ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಭೋಜಪುರಿ ಭಾಷೆಯಲ್ಲಿ ನಟಿಸುವ ಮೂಲಕ ಆ ಬಹುಭಾಷಾ ತಾರೆಯರ ಪಟ್ಟಿಗೆ ಸೇರಿಕೊಳ್ಳುತ್ತಿದ್ದರೆ. ಅಂದರೆ, ಹೆಸರಿಡದ ಭೋಜಪುರಿ ಭಾಷೆಯ ಸಿನಿಮಾವೊಂದರಲ್ಲಿ ಸದ್ಯ ನಟಿಸುತ್ತಿದ್ದಾರೆ.
ಹರ್ಷಿಕಾ(Harshika Poonacha) ಈಗ ಸಿನಿಮಾ ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಲವ್ಸ್ಟೋರಿವುಳ್ಳ ಈ ಚಿತ್ರದ ಪೂರ್ತಿ ಸಿನಿಮಾದ ಚಿತ್ರೀಕರಣವು ಲಂಡನ್ ನಲ್ಲಿ ನಡೆಯಲಿದೆ. ಹೀಗಾಗಿ ಹರ್ಷಿಕಾ ಸದ್ಯ ಲಂಡನ್ ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ.
ಸಾಮಾಜಿಕ ಮಾಧ್ಯಮಗಳಲ್ಲಿ ನೂತನ ಟ್ರೆಂಡ್ ಸೃಷ್ಟಿಸಿದ Tom And Jerry ಚಿತ್ರದ ಟ್ರೈಲರ್
ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ.
ನೀವು ಸಧಾ ನನ್ನನ್ನು ಬೆಳಿಸಿದ್ದೀರಿ , ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ. ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ, ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು. ಈಗಲೂ ಅವರ ನೆನಪು ಸಧಾ ಕಾಡುತ್ತೆ.
ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ. ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು.
ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ನನ್ನ ಮೇಲೆ ಸಧಾ ಇರಲಿ
ಇಂತಿ ನಿಮ್ಮ ಪ್ರೀತಿಯ
ಹರ್ಷಿಕಾ ಪೂಣಚ್ಚ ಎಂದು ಬರೆದು ಕೊಂಡಿದ್ದಾರೆ.
ಪಾಕಿಸ್ತಾನದಲ್ಲೂ ದರ್ಶನ್ ಹವಾ: ಉರ್ದುಗೆ ಡಬ್ ಆಗಿ ರಿಲೀಸ್ ಆಯ್ತು ಡಿಬಾಸ್ ಫಿಲ್ಮ್..!
'ಆರೇಳು ಭಾಷೆಯಲ್ಲಿ ನಟಿಸಿದ ನನಗೆ ಇದೀಗ ಭೋಜಪುರಿಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪ್ರೊಡಕ್ಷನ್ಸ್ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ’ ‘ಭೋಜಪುರಿ ಜತೆಗೆ ಹಿಂದಿಗೂ ಈ ಚಿತ್ರ ಡಬ್ ಆಗಿ ತೆರೆಕಾಣಲಿದೆ.
ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...!