರಂಭವಾಗಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸುವ ಸಾಧ್ಯತೆಯಿದೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ʼಬೇಷರಂ ರಂಗ್ʼ ಹಾಡಿನ ಟೈಟಲ್ ಬಗ್ಗೆ ಕಿಡಿಕಾರಿದ್ದರು. ಅಲ್ದೆ, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ಷೇಪಿಸಿದ್ದರು. ಹಾಡಿನಲ್ಲಿ ಬಳಸಿರುವ ವೇಷಭೂಷಣಗಳಲ್ಲಿ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಬಳಸಿರುವುದು ಆಕ್ಷೇಪಾರ್ಹವಾಗಿದೆ ಎಂದು ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Avatar 2 box office : 2 ದಿನಗಳಲ್ಲಿ 100 ಕೋಟಿ ಬಾಚಿದ ಅವತಾರ 2..!
ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾರುಖ್ ಖಾನ್‌ಗೆ ಅವರ ಮಗಳ ಜೊತೆಗೆ ಅವರೇ ನಟಿಸಿರುವ ʼಪಠಾಣ್ʼ ಸಿನಿಮಾವನ್ನು ವೀಕ್ಷಿಸುವ ಧೈರ್ಯ ಇದ್ಯಾ ಅಂತ ಪ್ರಶ್ನೆ ಮಾಡಿದ್ದರು. ನಿಮ್ಮ ಮಗಳಿಗೆ 23-24 ವರ್ಷ, ಅವಳೊಂದಿಗೆ ನಿಮ್ಮ ಸಿನಿಮಾ ನೋಡಿ ಎಂದು ಆಕ್ರೋಶ ಭರಿತವಾಗಿ ಮಾತನಾಡಿದ್ದರು. ಇನ್ನು ಐದು ದಿನಗಳ ಚಳಿಗಾಲದ ಅವಧಿ ಸೋಮವಾರದಿಂದ ಪ್ರಾರಂಭವಾಗಲಿದೆ. ಈ ವಿಷಯದ ಕುರಿತು ಬಿಜೆಪಿ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಬಿಜೆಪಿ ಮತ್ತು ಇತರ ಬಲಪಂಥೀಯ ಗುಂಪುಗಳಲ್ಲದೆ, ಕೆಲವು ಕಾಂಗ್ರೆಸ್ ಸದಸ್ಯರು ಮತ್ತು ಹಲವಾರು ಮುಸ್ಲಿಂ ಸಂಘಟನೆಗಳು ಕೂಡ ʼಪಠಾಣ್ʼ ನಿಷೇಧಿಸುವಂತೆ ಒತ್ತಾಯಿಸಿಸುವ ಎಲ್ಲಾ ಲಕ್ಷಣಗಳಿವೆ. ಇದೇ ವೇಳೆ ಇನ್ನು ಕೆಲವು ರಾಜಕಾರಣಿಗಳು ಚಿತ್ರಕ್ಕೆ ಬಹಿಷ್ಕಾರ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ವಿವೇಕ್ ಟಂಖಾ ಅವರು ಚಲನಚಿತ್ರವನ್ನು ಬೆಂಬಲಿಸಿದ್ದಾರೆ. ಅಲ್ಲದೆ, ತಾವು ಬಹಿಷ್ಕರಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ರಿಲೀಸ್ ಆಗಬೇಕೋ ಬೇಡವೋ ಅನ್ನೋದು ಸೆನ್ಸಾರ್ ಮಂಡಳಿಗೆ ಬಿಟ್ಟಿದ್ದು, ಯಾರಿಗಾದರೂ ಏನಾದರೂ ಸಮಸ್ಯೆ ಇದ್ದರೆ ಸೆನ್ಸಾರ್ ಮಂಡಳಿ ಗಮನಕ್ಕೆ ತನ್ನಿ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.