ನವದೆಹಲಿ: ದೆಹಲಿ ಮೂಲಕದ ಸುಮಂತ್ ಕಾಂತ್ ಕೌಲ್ ಎನ್ನುವ ವೈದ್ಯನೊಬ್ಬ ಈಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಗೆ ಖಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿ ಈಗ ಆಕೆಗೆ ಪಂಗನಾಮ ಹಾಕಿ ಪೋಲಿಸರ ಅತಿಥಿಯಾಗಿದ್ದಾನೆ.
19 ರ ಹರೆಯದ ಯುವತಿಯೊಬ್ಬಳು ತನಗಿರುವ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವೈಧ್ಯನ ಮೊರೆಹೋಗಿದ್ದಳು. ಆದರೆ ಈ ವೈದ್ಯ ಆಕೆಯ ಖಾಯಿಲೆಯನ್ನು ಗುಣಪಡಿಸದೆ ಯುವತಿಯ ಬಳಿ ಸುಮಾರು 50 ಸಾವಿರ ಹಣವನ್ನು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಯುವತಿಯಂತೆ ಹಲವು ದೂರುಗಳು ಈ ವೈದ್ಯನ ಮೇಲೆ ಬಂದಿದ್ದರಿಂದಾಗಿ ಸಂಶಯ ವ್ಯಕ್ತಪಡಿಸಿದ ಪೊಲೀಸರು ಈಗ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಅವರು ದೆಹಲಿ ಹಾಗೂ ಮುಂಬಯಿನಲ್ಲಿ ಸಂಸ್ಥೆಗಳನ್ನು ಹೊಂದಿದ್ದು ಬರುವ ರೋಗಿಗಳ ಹತ್ತಿರ ಖಾಯಿಲೆಯನ್ನು ಗುಣಪಡಿಸದೇ ಕೇವಲ ಹಣವನ್ನು ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.