ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರ ಮದುವೆಯ ಸೀಸನ್ ನಡೆಯುತ್ತಿದೆ. 2023 ರಿಂದ ಇದುವರೆಗೆ, ಅನೇಕ ತಾರೆಯರು ವಿವಾಹವಾಗಿದ್ದಾರೆ. ಮದುವೆಯ ಈ ಪ್ರಕ್ರಿಯೆಯು ಮುಂದುವರೆಯಲಿದೆ. ವಾಸ್ತವದಲ್ಲಿ, ರಾಕುಲ್ ಮತ್ತು ಜಾಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಮಾಧ್ಯಮಗಳ ವರದಿಗಳನ್ನು ನಂಬುವುದಾದರೆ, ಮದುವೆಯ ದಿನಾಂಕದಿಂದ ಸ್ಥಳದವರೆಗೆ ಎಲ್ಲವನ್ನೂ ನಿರ್ಧರಿಸಲಾಗಿದೆ. ಇಬ್ಬರೂ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. (Entertainment News In Kannada / Bollywood News In Kannada)
ಜಾಕಿ ಮತ್ತು ರಾಕುಲ್ ಮದುವೆ ಯಾವಾಗ?
ಈ ಜೋಡಿಯ ವಿವಾಹದ ದಿನಾಂಕವನ್ನು ವಿವಿಧ ಮಾಧ್ಯಮ ವರದಿಗಳಲ್ಲಿ ಬಹಿರಂಗಪಡಿಸಲಾಗಿದೆ. ಫೆಬ್ರವರಿ 21 ರಂದು ರಕುಲ್ ಮತ್ತು ಜಾಕಿ ಪರಸ್ಪರ ಮದುವೆಯಾಗಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಪೇಜ್ಗಳು ಇವರಿಬ್ಬರ ಮದುವೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ.
ಸಿದ್ಧತೆ 2 ದಿನ ಮುಂಚಿತವಾಗಿ ಆರಂಭ
ರಾಕುಲ್ ಮತ್ತು ಜಾಕಿ ಮದುವೆ ತುಂಬಾ ವಿಶೇಷವಾಗಿರಲಿದೆ. ಮದುವೆಯ ಆಮಂತ್ರಣಗಳು ವಿಶೇಷ ವ್ಯಕ್ತಿಗಳಿಗೆ ಹೊಗಲಿವೆ. ಫೆಬ್ರವರಿ 19 ಮತ್ತು 20 ರಂದು ಈ ಜೋಡಿ ವಿವಾಹಪೂರ್ವ ಕಾರ್ಯಕ್ರಮಗಳನ್ನು ಆನಂದಿಸಲಿದೆ. ಬಟ್ಟೆಯಿಂದ ಮೆನುವಿನವರೆಗೆ ಎಲ್ಲವನ್ನೂ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ-Viral Video: ಮಗುವನ್ನು ಹೆಗಲ ಮೇಲೆ ಕೂರಿಸಿ, ಪತಿಯ ಹೊಟ್ಟೆಯ ಮೇಲೆ ನಿಂತು ಪತಿ-ಪತ್ನಿಯ ಸ್ಕಿಪ್ಪಿಂಗ್!
ರಕುಲ್-ಜಾಕಿ ಮದುವೆ ಸ್ಥಳ
ಈ ಕುರಿತು ಬಿತ್ತರಗೊಂಡ ವರದಿಗಳನ್ನು ನಂಬುವುದಾದರೆ, ಇಬ್ಬರೂ ಗೋವಾದಲ್ಲಿ ಮದುವೆಯಾಗುತ್ತಿದ್ದಾರೆ. ಗೋವಾದ ಯಾವ ರೆಸಾರ್ಟ್ ನಲ್ಲಿ ಮದುವೆ ನಡೆಯಲಿದೆ ಮತ್ತು ಥೀಮ್ ಏನು ಎಂಬ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಈ ದಿನಕ್ಕಾಗಿ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಂಪತಿಗಳು ಅಧಿಕೃತವಾಗಿ ಹಂಚಿಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Viral Video: ಕಿಟಕಿಯ ಮೂಲಕ ಪ್ರಯಾಣಿಕನ ಫೋನ್ ಕಳ್ಳತನ ಮಾಡಲು ಹೋದ ಕಳ್ಳ, ಮುಂದೇನಾಯ್ತು ನೀವೇ ನೋಡಿ!
ದಂಪತಿಗಳು ಮದುವೆಯ ದಿನಾಂಕವನ್ನು ಬಹಿರಂಗಪಡಿಸದಿರಲು ನಿರ್ಧರಿಸಿದ್ದಾರೆ
ಮಾಧ್ಯಮದವರೊಂದಿಗೆ ಮಾಡತಾಡಿರುವ ಮೂಲಗಳ ಪ್ರಕಾರ, "ಅವರ ಮದುವೆಗೆ ಸಿದ್ಧತೆಗಳು ನಡೆದಿವೆ, ಆದರೆ ಅವರು ದಿನಾಂಕ ಸೇರಿದಂತೆ ಎಲ್ಲಾ ವಿವರಗಳನ್ನು ಮರೆಮಾಡಿದ್ದಾರೆ" ಎನ್ನಲಾಗಿದೆ. ಎಲ್ಲಾ ಬಾಲಿವುಡ್ ತಾರೆಯರಂತೆ ರಕುಲ್ ಮತ್ತು ಜಾಕಿ ಮದುವೆ ಕೂಡ ತುಂಬಾ ವಿಶೇಷವಾಗಿರಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ