ದೇಹದ ಪ್ರೋಟೀನ್ ಕೊರತೆ ನೀಗಿಸುತ್ತದೆ ಈ ಐದು ಬಗೆಯ ಸಸ್ಯಾಹಾರ

High protein vegan foods : ಸಸ್ಯ ಆಧಾರಿತ ಆಹಾರಗಳು ಹೈಫೋಲಿಕ್ ಆಮ್ಲ, ಸೆಲೆನಿಯಮ್, ಸತು, ಫೈಟೊನ್ಯೂಟ್ರಿಯೆಂಟ್‌ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಲ್ಲದೆ, ಅವು ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ. 

Written by - Ranjitha R K | Last Updated : Aug 15, 2022, 02:23 PM IST
  • ಪ್ರೋಟೀನ್ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ.
  • ಪ್ರೋಟೀನ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಸೋಯಾ ಆಧಾರಿತ ಅಧಿಕ ಪ್ರೋಟೀನ್ ಆಹಾರ
 ದೇಹದ ಪ್ರೋಟೀನ್ ಕೊರತೆ ನೀಗಿಸುತ್ತದೆ ಈ ಐದು ಬಗೆಯ ಸಸ್ಯಾಹಾರ  title=
High protein vegan foods (file photo)

High protein vegan foods : ಪ್ರೋಟೀನ್ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಪ್ರೋಟೀನ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ವೈರಸ್‌ಗಳು, ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳಿಂದಲೂ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಗಾಯಗಳನ್ನು ಗುಣಪಡಿಸುವಲ್ಲಿ, ಸ್ನಾಯುಗಳನ್ನು  ಮೂಳೆಗಳನ್ನು ಬಲಪಡಿಸುವಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸೇವಿಸುವ ಅನೇಕ ಆಹಾರಗಳು ಪ್ರೋಟೀನ್ ಮೂಲವಾಗಿರುತ್ತದೆ.  ಅದರಲ್ಲೂ ಸಸ್ಯ ಆಧಾರಿತ ಆಹಾರಗಳು ಹೈಫೋಲಿಕ್ ಆಮ್ಲ, ಸೆಲೆನಿಯಮ್, ಸತು, ಫೈಟೊನ್ಯೂಟ್ರಿಯೆಂಟ್‌ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಲ್ಲದೆ, ಅವು ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ. 

 1. ಸೋಯಾ ಆಧಾರಿತ ಅಧಿಕ ಪ್ರೋಟೀನ್ ಆಹಾರ:
ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸೋಯಾಬೀನ್ ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದನ್ನು ಸಂಪೂರ್ಣ ಪ್ರೋಟೀನ್ ಎಂದು ಕರೆಯಲಾಗುತ್ತದೆ. ಸೋಯಾಬೀನ್ ನಲ್ಲಿ 36 ರಿಂದ 56 ಪ್ರತಿಶತದಷ್ಟು ಪ್ರೋಟೀನ್ ಅಂಶ ಇರುತ್ತದೆ. ಇದಲ್ಲದೆ, ಇದು ಫೋಲೇಟ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ. 

ಇದನ್ನೂ ಓದಿ : Health Tips: ಡಯಾಬಿಟಿಸ್ ರೋಗಿಗಳಿಗೆ ವರದಾನಕ್ಕೆ ಸಮಾನ ಈ ಹಣ್ಣು, ವಿಟಮಿನ್ ಗಳ ಪವರ್ ಹೌಸ್ ಎನ್ನಲಾಗುತ್ತದೆ

2-ಎಳ್ಳು  : 
ಎಳ್ಳುವಿನಲ್ಲಿ  ಪ್ರೋಟೀನ್ ಸಮೃದ್ಧವಾಗಿರುತ್ತದೆ. ಕೇವಲ ಒಂದು ಟೀಚಮಚ ಎಳ್ಳಿನಿಂದ ಸುಮಾರು 3 ಗ್ರಾಂ ಪ್ರೋಟೀನ್ ಪಡೆಯಬಹುದು. ಎಳ್ಳನ್ನು ನೆನೆಸಿ ಸೇವಿಸಿದರೆ, ಅದು ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಳ್ಳಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

3. ಮೊಳಕೆ ಕಾಳು : 
ಮೊಳಕೆ ಕಾಳುಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಸುಮಾರು 343 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ನಮಗೆ 23 ಗ್ರಾಂ ಪ್ರೋಟೀನ್ ನೀಡುತ್ತದೆ. ಅಷ್ಟೇ ಅಲ್ಲ, ಜೀರ್ಣಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ
 
4-  ಹೆಸರು ಬೇಳೆ :
ಹೆಸರು ಬೆಲೆ  ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಒಂದು ಕಪ್ ಬೇಯಿಸಿದ ಹೆಸರು ಬೇಳೆಯಲ್ಲಿ ಬಿ ಜೀವಸತ್ವಗಳು ಮತ್ತು ಮೆಗ್ನೀಸಿಯಮ್ ಜೊತೆಗೆ ಸುಮಾರು 10-12 ಗ್ರಾಂ ಪ್ರೋಟೀನ್ ಇರುತ್ತದೆ. 

5-ಕೆಂಪು  ಸೊಪ್ಪು : 
ಪ್ರೋಟೀನ್ ಹೊಂದಿರುವ ಏಕೈಕ ಎಲೆಗಳ ತರಕಾರಿ ಇದು. ಒಂದು ಕಪ್ ಮಾಗಿದ ಕೆಂಪು ಸೊಪ್ಪಿನಲ್ಲಿ 8-10 ಗ್ರಾಂ ಪ್ರೋಟೀನ್ ದೇಹ ಸೇರುತ್ತದೆ. ಇದರ ಜೊತೆಗೆ, ಈ ಸೊಪ್ಪಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ವಿಟಮಿನ್ ಕೆ, ಹಾಗೆಯೇ ಆಂಥೋಸಯಾನಿನ್ ಗಳು ಮತ್ತು ಫೈಬರ್ ಕೂಡ ಅಧಿಕವಾಗಿದೆ. 

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News