ಕಿಚ್ಚ ಸುದೀಪ್.. ಗಾಡ್ ಫಾದರ್ ಇಲ್ಲದಿದ್ರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದರ್ಬಾರ್ ಮಾಡ್ತಿದ್ಧಾರೆ. ಇನ್ನೇನು 50 ನೇ ವಯಸ್ಸಿನ ಹೊಸ್ತಿಲಲ್ಲಿರೋ ಕಿಚ್ಚನ ಎನರ್ಜಿಗೆ ಕಿಚ್ಚನೆ ಸಾಟಿ.. ಇನ್ನು ಹರೆಯದ ಯುವಕನ ರೀತಿ ಕಂಗೊಳಿಸೋ ಕಿಚ್ಚನ ಬ್ಯೂಟಿ ಅಂಡ್ ಹೆಲ್ತ್ ಸೀಕ್ರೇಟ್ ಏನಪ್ಪ ಅಂತ ಅವ್ರನ್ನ ಫಾಲೋ ಮಾಡೊ ಮಂದಿ ದುರ್ಬಿನ್ ಹಾಕಿ ಹುಡುಕುತ್ತಾ ಇದ್ದಾರೆ.. ಅದ್ರೂ ಕಿಚ್ಚನ ಎನರ್ಜಿಯ ಗುಟ್ಟು ರಟ್ಟಾಗಿಲ್ಲ.
ಕನ್ನಡ ಚಿತ್ರರಂಗದಲ್ಲಿ ಸ್ಮಾರ್ಟ್ ಅಂಡ್ ಸ್ಟೈಲಿಶ್ ನಟ ಯಾರಪ್ಪ ಅಂತ ಯಾರನ್ನಾದ್ರು ಕೇಳಿದ್ರೆ ಯೋಚನೆ ಮಾಡದೆ ಕಿಚ್ಚ ಸುದೀಪ್ ಅಂತಾರೆ.. ಸಿನಿಮಾ ಅಷ್ಟೇ ಅಲ್ಲಾ ಕ್ರಿಕೆಟ್ ನಲ್ಲೂ ಆಕ್ಟೀವ್ ಆಗಿರೋ ಕಿಚ್ಚನ ಎನರ್ಜಿಗೆ ಹರೆಯದ ಯುವಕರು ಸಲಾಂ ಹೊಡೆಯಲೇ ಬೇಕು
ಇನ್ನು ಕಿಚ್ಚ ಸ್ಪರ್ಶ ಸಿನಿಮಾದಲ್ಲಿ ಇದ್ದಂತೆಯೇ ಈಗಲೂ ಇದ್ದಾರೆ. ಸ್ವಲ್ಪ ಮೀಸೆ ಗಡ್ಡ ಬಿಟ್ಟಿದ್ದಾರೆ ಅನ್ನೋದ್ ಬಿಟ್ರೆ ಅವರ ಬಾಡಿ ಲಾಂಗ್ವೇಜ್ ಏನು ಬದಲಾಗಿಲ್ಲ. ಇನ್ನು ಫೈಲ್ವಾನ್ ಚಿತ್ರದ ನಂತ್ರ ಕಿಚ್ಚ ಜಿಮ್ ನಲ್ಲಿ ವರ್ಕ್ ಔಟ್ ಶುರು ಮಾಡಿರೋ ಕಾರಣ ಇನ್ನು ಖಡಕ್ ಆಗಿದ್ದಾರೆ.
ಇದನ್ನೂ ಓದಿ- ಹಿಂದಿ ಭಾಷೆಗೆ ಕನ್ನಡದ ಭಾಗ್ಯಲಕ್ಷ್ಮೀ ಧಾರವಾಹಿ ಡಬ್ ! ಹಿಂದಿಯಲ್ಲಿಯೂ ಮೇಳೈಸಲಿದೆ ಅಕ್ಕ - ತಂಗಿ ಪ್ರೀತಿ
ಕಿಚ್ಚನ ಆಕ್ಟೀವ್ ನೆಸ್.. ಎನರ್ಜಿ ಹಾಗೂ ಬ್ಯುಸಿ ಶೆಡ್ಯೂಲ್ ನ ಗಮನಿಸಿದ ಮಂದಿ ಕಿಚ್ಚ ಸಿನಿಮಾ , ಕ್ರಿಕೆಟ್ ನಲ್ಲೇ ಕಳೆದೋಗಿದ್ಧಾರೆ. ಅದ್ರೂ ಈ ಗ್ಯಾಫ್ ನಲ್ಲಿ ಅವರ ಬ್ಯೂಟಿ ಅಂಡ್ ಬಾಡಿನ ಯಾವತರ ಮೇಂಟೈನ್ ಮಾಡ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ ಅಂತಿದ್ದಾರೆ. ಅದ್ರೆ ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರ ಅರೋಗ್ಯದ ಗುಟ್ಟು ಏನಪ್ಪ ಅಂದ್ರೆ ಅವರ ಆರೋಗ್ಯಕರ ದಿನಚರಿಯೇ ಅವರ ಆರೋಗ್ಯದ ಗುಟ್ಟು.
ಸಾಮಾನ್ಯವಾಗಿ ಸ್ಟಾರ್ ನಟರು ಬ್ಯಸಿಯಾಗಿರ್ತಾರೆ.. ಪಾರ್ಟಿ ಗೀರ್ಟೀ ಅಂತ ಲೇಟ್ ನೈಟ್ ಮನೆ ಸೇರ್ತಾರೆ. ಯಾವಾಗ ಟೈಮ್ ಸಿಗುತ್ತೆ ಆಗ ಜಿಮ್, ಗ್ಯಾಪ್ ನಲ್ಲಿ ಊಟ ತಿಂಡಿ ಮಾಡ್ತಾರೆ ಅಂತ ಜನ ಅಂದಾಜು ಮಾಡ್ತಾರೆ.. ಅಲ್ಲದೆ ಕೆಲವು ನಟರ ಲೈಫ್ ಸ್ಟೈಲ್ ಕೂಡ ಅದೇ ರೀತಿ ಇರುತ್ತೆ. ಅದರೆ ಕಿಚ್ಚ ಸುದೀಪ್ ಅವರ ಲೈಫ್ ಸ್ಟೈಲ್ ನಿಜಕ್ಕೂ ಅಚ್ಚರಿಯಾಗಿದೆ.
ನಿತ್ಯ ಬೆಳಿಗ್ಗೆ ಶಾರ್ಪ್ 5 ಗಂಟೆಗೆ ಏಳುವ ಕಿಚ್ಚ ಸೂರ್ಯ ಹುಟ್ಟೋಕು ಮುನ್ನ ಅಂದ್ರೆ 6 ಗಂಟೆ ವೇಳೆಗೆ ಬೆಳಗ್ಗಿನ ಉಪಹಾರ ಮುಗಿಸಿ ಬಿಡ್ತಾರಂತೆ.. ಅದಾದ ನಂತ್ರ ಕೊಂಚ ರಿಲ್ಯಾಕ್ಸ್, ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗುವ ಕಿಚ್ಚ 11 ಗಂಟೆ ವೇಳೆಗೆ ಊಟ ಮುಗಿಸಿ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗ್ತಾರೆ. ಇದರ ನಡುವೆ ಕ್ರಿಕೆಟ್, ಜಿಮ್ ಆಕ್ಟೀವಿಟೀಸ್ ನಲ್ಲಿ ಬ್ಯುಸಿಯಾಗುವ ಕಿಚ್ಚ ಮಧ್ಯಾಹ್ನದ ವೇಳೆ ನಿದ್ದೆ ಮಾಡೊದು ತೀರ ವಿರಳ...
ಇದನ್ನೂ ಓದಿ- Tejasswi Prakash : ʼಬಿಗ್‌ಬಾಸ್ ವಿನ್ನರ್ʼ ತೇಜಸ್ವಿ ಹಾಟ್ ಲುಕ್‌ಗೆ ಪ್ಯಾನ್ಸ್ ಫಿದಾ..! ವಿಡಿಯೋ ನೋಡಿ
ಸಂಜೆ ವೇಳೆಗೆ ಫ್ಯಾಮಿಲಿ ಇಲ್ಲ ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡುವ ಕಿಚ್ಚ, ಪಾರ್ಟಿ ಕೂಡ ಮಾಡ್ತಾರೆ.. ಅದ್ರೆ ಕಿಚ್ಚನ ಪಾರ್ಟಿ ಸಂಜೆ 6ರಿಂದ 7 ಗಂಟೆ ಒಳಗೆ ಮುಗಿಯುತ್ತೆ. ಜೊತೆಗೆ 8 ಗಂಟೆಯೊಳಗೆ ಡಿನ್ನರ್ ಮುಗಿಸುವ ಕಿಚ್ಚ ಸುದೀಪ್ ಅರ್ಧ ಗಂಟೆ ಗ್ಯಾಪ್ ಕೊಟ್ಟು ನಿದ್ರೆಗೆ ಜಾರುತ್ತಾರಂತೆ...
ಇನ್ನು ಸ್ಟಾರ್ ನಟ ಅದ್ರು ಕಿಚ್ಚ ಅದ್ಬುತವಾದ ಲೈಫ್ ಸ್ಟೈಲ್ ರೂಢಿಸಿಕೊಂಡಿದ್ದಾರೆ. ಹೋಟೆಲ್ ಪುಡ್ ಗಳಿಂದ ಕೊಂಚ ದೂರ ಇರುವ ಕಿಚ್ಚ ಮನೆಯಲ್ಲಿ ರೆಡಿಯಾದ ಪುಡ್ ಇಲ್ಲವೇ ತನಗೆ ಬೇಕಾದ ಅಡುಗೆನ ತಾನೇ ರೆಡಿ ಮಾಡಿಕೊಳ್ತಾರೆ. ನಾನ್ ವೆಜ್ ಪ್ರಿಯಾರಾಗಿರುವ ಕಿಚ್ಚ ಸುಮಾರು 40 ಕ್ಕೂ ವೆರೈಟಿ ಡಿಶಸ್ ಮಾಡ್ತಾರೆ ಅನ್ನೊದು ಇಂಟ್ರೆಸ್ಟಿಂಗ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ