ನವದೆಹಲಿ: Strengthen teeth Home Remedies - ದೇಹದ ಬಗ್ಗೆ ಕಾಳಜಿ ವಹಿಸುವುದರ ಹೊರತಾಗಿ, ನಾವು ನಮ್ಮ ಹಲ್ಲುಗಳನ್ನು ಸಹ ನೋಡಿಕೊಳ್ಳುವುದು ಬಹಳ ಮುಖ್ಯ, ಆದರೆ ಫಿಟ್‌ನೆಸ್‌ನ (Health Tips)ಬಗ್ಗೆ ಕಾಳಜಿ ವಹಿಸುವಾಗ ನಾವು ಈ ವಿಷಯವನ್ನು ಮರೆತುಬಿಡುತ್ತೇವೆ. ಹಲ್ಲುಗಳ ಬಗ್ಗೆ ಕಾಳಜಿ ವಹಿಸದೆ ಹೋದಲ್ಲಿ ಹಲ್ಲಿನಲ್ಲಿ ರಂಧ್ರ, ಒಸಡು ಕಾಯಿಲೆ, ಮುರಿದ ಹಲ್ಲುಗಳು, ಸೂಕ್ಷ್ಮ ಹಲ್ಲುಗಳು ಮುಂತಾದ ಸಮಸ್ಯೆಗಳು ಉದ್ಭವಿಸಿ ಕಿರಿಕಿರಿ ಉಂಟಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಗಳು ಪ್ರಾರಂಭವಾಗುವ ಮೊದಲು ಪರಿಹಾರವನ್ನು ಕಂಡುಹಿಡಿಯುವುದು ಬಹಳ ಮುಖ್ಯ. ವಯಸ್ಸಾದಂತೆ, ಜನರು ಹಲ್ಲು ಸಡಿಳುಗೊಳ್ಳುವ ಸಮಸ್ಯೆ ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಯಿಂದ ನೀವು ಸಹ ತೊಂದರೆಗೀಡಾಗಿದ್ದರೆ, ನಾವು ನಿಮಗಾಗಿ ಕೆಲವು ಮನೆಮದ್ದುಗಳನ್ನು (Home Remedies) ಸೂಚಿಸುತ್ತಿದ್ದೇವೆ.
ಇದನ್ನೂ ಓದಿ-ಮೊಬೈಲ್ ನೋಡುತ್ತಾ ಮಲಗುವ ಅಭ್ಯಾಸ ಖಂಡಿತಾ ಬೇಡ..!
ಆಮ್ಲಾ ಪೌಡರ್ - ಆಮ್ಲಾ ಪೌಡರ್ ಹಲ್ಲುಸಡಿಲಗೊಳಿಸುವ ಸಮಸ್ಯೆ ಸಮಸ್ಯೆಗೆ ಪರಿಣಾಮಕಾರಿ ಮದ್ದು. ಅದರ ನಿಯಮಿತ ಬಳಕೆಯಿಂದ, ಹಲ್ಲುಗಳ ಟಿಶ್ಯೂ ಗುಣಮುಖವಾಗುತ್ತದೆ ಮತ್ತು ಮತ್ತೊಮ್ಮೆ ಬೆಳವಣಿಗೆಯಾಗುತ್ತದೆ. ಇದು ಹಲ್ಲುಗಳನ್ನು ಬಲಪಡಿಸುತ್ತದೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಒಂದು ಟೀ ಚಮಚ ಆಮ್ಲಾ ಪುಡಿ ಮತ್ತು 2 ಟೀ ಚಮಚ ನೀರನ್ನು ಮಿಶ್ರಣ ಮಾಡಿ. ಇದರ ನಂತರ, ಇದನ್ನು ಹೆಬ್ಬರಳ ಮೇಲೆ ಸ್ವಲ್ಪ ಹಾಕಿ ಮತ್ತು ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ಮಸಾಜ್ ಮಾಡಿ.
ಇದನ್ನೂ ಓದಿ-ಪೋಷಕಾಂಶಗಳ ಆಗರವಾಗಿರುವ ಈ ಆಹಾರ ಸೇವನೆಯಿಂದಲೂ ಕೂಡ ತೂಕ ಇಳಿಯುತ್ತದೆ
ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಸಪ್ಲಿಮೆಂಟ್ ಸೇವನೆ - ಹಲ್ಲುಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವನೆ ಅಗತ್ಯ. ಒಂದು ವೇಳೆ ನೀವು ಕಡಿಮೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಿದರೆ, ಅದರ ಪರಿಣಾಮವು ನಿಮ್ಮ ಮೂಳೆಗಳು ಮತ್ತು ಹಲ್ಲುಗಳ(Teeth Problem) ಮೇಲೆ ಕಂಡುಬರುತ್ತದೆ.
ಇದನ್ನೂ ಓದಿ-Drinking Water: ಅಧಿಕ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿ..!
ಬೆಳ್ಳುಳ್ಳಿ -ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ ಮತ್ತು ಹಲ್ಲುಗಳ ಮೇಲೆ ಅವುಗಳ ಪರಿಣಾಮವಾಗಲು ಬಿಡುವುದಿಲ್ಲ. ಈ ಸಂದರ್ಭದಲ್ಲಿ, ಬೆಳ್ಳುಳ್ಳಿಯ ಒಂದು ಕುಡಿಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಎರಡು ತುಂಡುಗಳಾಗಿ ಕತ್ತರಿಸಿ. ಬಳಿಕ ಒಂದು ಭಾಗವನ್ನು ಪ್ರಭಾವಿತಗೊಂಡ ಹಲ್ಲಿನ ಒಸಡಿನಲ್ಲಿಡಿ. (Gum Care) ಇದರಿಂದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.