ನವದೆಹಲಿ : ತರಕಾರಿಗಳಲ್ಲೇ ಆರೋಗ್ಯಕ್ಕೆ ಅತ್ಯಂತ ಲಾಭದಾಯಕ ತರಕಾರಿ ತೊಂಡೆಕಾಯಿ (Ivy Gourd). ತೊಂಡೆಕಾಯಿಯಲ್ಲಿ ವಿಟಮಿನ್, ಮಿನರಲ್ ಭರ್ಜರಿ ಸಂಗ್ರಹವಿದೆ. 100 ಗ್ರಾಂ ತೊಂಡೆಕಾಯಿ ತಿಂದರೆ 1.4 ಮಿಲಿ ಗ್ರಾಂ ಅಯರನ್, .08 ಮಿಲಿಗ್ರಾಂ ವಿಟಮಿನ್ ಬಿ2, 0.07 ಮಿಲಿಗ್ರಾಂ ವಿಟಮಿನ್ ಬಿ1, 1.6 ಫೈಬರ್ ಮತ್ತು 40 ಮಿಲಿಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ.
ಬ್ಲಡ್ ಶುಗರ್ (Blood sugar), ಬೊಜ್ಜು, ಹೊಟ್ಟೆ ನೋವು, ಹೃದಯದ ಕಾಯಿಲೆ (Heart disease) ಇದ್ದರೆ ನಿಮ್ಮ ಡಯಟ್ ನಲ್ಲಿ ಖಂಡಿತಾ ತೊಂಡೆಕಾಯಿ ಸೇರಿಸಿ. ಹತ್ತು ಹಲವು ಲಾಭ ಆರೋಗ್ಯಕ್ಕೆ ಇದೆ.
1. ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ
ತೊಂಡೆ ಕಾಯಿ (Ivy Gourd) ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಪ್ರಾಚೀನ ಕಾಲದಲ್ಲಿಯೂ ತೊಂಡೆಕಾಯಿ ಬಳಕೆ ಇತ್ತು. ತೊಂಡೆಕಾಯಿಯ ಕಾಂಡ ಮತ್ತು ಎಲೆ ಕೂಡಾ ಔಷಧಿಯ ರೂಪದಲ್ಲಿ ತಿನ್ನಲಾಗುತ್ತದೆ. ಅದು ಕೂಡಾ ಬ್ಲಡ್ ಶುಗರ್ (Blood sugar) ನಿಯಂತ್ರಣಕ್ಕೆ ದಿವ್ಯೌಷಧ.
ಇದನ್ನೂ ಓದಿ : Tasty Tea: ಸಾಧಾರಣ ಟೀಯನ್ನು ಆರೋಗ್ಯಕರ , ರುಚಿಕರವಾಗಿಸಲು ಹೀಗೆ ಮಾಡಿ
2. ಬೊಜ್ಜು ಕರಗಿಸುತ್ತದೆ.
ಅಮೇರಿಕದ ಒಂದು ಸಂಶೋಧನೆ ಪ್ರಕಾರ ತೊಂಡೆಕಾಯಿ ಬೊಜ್ಜು (Fat) ಕರಗಿಸುತ್ತದೆ. ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ.
3. ಸುಸ್ತು ಕಡಿಮೆ ಮಾಡುತ್ತದೆ.
ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಸುಸ್ತು ಬೇಗ ಆಗುತ್ತದೆ. ತೊಂಡೆಕಾಯಿಯಲ್ಲಿ ಕಬ್ಬಿಣದಾಂಶ ಸಮೃದ್ಧವಾಗಿದೆ. ಹಾಗಾಗಿ ಫಿಟ್ನೆಸ್ (Fitness) ಬೇಕಾದರೆ ನಿಮ್ಮ ಡಯಟ್ ನಲ್ಲಿ ತೊಂಡೆಕಾಯಿ ಇರಲಿ.
ಇದನ್ನೂ ಓದಿ : Tamarind Seeds Benefits : ಪುರುಷರ ಆರೋಗ್ಯಕ್ಕೆ ಪ್ರಯೋಜನಕಾರಿ ಹುಣಸೆ ಬೀಜ : ಇಲ್ಲಿದೆ ಅದರ ಪಾಕ ವಿಧಾನ!
4. ಸಾಕಷ್ಟು ಫೈಬರ್ ಸಿಗುತ್ತದೆ.
ಫೈಬರ್ ಆಹಾರದಲ್ಲಿದ್ದಾಗ ಜೀರ್ಣಕ್ರಿಯೆ (digestion) ಚೆನ್ನಾಗಿ ಆಗುತ್ತದೆ. ತೊಂಡೆಕಾಯಿ ಫೈಬರ್ ನಿಂದಲೂ ಸಮೃದ್ಧ. ಹಾಗಾಗಿ ಹೊಟ್ಟೆ ಸಮಸ್ಯೆ ಬೇಗ ದೂರ ಆಗುತ್ತದೆ.
5. ಹೃದಯದ ಮಿತ್ರ
ತೊಂಡೆಕಾಯಿಯಲ್ಲಿ ಫ್ಲೆವನಾಯ್ಡ್ ಸಿಗುತ್ತದೆ. ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಯುಕ್ತವಾಗಿದೆ.. ಇದು ಹೃದಯಕ್ಕೆ ಸುರಕ್ಷೆ ಒದಗಿಸುತ್ತದೆ. ಹಾರ್ಟ್ ಸಮಸ್ಯೆ ಹೆಚ್ಚಿಸುವ ಪ್ರಿರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.