ಬೆಂಗಳೂರು : ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ. ಅಜ್ಞಾತವಾಸಿ ಸಿನಿಮಾದ ನಂತರ ಸಿನಿ ವೃತ್ತಿಗೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದರು. 2019ರ ಚುನಾವಣೆಯಲ್ಲಿ ಜನಸೇನಾ ಪಕ್ಷದೊಂದಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ 2019 ರ ಚುನಾವಣೆಯಲ್ಲಿ ಪವನ್ ಸೋಲು ಅನುಭವಿಸಬೇಕಾಯಿತು.
ವೈಎಸ್ ಜಗನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಅದಾದ ನಂತರ ಒಂದೆಡೆ ಸಿನಿಮಾ ಮಾಡುತ್ತಲೇ ಇನ್ನೊಂದೆಡೆ ಜಗನ್ ಆಡಳಿತದ ವಿರುದ್ಧ ಪವರ್ ಸ್ಟಾರ್ ಪವನ್ ಕಲ್ಯಾಣ್ ಹರಿಹಾಯ್ದರು. ಹಾಗಾಗಿ ಅವರು ನಾಯಕನಾಗಿ ನಟಿಸಿದ್ದ ವಕೀಲ್ ಸಾಬ್ ಚಿತ್ರ ತೆರೆಕಂಡರೂ ಕಲೆಕ್ಷನ್ ವಿಚಾರದಲ್ಲಿ ಸಮಸ್ಯೆಯಾಗಿತ್ತು. ಭೀಮ್ಲಾ ನಾಯಕ್ ಸಿನಿಮಾ ಈಗಾಗಲೇ ಪ್ರೇಕ್ಷಕರನ್ನು ತಲುಪಿ ಹಿಟ್ ಸಿನಿಮಾ ಪಟ್ಟಿ ಸೇರಿಕೊಂಡಿದೆ.
ಇದನ್ನೂ ಓದಿ: ಡಿ.30ಕ್ಕೆ ʼಜಮಾಲಿಗುಡ್ಡʼದಲ್ಲಿ ಸಿಗ್ತಾರೆ ಡಾಲಿ ಧನಂಜಯ್..!
ಈಗ ಅವರು ನಾಯಕನಾಗಿ ಮೂರು ಚಿತ್ರಗಳ ಬಗ್ಗೆ ಘೋಷಿಸಿದ್ದಾರೆ. ಕ್ರಿಶ್ ನಿರ್ದೇಶನದಲ್ಲಿ ಹರಿಹರ ವೀರಮಲ್ಲು, ಹರೀಶ್ ಶಂಕರ್ ನಿರ್ದೇಶನದಲ್ಲಿ ಭಾವದಿಯುಡು ಭಗತ್ ಸಿಂಗ್, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಒಂದು ಚಿತ್ರ ಮತ್ತು ಬಂಡ್ಲ ಗಣೇಶ್ ನಿರ್ಮಾಣದಲ್ಲಿ ಮತ್ತೊಂದು ಚಿತ್ರ. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ಪವನ್ ಕಲ್ಯಾಣ್ ಎಪಿ ರಾಜಕೀಯದತ್ತ ಗಮನಹರಿಸಿರುವ ಹಿನ್ನಲೆಯಲ್ಲಿ ಹರಿಹರ ವೀರಮಲ್ಲು ಚಿತ್ರವನ್ನು ಮಾತ್ರ ಪೂರ್ಣಗೊಳಿಸಲಿದ್ದಾರೆ. ಚುನಾವಣೆ ಹಿನ್ನೆಲೆ ಉಳಿದೆರಡು ಚಿತ್ರಗಳನ್ನು ಕೈ ಬಿಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.
ನಿರ್ದೇಶಕ ಹರೀಶ್ ಶಂಕರ್ ಹಾಗೂ ಸುರೇಂದರ್ ರೆಡ್ಡಿ ಅವರಿಗೆ ಬೇರೆ ಸಿನಿಮಾ ಮಾಡುವಂತೆ ಪವನ್ ತಂಡ ಸಂದೇಶ ರವಾನಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಹರೀಶ್ ಶಂಕರ್ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಅವರು ಸಲ್ಮಾನ್ ಖಾನ್ ಗೆ ಡೇಟ್ಸ್ ಕೊಟ್ಟ ನಂತರವೇ ಮತ್ತೆ ಹೈದರಾಬಾದ್ ಗೆ ಬರಲು ಮುಂದಾಗಿದ್ದಾರಂತೆ.
ಇದನ್ನೂ ಓದಿ: Alia To Deepika : ವಿದೇಶದಲ್ಲಿ ಜನಿಸಿ ಭಾರತೀಯ ಸಿನಿರಂಗದಲ್ಲಿ ಮಿಂಚುತ್ತಿರುವ ನಟಿಯರು ಇವರು
ಈಗ ಬಾಲಿವುಡ್ ಗಿಂತ ಟಾಲಿವುಡ್ ಸೇಫ್ ಎಂದು ಭಾವಿಸಿರುವ ಬಾಲಿವುಡ್ ತಾರೆಯರು ನಮ್ಮ ತೆಲುಗು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಲು ಹಿಂದೆ ಸರಿಯುತ್ತಿಲ್ಲ. ಅಂತಹ ಸೂಪರ್ ಹಿಟ್ ತೆಲುಗು ನಿರ್ದೇಶಕನನ್ನು ಸಲ್ಮಾನ್ ಖಾನ್ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡೋಣ. ಪ್ರಾಜೆಕ್ಟ್ ಟೇಕ್ ಆಫ್ ಆಗಿದ್ದರೆ, ಇದನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುವ ಸಾಧ್ಯತೆಯಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.