Sanvi Sudeep about Siddharth Malhotra wedding : ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಇಬ್ಬರೂ ಬಾಲಿವುಡ್ ಸ್ಟಾರ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಿನ್ನೆ ಸಪ್ತಪದಿ ತುಳಿದಿದ್ದಾರೆ. ಮುದ್ದಾದ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ. ಆದರೆ ಈ ಮಧ್ಯೆ ಕನ್ನಡಿಗರ ಗಮನಸೆಳೆದಿದ್ದು, ಸುದೀಪ್ ಮಗಳು ಸಾನ್ವಿ ಅವರ ಇನ್ಸ್ಟಾಗ್ರಾಮ್ ಸ್ಟೋರಿ.
ಇದನ್ನೂ ಓದಿ : Niveditha Gowda : ಕಾಡು ಪ್ರಾಣಿ ಲದ್ದಿಯ ಕಾಫಿ ಬಗ್ಗೆ ನಿವೇದಿತಾ ಗೌಡ ಅನುಭವ ಕೇಳಿ
ಹೌದು, ಸುದೀಪ್ ಅವರ ಮುದ್ದಿನ ಮಗಳು ಸಾನ್ವಿ ಸುದೀಪ್. ಅಪ್ಪನಂತೆಯೇ ಕಂಚಿನ ಕಂಠ ಹೊಂದಿರುವ ಇವರು, ಅನೇಕ ಕಡೆಗಳಲ್ಲಿ ಕಾನ್ಸರ್ಟ್ಗಳನ್ನು ನೀಡುತ್ತಾರೆ. ಅವರ ಮಧುರ ಧ್ವನಿಗೆ ಮನಸೋಲದವರಿಲ್ಲ. ಇನ್ನೂ ಸಾನ್ವಿ ಅವರ ತಂದೆ ಸುದೀಪ್, ಈಗಲೂ ಯಂಗ್ ಆಂಡ್ ಎನರ್ಜೆಟಿಕ್ ಆಗಿದ್ದಾರೆ. ಅನೇಕ ಹುಡುಗಿಯರಿಗೆ ಅವರ ಮೇಲೆ ಕ್ರಶ್ ಇದೆ. ಆದರೆ ಸುದೀಪ್ ಮಗಳು ಸಾನ್ವಿಗೆ ಯಾರ ಮೇಲೆ ಕ್ರಶ್ ಗೊತ್ತಾ?
ಇದೀಗ ಈ ವಿಚಾರ ರಿವೀಲ್ ಆಗಿದೆ. ಸುದೀಪ್ ಮಗಳು ಸಾನ್ವಿ ಅವರಿಗೆ ಕಿಯಾರಾ ಅವರ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ಕ್ರಶ್ ಅಂತೆ. ನೀವು ಸಾನ್ವಿ ಅವರ ಇನ್ಸ್ಟಾಗ್ರಾಮ್ ಸ್ಟೋರಿ ನೋಡಿದ್ರೆ ಇಂತಹದೊಂದು ಅನುಮಾನ ಹುಟ್ಟಬಹುದು. ಸಾನ್ವಿ ಸುದೀಪ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದಷ್ಟು ಸ್ಟೋರಿಗಳನ್ನು ಹಾಕಿದ್ದಾರೆ. ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿಡಿಯೋ, ಫೋಟೋ, ಮೀಮ್ಸ್ಗಳಿವೆ. ಅದರಲ್ಲಿ ಒಂದು ಇತ್ತೀಚಿನ ಮೀಮ್ಸ್ ಆಗಿದ್ದು, ಅದರಲ್ಲಿ "Yes my crush is getting married, Alexa play Channa mereya!!" ಎಂದು ಬರೆದಿದೆ. ಇದರ ಜೊತೆ ಅಳುವ ಎಮೋಜಿಯನ್ನು ಹಾಕಿ ಸಾನ್ವಿ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸಾನ್ವಿ ಅವರ ಕ್ರಶ್ ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾಗಿದ್ದಕ್ಕೆ ಕೊಂಚ ಬೇಸರವಾದಂತೆ ತೋರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : Sidharth Kiaraa : 'ಪರ್ಮನೆಂಟ್ ಬುಕ್ಕಿಂಗ್ ಆದ್ವಿ' ಎಂದ ಶೇರ್ ಷಾ ಜೋಡಿ.. ಇಲ್ಲಿದೆ ಸಿದ್ ಕಿಯಾರಾ ವೆಡ್ಡಿಂಗ್ ಅಲ್ಬಮ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.