ನವದೆಹಲಿ: ಇತ್ತೀಚೆಗೆ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಚಿತ್ರ 'ಛಪಾಕ್' ಮತ್ತು ವಿವಾದಾತ್ಮಕ ನಿಲುವು ತಳೆಯುವ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ದೀಪಿಕಾ 'ಛಪಾಕ್' ಚಿತ್ರದಲ್ಲಿ ಓರ್ವ ಆಸಿಡ್ ದಾಳಿಯಿಂದ ಬದುಕುಳಿದು, ಸಂಘರ್ಷ ನಡೆಸಿದ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರ ಬಿಡುಗಡೆಯಾದಾಗಿನಿಂದ ದೀಪಿಕಾ ಮತ್ತು ಅವರ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಆದರೆ, ದೀಪಿಕಾ ಮಾತ್ರ ವಿವಾದ ಹುಟ್ಟು ಹಾಕುವುದರಿಂದ ಮಾತ್ರ ಹಿಂದೆ ಸರೆದಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮ TIKTOKನಲ್ಲಿ ಬಳಕೆದಾರರು ಮತ್ತೊಮ್ಮೆ ದೀಪಿಕಾ ಅವರನ್ನು ಗುರಿಯಾಗಿಸಿದ್ದಾರೆ. TIKTOK ಮೇಲೆ ಬಳಕೆದಾರರಿಗೆ ದೀಪಿಕಾ ಚಾಲೆಂಜ್ ವೊಂದನ್ನು ನೀಡಿದ್ದಾರೆ. ಆ ಬಳಿಕ ಬಳಕೆದಾರರು ದೀಪಿಕಾ ಅವರನ್ನು ಭಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
Acid attack Make-up ?? How low it can get ??
Shame on you !! @deepikapadukone
— Srikanth (@srikanthbjp_) January 18, 2020
ಕಳೆದ ಕೆಲ ದಿನಗಳಿಂದ ಸತತ ಟ್ರೋಲ್ ಗೆ ಒಳಗಾಗುತ್ತಿರುವ ದೀಪಿಕಾ, ಮತ್ತೊಮ್ಮೆ ಚಿತ್ರದ ಪ್ರಚಾರದ ಹೆಸರಿನಲ್ಲಿ ಬಳಕೆದಾರರ ಟೀಕೆಗೆ ಗುರಿಯಾಗಿದ್ದಾರೆ. ತಮ್ಮ ಚಿತ್ರ 'ಛಪಾಕ್'ನ ಪ್ರಚಾರಕ್ಕಾಗಿ TIKTOK ಮೇಲೆ ಬಳಕೆದಾರರಿಗೆ ಚಾಲೆಂಜ್ ವೊಂದನ್ನು ನೀಡಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ದೀಪಿಕಾ ತಮ್ಮ ಮೂರು ಫೆವರಿಟ್ ಚಿತ್ರಗಳ ಲುಕ್ ಕುರಿತು ಚಾಲೆಂಜ್ ಮಾಡಿದ್ದಾರೆ. ಆದರೆ, ದೀಪಿಕಾ ಮಾಡಿರುವ ಈ ವರ್ತನೆ ಬಳಕೆದಾರರಿಗೆ ಬೇಸರ ತರಿಸಿದ್ದು, ದೀಪಿಕಾಳನ್ನು ಭಾರಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
No @deepikapadukone.This promo isn't cool or cute. It's insensitive & ghastly.
The movie wasn't about you & your make up. It was about a woman scarred for life.And victims like her,whose marks can't be wiped off,unlike your make up.You lost the plot,alas. https://t.co/9Zt8XEmSqI
— Smita Barooah (@smitabarooah) January 18, 2020
ಈ ಚಾಲೆಂಜ್ ನಲ್ಲಿ ದೀಪಿಕಾ ತನ್ನ ಅಭಿಮಾನಿಗಳಿಗೆ 'ಛಪಾಕ್' ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ 'ಮಾಲತಿ' ಪಾತ್ರದ ಮೇಕಪ್ ಅನ್ನು ತನ್ನದಾಗಿಸಿಕೊಳ್ಳಲು ಹೇಳಿದ್ದಾರೆ. ಬಳಿಕ ಬಳಕೆದಾರರು ದೀಪಿಕಾ ಅವರನ್ನು ತುಂಬಾ ಹಾರ್ಟ್ ಲೆಸ್ ಹಾಗೂ ಅಮಾನವೀಯ ಎಂದು ಕರೆಯಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಹಣಕ್ಕಾಗಿ ಕೀಳುಮಟ್ಟಕ್ಕಿಳಿದ ಮಹಿಳೆ ಎಂದೂ ಕೂಡ ಕಾಮೆಂಟ್ ಮಾಡುತ್ತಿದ್ದಾರೆ.
Carrying scars is not "a look" you sick @deepikapadukone pic.twitter.com/5db4x2ze2B
— shraddha 🌸 (@shradxy) January 18, 2020
ದೀಪಿಕಾ ಹಂಚಿಕೊಂಡಿರುವ ಈ ವಿಡಿಯೋವನ್ನು ಮರುಹಂಚಿಕೊಂಡ ಬಳಕೆದಾರರೊಬ್ಬರು, "ಈ ಪ್ರೊಮೊ ಒಳ್ಳೆಯದು ಅಥವಾ ಚೆನ್ನಾಗಿದೆ ಎಂದು ಹೇಳುವುದಿಲ್ಲ. ಇದೊಂದು ಸೂಕ್ಷತೆ ಇಲ್ಲದ ಭಯಾನಕ ಕೃತ್ಯ ಎಂದಿದ್ದಾರೆ. ಚಿತ್ರ ನಿಮ್ಮ ಹಾಗೂ ನಿಮ್ಮ ಮೇಕಪ್ ಕುರಿತು ಅಲ್ಲ, ಚಿತ್ರ ಜೀವನದಲ್ಲಿ ನೊಂದ ಓರ್ವ ಮಹಿಳೆ ಹಾಗೂ ಅವಳಂತೆಯೇ ಜೀವನದಲ್ಲಿ ನೊಂದ ಇತರ ಮಹಿಳೆಯರ ಕಥೆಯಾಗಿದ್ದು, ಅವರ ವ್ಯಥೆಯನ್ನು ನೀವು ನಿಮ್ಮ ಮೇಕಪ್ ನಿಂದ ಅಳಿಸಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.
'ಛಪಾಕ್' ದೀಪಿಕಾ ಅವರ ಬ್ಯಾನರ್ ಅಡಿ ನಿರ್ಮಾಣಗೊಂಡ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ ಕೂಡ ಮಹತ್ವದ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಓರ್ವ ಪತ್ರಕರ್ತನ ಪಾತ್ರ ನಿರ್ವಹಿಸಿದ್ದು, ನ್ಯಾಯದ ಹೋರಾಟದಲ್ಲಿ ಅವರು ಮಾಲತಿಗೆ ಸಾಥ್ ನೀಡುತ್ತಿರುವುದು ಚಿತ್ರದಲ್ಲಿ ಕಂಡುಬಂದಿದೆ.