Leo Collections : ಮೊದಲ ವಾರ ಕಂಪ್ಲೀಟ್.. 'ಲಿಯೋ' ಕಲೆಕ್ಷನ್ ಎಷ್ಟು?

Leo Boxoffice Collection: ವಿಜಯ್ ದಳಪತಿ ಅಭಿನಯದ 'ಲಿಯೋ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸದ್ಯ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮೊದಲ ವಾರದ ಕಲೆಕ್ಷನ್‌ ಡಿಟೇಲ್ಸ್‌ ಹೊರಬಿದ್ದಿದೆ. 

Written by - Savita M B | Last Updated : Oct 27, 2023, 05:34 PM IST
  • ಲಿಯೋ ಸಿನಿಮಾ ಇದೀಗ ಭಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದೆ
  • ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿರುವುದು ಗೊತ್ತೇ ಇದೆ.
  • ವಿಜಯ್‌ ಸಿನಿಮಾ ನಿನ್ನೆ ಯಶಸ್ವಿಯಾಗಿ ಮೊದಲ ವಾರವನ್ನು ಪೂರೈಸಿದೆ.
Leo Collections : ಮೊದಲ ವಾರ ಕಂಪ್ಲೀಟ್.. 'ಲಿಯೋ' ಕಲೆಕ್ಷನ್ ಎಷ್ಟು? title=

Leo-Vijay Thalathy: ತಮಿಳು ಸ್ಟಾರ್ ನಟ ವಿಜಯ್ ದಳಪತಿ ಅವರ ಲಿಯೋ ಸಿನಿಮಾ ಇದೀಗ ಭಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದೆ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿರುವುದು ಗೊತ್ತೇ ಇದೆ. ಅಕ್ಟೋಬರ್ 19 ರಂದು ಬಿಡುಗಡೆಯಾದ ವಿಜಯ್‌ ಸಿನಿಮಾ ನಿನ್ನೆ ಯಶಸ್ವಿಯಾಗಿ ಮೊದಲ ವಾರವನ್ನು ಪೂರೈಸಿದೆ. ಸದ್ಯ ಎರಡನೇ ವಾರಕ್ಕೆ ಕಾಲಿಟ್ಟಿದೆ. 

ಮೊದಲ ದಿನವೇ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಾರೀ ಕಲೆಕ್ಷನ್‌ ಮಾಡಿದೆ. ಇದು ಮೊದಲ ದಿನ ವಿಶ್ವಾದ್ಯಂತ ರೂ.115 ಕೋಟಿ ಕಲೆಕ್ಷನ್ ಮಾಡಿತು ಮತ್ತು ತಮಿಳಿನಲ್ಲಿ ದೊಡ್ಡ ಓಪನಿಂಗ್ ಪಡೆದು, ಅಂದಿನಿಂದ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. 

ಇದನ್ನೂ ಓದಿ-ಲಿಯೋ OTT ರಿಲೀಸ್‌ ಡೇಟ್‌ ಫಿಕ್ಸ್‌..! ಈ ಪ್ಲಾಟ್‌ಫಾರ್ಮ್‌ನಲ್ಲಿ ದಳಪತಿ ಸಿನಿಮಾ ಸ್ಟ್ರೀಮಿಂಗ್‌

ನಾಲ್ಕು ದಿನಗಳಲ್ಲಿ 'ಲಿಯೋ' ವಿಶ್ವಾದ್ಯಂತ ರೂ.405.5 ಕೋಟಿ ಕಲೆಕ್ಷನ್ ಮಾಡಿದ್ದು, ವಿಶ್ವಾದ್ಯಂತ ಅತಿ ಹೆಚ್ಚು ವಾರಾಂತ್ಯ ಕಲೆಕ್ಷನ್ ಪಡೆದ ತಮಿಳು ಚಿತ್ರ ಎಂಬ ದಾಖಲೆ ಸೃಷ್ಟಿಸಿದೆ. ನಿನ್ನೆ ಮೊದಲ ವಾರ ಪೂರೈಸಿದ ಸಿನಿಮಾ ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಈ ವೇಳೆ ಒಂದು ವಾರದಲ್ಲಿ 'ಲಿಯೋ' ಪಡೆದಿರುವ ಕಲೆಕ್ಷನ್ ಸಖತ್ತಾಗಿದೆ ಎಂದು ಹಲವು ಟ್ರೇಡ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಏಳು ದಿನದಲ್ಲಿ ರೂ.500 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ವರದಿ ಮಾಡಲಾಗಿದೆದ್ದು, ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. 

ಏಳನೇ ದಿನ ತಮಿಳುನಾಡಿನಲ್ಲಿ ರೂ.12.9 ಕೋಟಿ, ಕರ್ನಾಟಕದಲ್ಲಿ ರೂ.3.4 ಕೋಟಿ, ಕೇರಳದಲ್ಲಿ ರೂ.2.9 ಕೋಟಿ, ತೆಲುಗು ರಾಜ್ಯಗಳಲ್ಲಿ ರೂ.3.95 ಕೋಟಿ, ಇತರೆ ರೂ.3.9 ಕೋಟಿ ಮತ್ತು ರೂ.6 ಕೋಟಿ ಕಲೆಕ್ಷನ್ ಮಾಡಿದೆ. ಮಿಕ್ಸೆಡ್ ಟಾಕ್ ಮೂಲಕ ಥಿಯೇಟರ್ ನಲ್ಲಿ ಓಡುತ್ತಿರುವ ಈ ಚಿತ್ರ ಸದ್ಯ ರೂ.500 ಕೋಟಿ ಕ್ಲಬ್ ಸೇರಲು ಇನ್ನೂ ಸಮಯ ಹಿಡಿಯಲಿದೆ ಎನ್ನಲಾಗಿದೆ. 

ಇದನ್ನೂ ಓದಿ-ಅಭಿಮಾನಿಯಿಂದ 250 ಕೆಜಿ ತೂಕದ ರಜನಿಕಾಂತ್‌ ಪ್ರತಿಮೆ ನಿರ್ಮಾಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News