ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್ ಬಳಸಿ ಬೀದಿ ನಾಯಿಗಳ ಸಮೀಕ್ಷೆ..!

VayDyn, ಸ್ಟಾರ್ಟ್ ಅಪ್ @ARTPARK IISc ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ನಗರದ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಡುವ ಬೀದಿ ನಾಯಿಗಳ ಎಣಿಕೆ ಕಾರ್ಯದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಪಾಲಿಕೆಯೊಂದಿಗೆ ಕೈಜೋಡಿಸಿದೆ. 

Written by - Bhavya Sunil Bangera | Edited by - Krishna N K | Last Updated : Jul 19, 2023, 05:39 PM IST
  • ಬಿಬಿಎಂಪಿ ವ್ಯಾಪ್ತಿಯಲ್ಲಿ 11ನೇ ಜುಲೈ 2023 ರಿಂದ ಬೀದಿ ನಾಯಿಗಳ ಸಮೀಕ್ಷೆ ಪ್ರಾರಂಭ.
  • VayDyn, ಸ್ಟಾರ್ಟ್ ಅಪ್ @ARTPARK IISc ಡ್ರೋನ್ ತಂತ್ರಜ್ಞಾನವನ್ನು ಬಳಸಿ ಸಮೀಕ್ಷೆ.
  • ಬೀದಿ ನಾಯಿಗಳ ಸಮೀಕ್ಷೆಗೆ ಡ್ರೋನ್ ಗಳನ್ನು ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲು.
ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್ ಬಳಸಿ ಬೀದಿ ನಾಯಿಗಳ ಸಮೀಕ್ಷೆ..! title=

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 11ನೇ ಜುಲೈ 2023 ರಿಂದ ಬೀದಿ ನಾಯಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಈ ವರ್ಷ ನಾವು ಕ್ಷೇತ್ರ ಸಮೀಕ್ಷಾ ತಂಡಗಳ ಜೊತೆಗೆ, VayDyn, ಸ್ಟಾರ್ಟ್ ಅಪ್ @ARTPARK IISc(ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ನಗರದ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಡುವ ಬೀದಿ ನಾಯಿಗಳ ಎಣಿಕೆ ಕಾರ್ಯದ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಪಾಲಿಕೆಯೊಂದಿಗೆ ಕೈಜೋಡಿಸಿದೆ. ಬೀದಿ ನಾಯಿಗಳ ಸಮೀಕ್ಷೆಗೆ ಡ್ರೋನ್ ಗಳನ್ನು ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲನೆಯ ಯೋಜನೆಯಾಗಿದೆ.

ಮೊದಲ ಹಂತದಲ್ಲಿ ಹುಳಿಮಾವು, ಸಾರಕ್ಕಿ, ಸೀಗೇಹಳ್ಳಿ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳನ್ನು ಪರಿಕಲ್ಪನೆಯ ಪುರಾವೆಯಾಗಿ ಆಯ್ಕೆ ಮಾಡಲಾಗಿರುತ್ತದೆ. ಡ್ರೋನ್ ಗಳು ನಾಯಿಗಳ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬೀದಿ ನಾಯಿಗಳನ್ನು ಗುರುತಿಸಲು ಯಶಸ್ವಿಯಾಗಿದೆ. 

ಇದನ್ನೂ ಓದಿ: ಸುಭದ್ರ, ಸಮೃದ್ಧ ಮತ್ತು ಸುಸ್ಥಿರ ದೇಶಕ್ಕಾಗಿ ಭಾರತದ ಆಯ್ಕೆ INDIA: ಕಾಂಗ್ರೆಸ್

ಡ್ರೋನ್ ಸಮೀಕ್ಷೆಯ ದತ್ತಾಂಶವನ್ನು ಮುಂಬರುವ ದಿನಗಳಲ್ಲಿ ವಿಶ್ಲೇಷಿಸಲಾಗುವುದು ಮತ್ತು ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ತಂಡವು ಸಂಗ್ರಹಿಸಿದ ದತ್ತಾಂಶದೊಂದಿಗೆ(ಡೇಟಾ) ತಾಳೆ ಮಾಡಲಾಗುತ್ತದೆ. ದತ್ತಾಂಶವು ಪರಸ್ಪರ ಸಮಾನತೆ ಹೊಂದಿದ್ದರೆ, ಮುಂಬರುವ ವರ್ಷಗಳಲ್ಲಿ ನಗರದಲ್ಲಿನ ಎಲ್ಲಾ ಸುರಕ್ಷಿತ ಮತ್ತು ಮುಕ್ತ ಹಾರಾಟದ ಸ್ಥಳಗಳನ್ನು ಡ್ರೋನ್ ಗಳೊಂದಿಗೆ ಸಮೀಕ್ಷೆ ಮಾಡಲಾಗುತ್ತದೆ. ಸಾಂಪ್ರದಾಯಿಕ ಕ್ಷೇತ್ರ ಸಮೀಕ್ಷೆ ವಿಧಾನಗಳಿಗೆ ಹೋಲಿಸಿದರೆ ಸಮಯ ಮತ್ತು ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಉಳಿತಾಯವಾಗಲಿದೆ. ಹಗಲು ಮತ್ತು ರಾತ್ರಿಯ ಸಮಯದಲ್ಲೂ ಕೂಡ ಸಮೀಕ್ಷೆಯನ್ನು ಕೈಗೊಳ್ಳಬಹುದಾಗಿದ್ದು, ಸಮೀಕ್ಷೆಯ ನಿರ್ದಿಷ್ಟತೆಯನ್ನು ಹೆಚ್ಚಿಸುತ್ತದೆ. 
 
ಪೈಲಟ್ ಯೋಜನೆಯ ಸಮಯದಲ್ಲಿ, ತಂಡವು ವಾಯುಪ್ರದೇಶದ ನಿಯಮಗಳು ಮತ್ತು ಸುರಕ್ಷತೆಯ ಕಾಳಜಿಗಳೊಂದಿಗೆ ನಗರ ವಾಯುಪ್ರದೇಶಗಳಲ್ಲಿ ಡ್ರೋನ್ ಗಳನ್ನು ನಿರ್ವಹಿಸುವಲ್ಲಿ ಕೆಲವು ಸವಾಲುಗಳನ್ನು ಗುರುತಿಸಿಲಾಗಿದೆ. ಆದರೆ ಸ್ವಾಯತ್ತ ಡ್ರೋನ್ ಗಳಂತಹ ಹೊಸ ಸ್ವದೇಶಿ ತಂತ್ರಜ್ಞಾನಗಳೊಂದಿಗೆ ಸ್ವತಂತ್ರ ಡ್ರೋನ್ ಗಳನ್ನು ಬಳಸಿಕೊಂಡು ಮತ್ತು ಉತ್ತಮ ಆನ್-ಬೋರ್ಡ್ ಕ್ಯಾಮೆರಾ ಸಿಸ್ಟಮ್ ಗಳನ್ನು ಉಪಯೋಗಿಸಿಕೊಂಡು ಇಂತಹ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಮಾಡಬಹುದೆಂದು ಆಶಿಸಬಹುದಾಗಿದೆ. ರೋಗದ ಕಣ್ಗಾವಲು, ನಿರ್ಮಾಣ ತಪಾಸಣೆ, ಅತಿಕ್ರಮಣಗಳು, ವಿಪತ್ತು ನಿರ್ವಹಣೆ ಇತ್ಯಾದಿಗಳಂತಹ ವ್ಯಾಪಕ ಶ್ರೇಣಿಯ ಉಪಯೋಗಳಿಗಾಗಿ ನಗರ ವಾಯುಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಡ್ರೋನ್ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News