Weight Loss: ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು

Sudden Weight Loss: ಇಂದಿನ ಕಾಲದಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ಆದರೆ, ನೀವು ಏನೂ ಮಾಡದ ಇದ್ದಕ್ಕಿದ್ದಂತೆ ಹೆಚ್ಚು ತೂಕ ಕಳೆದುಕೊಳ್ಳುತ್ತಿದ್ದರೆ ಅದು ಅಪಾಯಕಾರಿ ಕಾಯಿಲೆಯ ಸಂಕೇತವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Aug 10, 2022, 12:37 PM IST
  • ನೀವು ಯಾವುದೇ ಕಸರತ್ತಿಲ್ಲದೆ ನಿಮ್ಮ ತೂಕ ಇಳಿಕೆ ಆಗುತ್ತಿದ್ದರೆ ಎಚ್ಚರದಿಂದಿರಿ.
  • ಏಕೆಂದರೆ ಇದು ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು.
  • ಹಠಾತ್ ತೂಕ ನಷ್ಟಕ್ಕೆ ಇಲ್ಲಿವೆ ಕೆಲವು ಕಾರಣಗಳು
Weight Loss: ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು  title=
Sudden weight loss

ಹಠಾತ್ ತೂಕ ನಷ್ಟಕ್ಕೆ ಕಾರಣಗಳು:  ಪ್ರಸ್ತುತ ಬಹುತೇಕ ಮಂದಿಗೆ ತೂಕ ಹೆಚ್ಚಳ ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು, ತೂಕವನ್ನು ಕಳೆದುಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಯಾವುದೇ ಕಸರತ್ತಿಲ್ಲದೆ ನಿಮ್ಮ ತೂಕ ಇಳಿಕೆ ಆಗುತ್ತಿದ್ದರೆ ಎಚ್ಚರದಿಂದಿರಿ. ಏಕೆಂದರೆ ಇದು ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು.

ಹೌದು, ನೀವು ಏನು ಮಾಡದೆ ನಿಮ್ಮ ತೂಕ ಗಣನೀಯವಾಗಿ ಇಳಿಕೆ ಆದರೆ ಇದು ಪ್ರಮುಖ ಕಾಯಿಲೆಯ ಸಂಕೇತವೂ ಆಗಿರಬಹುದು. ಈ ಬಗ್ಗೆ ಎಚ್ಚರದಿಂದಿರುವುದು ಬಹಳ ಮುಖ್ಯ. 

ಹಠಾತ್ ತೂಕ ನಷ್ಟ ಈ ಕಾಯಿಲೆಗಳ ಲಕ್ಷಣವಾಗಿರಬಹುದು:
ಮಧುಮೇಹ:

ಮಧುಮೇಹದ ಸಮಸ್ಯೆಯಿಂದ ತೂಕ ಕಡಿಮೆಯಾಗುವುದು ಸಾಮಾನ್ಯ. ಏಕೆಂದರೆ ದೇಹದಲ್ಲಿ ಸಕ್ಕರೆಯ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದಾಗ ಅದು ತೂಕದ ಮೇಲೆ ಪರಿಣಾಮ ಬೀರುತ್ತದೆ.   ಒಂದು ಹಂತದ ನಂತರ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ತೂಕ ಕಡಿಮೆ ಆಗುತ್ತದೆ.  ಆದ್ದರಿಂದ ನೀವು ಹಠಾತ್ ತೂಕ ನಷ್ಟದಿಂದ ತೊಂದರೆಗೊಳಗಾಗಿದ್ದರೆ, ಮೊದಲು ನಿಮ್ಮ ಶುಗರ್ ಟೆಸ್ಟ್ ಮಾಡಿಸಿ.

ಇದನ್ನೂ ಓದಿ- ಮಂಗನ ಕಾಯಿಲೆ ಭೀತಿಯ ನಡುವೆಯೇ ಹೊಸ ವೈರಸ್‌ ಪತ್ತೆ: ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಕ್ಯಾನ್ಸರ್: 
ಹಠಾತ್ ತೂಕ ನಷ್ಟ ಕ್ಯಾನ್ಸರ್ ಕಾಯಿಲೆಯ ಲಕ್ಷಣವೂ ಆಗಿರಬಹುದು. ಇಂದಿನ ಕಾಲದಲ್ಲಿ, ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆಯಲ್ಲ. ಆದರೆ, ಇದನ್ನು ಗುಣಪಡಿಸಲು ಸಮಯಕ್ಕೆ ಸರಿಯಾಗಿ ಅಥವಾ ಆರಂಭದಲ್ಲಿಯೇ ಅದನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ. ಈ ರೋಗಲಕ್ಷಣಗಳಲ್ಲಿ ಒಂದು ತೂಕ ನಷ್ಟ. ನಿಮ್ಮ ದೇಹವು ಕ್ಯಾನ್ಸರ್ನೊಂದಿಗೆ ಹೋರಾಡುತ್ತಿರುವಾಗ, ದೇಹದ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೂಕವು ಇದ್ದಕ್ಕಿದ್ದಂತೆ ಕಡಿಮೆಯಾಗಲು ಪ್ರಾರಂಭಿಸಿದರೆ, ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ- ರಾಜ್ಯದಲ್ಲಿ ಕೋವಿಡ್ ಹೆಚ್ಚಳ, ಮಂಕಿಪಾಕ್ಸ್ ಭೀತಿ- ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದ ಆರೋಗ್ಯ ಸಚಿವ

ನೀರಿನ ನಷ್ಟ:
ದೇಹದಲ್ಲಿ ಅನೇಕ ಬಾರಿ ಹೆಚ್ಚು ನೀರಿನ ನಷ್ಟ ಉಂಟಾಗುತ್ತದೆ, ಆಗಲೂ ವ್ಯಕ್ತಿಯ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.  ಅತಿಯಾದ ಮೂತ್ರವಿಸರ್ಜನೆಯಿಂದ ಮಾತ್ರವಲ್ಲ ಅತಿಯಾದ ಬೆವರುವಿಕೆಯಿಂದಲೂ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದು ತೂಕ ನಷ್ಟಕ್ಕೂ ಕಾರಣವಾಗಬಹುದು. ಈ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News