ರಣಬೀರ್-ಆಲಿಯಾ ದಾಂಪತ್ಯದಲ್ಲೂ ಬಿರುಕು..!? ಅಂಬಾನಿ ಮಗನ ಮದುವೆಯಲ್ಲೇ ಜಗಳವಾಡಿದ್ದ ರಣಬೀರ್...‌ ಇಬ್ಬರ ಮಧ್ಯೆ ನಡೆದಿದ್ದೇನು?

Ranbir-Alia Fight At Anant & Radhika Wedding: ಈ ಮದುವೆಗೆ ಹಾಲಿವುಡ್, ಬಾಲಿವುಡ್ ಮತ್ತು ಉದ್ಯಮ ಜಗತ್ತಿನ ಹಲವು ಖ್ಯಾತ ತಾರೆಯರು ಆಗಮಿಸಿದ್ದರು. ಇನ್ನು ಈ ಸೆಲೆಬ್ರಿಟಿಗಳು ಮದುವೆ ಮನೆಯಲ್ಲಿ ಏನೆಲ್ಲಾ ಮಾಡಿದ್ದರು, ಯಾವ ರೀತಿ ವರ್ತಿಸಿದ್ದರು ಎಂಬುದನ್ನು ಹೇಳುತ್ತಿರುವ ರೆಡ್ಡಿಟ್‌ ಪೋಸ್ಟ್‌ ಒಂದು ಭಾರೀ ವೈರಲ್‌ ಆಗುತ್ತಿದೆ.

Written by - Bhavishya Shetty | Last Updated : Jul 21, 2024, 09:17 PM IST
    • ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಯಾವ ತಾರೆಯರ ನಡುವೆ ಭಿನ್ನಾಭಿಪ್ರಾಯವಿತ್ತು?
    • ಏನೆಲ್ಲಾ ನಡೆದಿದೆ ಎಂಬ ಸುದ್ದಿಯನ್ನು ಅಂಬಾನಿ ಕುಟುಂಬದ ಸಿಬ್ಬಂದಿಯೊಬ್ಬರು ಬಹಿರಂಗಪಡಿಸಿದ್ದಾರೆ
    • ಹಾಲಿವುಡ್, ಬಾಲಿವುಡ್ ಮತ್ತು ಉದ್ಯಮ ಜಗತ್ತಿನ ಹಲವು ಖ್ಯಾತ ತಾರೆಯರು ಆಗಮಿಸಿದ್ದರು
ರಣಬೀರ್-ಆಲಿಯಾ ದಾಂಪತ್ಯದಲ್ಲೂ ಬಿರುಕು..!?  ಅಂಬಾನಿ ಮಗನ ಮದುವೆಯಲ್ಲೇ ಜಗಳವಾಡಿದ್ದ ರಣಬೀರ್...‌ ಇಬ್ಬರ ಮಧ್ಯೆ ನಡೆದಿದ್ದೇನು? title=
File Photo

Ranbir-Alia Fight At Anant & Radhika Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಆಗಿ ಕೆಲವೇ ದಿನಗಳು ಕಳೆದಿದ್ದು, ಈ ಮದುವೆಯ ಸಂಭ್ರಮ ಇನ್ನೂ ತಗ್ಗಿಲ್ಲ. ಈ ಮದುವೆಗೆ ಹಾಲಿವುಡ್, ಬಾಲಿವುಡ್ ಮತ್ತು ಉದ್ಯಮ ಜಗತ್ತಿನ ಹಲವು ಖ್ಯಾತ ತಾರೆಯರು ಆಗಮಿಸಿದ್ದರು. ಇನ್ನು ಈ ಸೆಲೆಬ್ರಿಟಿಗಳು ಮದುವೆ ಮನೆಯಲ್ಲಿ ಏನೆಲ್ಲಾ ಮಾಡಿದ್ದರು, ಯಾವ ರೀತಿ ವರ್ತಿಸಿದ್ದರು ಎಂಬುದನ್ನು ಹೇಳುತ್ತಿರುವ ರೆಡ್ಡಿಟ್‌ ಪೋಸ್ಟ್‌ ಒಂದು ಭಾರೀ ವೈರಲ್‌ ಆಗುತ್ತಿದೆ. ಅದರಲ್ಲಿ ಮತ್ತಷ್ಟು ಸದ್ದು ಮಾಡಿರುವುದು ರಣಬೀರ್‌ ಮತ್ತು ಆಲಿಯಾ ಭಟ್‌ ಜಗಳವಾಡಿರುವ ಸುದ್ದಿ. 

ಇದನ್ನೂ ಓದಿ:  ಬ್ಯಾಟ್‌ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದ್ದೇ ಈತನಿಂದ...

ಹಾರ್ದಿಕ್ ಮತ್ತು ಅನನ್ಯಾ ಜೋಡಿ?
ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಯಾವ ತಾರೆಯರ ನಡುವೆ ಭಿನ್ನಾಭಿಪ್ರಾಯವಿತ್ತು? ಏನೆಲ್ಲಾ ನಡೆದಿದೆ ಎಂಬ ಸುದ್ದಿಯನ್ನು ಅಂಬಾನಿ ಕುಟುಂಬದ ಸಿಬ್ಬಂದಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ವೈರಲ್ ರೆಡ್ಡಿಟ್ ಥ್ರೆಡ್‌ʼನಲ್ಲಿ ಹೇಳಲಾಗುತ್ತಿದೆ. ರೆಡ್ಡಿಟ್‌ʼನಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಪ್ರಕಾರ, ಅನಂತ್ ಅವರ ಮದುವೆಯ ಮೆರವಣಿಗೆಯಲ್ಲಿ ಹಾರ್ದಿಕ್ ಮತ್ತು ಅನನ್ಯಾ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಅದಾದ ಬಳಿಕವೂ ಒಟ್ಟಿಗೆ ಕಾಲ ಕಳೆದಿದ್ದರಂತೆ.

ರಣಬೀರ್ ಆಲಿಯಾ ಜಗಳ:
ಈ ನಡುವೆ ಮದುವೆ ಸಮಾರಂಭದ ಮೊದಲ ದಿನವೇ ಶಾರುಖ್ ಮತ್ತು ಗೌರಿ ನಡುವೆ ಸ್ವಲ್ಪ ಮನಸ್ತಾಪ ಉಂಟಾಗಿತ್ತು. ಅದಾದ ಬಳಿಕ ರಣಬೀರ್ ಕಪೂರ್ ತನ್ನ ಪತ್ನಿ ಆಲಿಯಾ ಭಟ್ʼಗೆ 'ಸರಿಯಾಗಿ ವರ್ತಿಸುವಂತೆ' ಗದರಿಸಿದ್ದರಂತೆ, ಅದಾದ ಬಳಿಕ ಆಲಿಯಾ ಸಮಾಧಾನ ಮಾಡಿ ಕೈ ಹಿಡಿದು ಕರೆದುಕೊಂಡು ಬಂದಿದ್ದರು ಎಂದು ವರದಿಯಾಗಿದೆ. 

ಇದನ್ನೂ ಓದಿ:  ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಇಂಥಾ ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ವನಿತಾ ಪಡೆ!

ಸಾರಾ ಮತ್ತು ಜಾಹ್ನವಿ ಮುರಿದ ಸ್ನೇಹ! 
ಜಾಹ್ನವಿ ಕಪೂರ್ ತನ್ನ ಗೆಳೆಯ ಶಿಖರ್ ಪಹಾಡಿಯಾ ಜೊತೆಗೆ ಆಗಮಿಸಿದ್ದರು. ಆದರೆ ಆ ಸಂದರ್ಭದಲ್ಲಿ ಸಾರಾ ಅಲಿ ಖಾನ್ ಜೊತೆ ಮಾತನಾಡಿರಲಿಲ್ಲ ಎಂದು ರೆಡ್ಡಿಟ್ ಬಳಕೆದಾರರು ಹೇಳಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಈ ಹಿಂದೆ ಶಿಖರ್ ಕಿರಿಯ ಸಹೋದರ ವೀರ್ ಪಹಾಡಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಆ ಬಳಿಕ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುಶಃ ಇದೇ ಕಾರಣಕ್ಕೆ ಇಬ್ಬರ ನಡುವೆ ಅಂತರ ಮೂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News