ಭಾರತದಲ್ಲಿ NO.1 ವಿಶ್ವದಲ್ಲಿ 9ನೇ ಸ್ಥಾನ : 2023ರ Google ನಲ್ಲಿ ಹೆಚ್ಚು ಹುಡುಕಲ್ಪಟ್ಟ ನಟಿ ಯಾರು ಗೊತ್ತೆ..!

Most searched actress on Google 2023 : 2024 ಹತ್ತಿರ ಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ನೆಟಿಜನ್‌ಗಳು ಈ ವರ್ಷದ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೂಗಲ್ ಹೊಸ ವರದಿಯನ್ನು ಬಹಿರಂಗಪಡಿಸಿದ್ದು, ಈ ವರ್ಷ ನೆಟ್ಟಿಗರು ಅತಿ ಹೆಚ್ಚಾಗಿ ಈ ನಟಿಯ ಬಗ್ಗೆ ಹುಡುಕಾಟ ನಡೆಸಿದ್ದಾರೆ.

Written by - Krishna N K | Last Updated : Dec 12, 2023, 05:02 PM IST
  • ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ.
  • ನೆಟಿಜನ್‌ಗಳು ಈ ವರ್ಷದ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
  • ಈ ವರ್ಷ ನೆಟ್ಟಿಗರು ಅತಿ ಹೆಚ್ಚಾಗಿ ಈ ನಟಿಯ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಭಾರತದಲ್ಲಿ NO.1 ವಿಶ್ವದಲ್ಲಿ 9ನೇ ಸ್ಥಾನ : 2023ರ Google ನಲ್ಲಿ ಹೆಚ್ಚು ಹುಡುಕಲ್ಪಟ್ಟ ನಟಿ ಯಾರು ಗೊತ್ತೆ..! title=

Kiara Advani : ಬಾಲಿವುಡ್‌ನಲ್ಲಿ ಅನೇಕ ಹಿರಿಯ ಸ್ಟಾರ್ ಹೀರೋಯಿನ್‌ಗಳಿದ್ದಾರೆ. ಸಾಲು ಸಾಲು ಚಿತ್ರಗಳ ಮೂಲಕ ಸಖತ್‌ ಕ್ರೇಜ್‌ನಲ್ಲಿ ಮುಂದುವರಿದಿದ್ದಾರೆ. ಅದರೆ ಈ ಬಾರಿ ನೆಟ್ಟಿಗರು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಐಶ್ವರ್ಯಾ ರೈ, ಕರೀನಾ ಕಪೂರ್ ಸೇರಿದಂತೆ ಇತರೆ ನಟಿಯರನ್ನು ಕೈ ಬಿಟ್ಟು, ಕಿಯಾರಾ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. 

ಹೌದು.. ಈ ವರ್ಷ ಕಿಯಾರಾ ಕುರಿತು ನೆಟ್ಟಿಗರು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ್ದಾರೆ. ಇದಕ್ಕೆ ಕಾರಣ ಕಿಯಾರಾ ಮದುವೆ. ವಿಶೇಷವಾಗಿ ಅವರ ಮದುವೆಯ ಫೋಟೋಗಳ ಸಖತ್‌ ಸದ್ದು ಮಾಡಿದ್ದವು. ಅಲ್ಲದೆ, ಕೆಲವರು ಕಿಯಾರಾ ಪತಿ ಯಾರು? ಅವನು ಏನು ಮಾಡುತ್ತಿದ್ದಾನೆ? ಇವರಿಬ್ಬರ ಪ್ರೀತಿ ಶುರುವಾಗಿದ್ದು ಹೇಗೆ? ಮದುವೆ ಯಾವಾಗ? ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಚ್‌ ಮಾಡಿದ್ದರು. ಇದರೊಂದಿಗೆ, ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಕಿರಾಯಾ ನಂಬರ್ 1 ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:2023 ರಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಟಾಪ್ 10 ಸಿನಿಮಾಗಳಿವು

ಜಾಗತಿಕ ಹುಡುಕಾಟದಲ್ಲಿ 9ನೇ ಸ್ಥಾನ : ಕಿಯಾರಾ ಅಡ್ವಾಣಿ ಭಾರತೀಯ ಗೂಗಲ್ ಸರ್ಚ್‌ನಲ್ಲಿ ಮಾತ್ರವಲ್ಲ, ಗ್ಲೋಬರ್ ವೈಡ್ ಗೂಗಲ್ ಸರ್ಚ್ ಟಾಪ್ 10 ಸೆಲೆಬ್ರಿಟಿ ಲಿಸ್ಟ್ 9ನೇ ಸ್ಥಾನ ಪಡೆದಿದ್ದಾಳೆ. ಇದಲ್ಲದೆ, ಗ್ಲೋಬರ್ ಹುಡುಕಾಟದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸೆಲೆಬ್ರಿಟಿ ಎಂದು ಗುರುತಿಸಲ್ಪಟ್ಟಿದ್ದಾರೆ. ಒಟ್ಟಿನಲ್ಲಿ ಕಿಯಾರಾ ಅಡ್ವಾಣಿ ಈ ವರ್ಷ ಗೂಗಲ್ ಕ್ವೀನ್ ಎಂಬ ಬಿರುದನ್ನು ಪಡೆದಿದ್ದಾರೆ.  

6ನೇ ಸ್ಥಾನ ಸಿದ್ಧಾರ್ಥ್ ಮಲ್ಹೋತ್ರಾ : ಗೂಗಲ್ ಸರ್ಚ್ ಲಿಸ್ಟ್ ನಲ್ಲಿ ಕಿಯಾರಾ ಅಡ್ವಾಣಿ ಮೊದಲ ಸ್ಥಾನ ಪಡೆದರೆ, ಪತಿ ಸಿದ್ಧಾರ್ಥ್ ಮಲ್ಹೋತ್ರಾ 6ನೇ ಸ್ಥಾನ ಪಡೆದಿದ್ದಾರೆ. ಕಿಯಾರಾ ಜೊತೆಗಿನ ಮದುವೆಯ ಹಿನ್ನಲೆಯಲ್ಲಿ ಅವರ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಆಸಕ್ತಿ ತೋರಿದ್ದರು. ಸಿದ್ಧಾರ್ಥ್ ಬಾಲಿವುಡ್ ನಲ್ಲಿ ಯಂಗ್ ಹೀರೋ ಆಗಿ ಮುಂದುವರೆದಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ 2021 ರಲ್ಲಿ 'ಶೇರ್ಷಾ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 

ಇದನ್ನೂ ಓದಿ:73 ವರ್ಷ... ಸಿನಿ ಜಗತ್ತಿಗೆ ಸೂಪರ್ ಸ್ಟಾರ್... ರಜನಿಕಾಂತ್ ಆಸ್ತಿ ಮೌಲ್ಯವೆಷ್ಟು..?

ಅತಿ ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅಗ್ರಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ಕ್ರಿಕೆಟಿಗ ಶುಭಂ ಗಿಲ್, ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ, ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ ಯೂಟ್ಯೂಬರ್ ಎಲ್ವಿಸ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News