Ramya: ಇತ್ತೀಚೆಗೆ ನಟಿ ರಮ್ಯಾ ಅವರ ಫೋಟೋವೊಂದು ಸಖತ್ ವೈರಲ್ ಆಗಿತ್ತು. ಇದು ಹಲವು ಗಾಸಿಪ್‌ಗಳನ್ನು ಸಹ ಹುಟ್ಟು ಹಾಕಿತು. ಈ ಪೋಸ್ಟ್‌ನ್ನು ಇತ್ತೀಚೆಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಮ್ಯಾ ಜೊತೆಗೆ ಕಾಣಿಸಿಕೊಂಡ ಹುಡುಗನ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದ್ದವು.
ಇದನ್ನೂ ಓದಿ:
ಯುವಕನೊಬ್ಬನ ಜೊತೆಗೆ ರಮ್ಯಾ ಸೆಲ್ಫಿ ತೆಗೆದುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಮ್ಯಾ ಜೊತೆ ಇರುವ ಯುವಕ ಯಾರು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಆ ಹುಡುಗ ಯಾರೆಂದು ಸ್ಪಷ್ಟನೆ ಕೊಟ್ಟಿದ್ದಾರೆ. ರಮ್ಯಾ ಜೊತೆ ಸೆಲ್ಫಿಯಲ್ಲಿದ ಆ ಯುವಕ ಅವರ ಸ್ಟೈಲಿಸ್ಟ್ ವಿಹಾನ್. ಈ ಕುರಿತು ಸ್ವತಃ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.