ನವದೆಹಲಿ: ಕನ್ನಡತಿ ಹಾಗೂ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಮದುವೆಯ ವಿಚಾರವಾಗಿ ಹಲವಾರು ತಿಂಗಳಿಂದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳಿಗೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಪದ್ಮಾವತ್ ಚಿತ್ರದಲ್ಲಿ ಪದ್ಮಾವತಿಯ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ಮದುವೆಯ ವಿಚಾರವಾಗಿ ಹಬ್ಬಿರುವ ರೂಮರ್ ಗಳಿಗೆ ಪ್ರತಿಕ್ರಿಯಿಸುತ್ತಾ "ಸಾಧ್ಯವಾದಷ್ಟು ನಾನು ಈ ವಿಚಾರವನ್ನು ಪ್ರತ್ಯೇಕವಾಗಿಡಲು ಇಚ್ಚಿಸುತ್ತೇನೆ, ಆದರೆ ನಾನು ಈ ಎಲ್ಲ ಊಹಾಪೋಹಗಳ ಜೊತೆ ಫೈಟ್ ಮಾಡುವುದಾಗಲಿ ಅಥವಾ ನಿಯಂತ್ರಿಸಲು ಹೋಗುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೀಪಿಕಾ ತಮ್ಮ ತಂದೆ ತಾಯಿಗಳನ್ನು ದಂಪತಿಗಳಾಗಿ ತಮಗೆ ರೋಲ್ ಮಾಡೆಲ್ ಎಂದು ತಿಳಿಸಿದರು.