ಇಬ್ಬರು ಸ್ಟಾರ್ ಹೀರೋಗಳ ಜೊತೆ ಅಫೇರ್.. ಎಂಗೇಜ್ ಮೆಂಟ್ ನಂತರ ಮದುವೆ ಕ್ಯಾನ್ಸಲ್.. 41 ವಯಸ್ಸಿನಲೂ ಈ ನಟಿ ಇನ್ನೂ ಒಂಟಿಯಾಗಿರಲು ಇದೇ ಕಾರಣ..!

Star Souch Actress: ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್, ಟಬು, ಅಮೀಶಾ ಪಟೇಲ್ ಅವರಂತಹ ಅನೇಕರು ಲವ್ ಮತ್ತು ಬ್ರೇಕಪ್‌ನಿಂದ ಸಿಂಗಲ್ ಆಗಿ ಉಳಿಯಲು ನಿರ್ಧರಿಸಿದ್ದಾರೆ. ಅದೇ ರೀತಿ ಈ ದಕ್ಷಿಣದ ನಟಿಯೂ ಸಿಂಗಲ್ ಆಗಿ ಉಳಿಯಲು ನಿರ್ಧರಿಸಿದ್ದಾರೆ..   

Written by - Savita M B | Last Updated : Jul 11, 2024, 10:31 AM IST
  • ತ್ರಿಶಾ ಕೃಷ್ಣನ್ ಸೌತ್ ಚಿತ್ರರಂಗದ ಅತೀ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು.
  • ತಮಿಳು ಮತ್ತು ತೆಲುಗಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ತ್ರಿಶಾ ಹಿಂದಿ ಚಿತ್ರಗಳತ್ತ ಮುಖ ಮಾಡಿದರು
ಇಬ್ಬರು ಸ್ಟಾರ್ ಹೀರೋಗಳ ಜೊತೆ ಅಫೇರ್.. ಎಂಗೇಜ್ ಮೆಂಟ್ ನಂತರ ಮದುವೆ ಕ್ಯಾನ್ಸಲ್.. 41 ವಯಸ್ಸಿನಲೂ ಈ ನಟಿ ಇನ್ನೂ ಒಂಟಿಯಾಗಿರಲು ಇದೇ ಕಾರಣ..! title=

Trisha Krinan: ತ್ರಿಶಾ ಕೃಷ್ಣನ್ ಸೌತ್ ಚಿತ್ರರಂಗದ ಅತೀ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಒಬ್ಬರು. ತಮಿಳು ಮತ್ತು ತೆಲುಗಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ತ್ರಿಶಾ ಹಿಂದಿ ಚಿತ್ರಗಳತ್ತ ಮುಖ ಮಾಡಿದರು. ಸೌತ್ ಕ್ವೀನ್ ಎಂದು ಕರೆಯಲ್ಪಡುವ ಈ ಚೆಲುವೆ 2010 ರಲ್ಲಿ ಅಕ್ಷಯ್ ಕುಮಾರ್ ಅವರ ಹಿಟ್ ಕಾಮಿಡಿ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು.  

ಇದರ ನಂತರ ತ್ರಿಶಾ ಕೃಷ್ಣನ್ ಹಿಂದಿ ಸಿನಿಮಾಗಳಿಂದ ದೂರವಾಗಿದ್ದಾರೆ. ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಬಿಜಿ ಬ್ಯುಸಿ ಹೀರೋಯಿನ್ ಆಗಿದ್ದಾರೆ.. ತ್ರಿಷಾಗೆ ಅಪಾರ ಅಭಿಮಾನಿ ಬಳಗವಿದೆ. ತ್ರಿಷಾ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ಸುದ್ದಿಯಲ್ಲಿದ್ದಾರೆ.  

ಇದನ್ನೂ ಓದಿ-ನಾನು ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದೇನೆ.. ಸ್ಟಾರ್ ನಟಿಯ ಶಾಕಿಂಗ್‌ ಸ್ಟೇಟ್‌ಮೆಂಟ್!‌

ತ್ರಿಶಾ ಕೃಷ್ಣನ್ ತನ್ನ ಜೀವನದಲ್ಲಿ ಹಲವು ಬಾರಿ ಪ್ರೀತಿಸಿ ಮೋಸ ಹೋಗಿದ್ದಾಳೆ. ಈ ಹಿಂದೆ ನಟಿ ಇಬ್ಬರು ಸೂಪರ್‌ಸ್ಟಾರ್‌ಗಳೊಂದಿಗೆ ಅಫೇರ್ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು.‌ ನಂತರ ಗ್ಲಾಮರ್ ಲೋಕದಿಂದ ದೂರವಿರುವ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು... ಆದರೆ ಮದುವೆಗೂ ಮುನ್ನವೇ ಅವರ ಸಂಬಂಧ ಮುರಿದುಬಿತ್ತು.

ಇದನ್ನೂ ಓದಿ-ʼನನಗೆ ಇನ್ನೊಬ್ಬ ಮಗಳಿದ್ದಾಳೆʼ ಜಾನ್ವಿ.. ಖುಷಿ.. ಬಿಟ್ಟು ನಟಿ ಶ್ರೀದೇವಿಗೆ ಮತ್ತೊಬ್ಬ ಮಗಳಿದ್ದಾಳಾ?

2005 ರಲ್ಲಿ, ತ್ರಿಷಾ ಮತ್ತು ದಳಪತಿ ವಿಜಯ್ ಅವರ ಸಂಬಂಧವು ಸುದ್ದಿಯಲ್ಲಿತ್ತು. ಇವರಿಬ್ಬರೂ ಗಿಲ್ಲಿ (ತಮಿಳಿನಲ್ಲಿ) ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಮಯದಲ್ಲಿ ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಅಲ್ಲದೇ ಇತ್ತೀಚೆಗಷ್ಟೇ ತ್ರಿಷಾ ಜೊತೆಗಿನ ಸಂಬಂಧದಿಂದಾಗಿ ದಳಪತಿ ವಿಜಯ್ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಇದಲ್ಲದೆ, ವಿಜಯ್ ದಳಪತಿ ನಂತರ, ರಾಣಾ ದಗ್ಗುಬಾಟಿ ತ್ರಿಷಾ ಜೀವನಕ್ಕೆ ಪ್ರವೇಶಿಸಿದ್ದಾರೆ ಎಂಬ ವರದಿಗಳು ಬಂದವು. ಇಬ್ಬರೂ ಮದುವೆಯಾಗಲು ಮುಂದಾಗಿದ್ದಾರೆ ಎನ್ನಲಾಗಿತ್ತು.. ಆದರೆ ಸಮಾಜದ ಒತ್ತಡಕ್ಕೆ ಮಣಿದು ಮದುವೆಯಾಗಲು ಇಷ್ಟವಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ. 41 ವರ್ಷದ ತ್ರಿಶಾ ಕೃಷ್ಣನ್ ಒಂಟಿ ಜೀವನ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News