Disadvantages of Eating Bitter Gourd: ಹಾಗಲಕಾಯಿ ರುಚಿಯಲ್ಲಿ ತುಂಬಾ ಕಹಿಯಾಗಿರುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ, ಹಾಗಲಕಾಯಿ ವಿಶೇಷವಾಗಿ ಆರೋಗ್ಯಕರ ಹೃದಯಕ್ಕೆ ತುಂಬಾ ಒಳ್ಳೆಯದು. ಆದರೆ ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ. ಹೌದು, ಹಾಗಲಕಾಯಿಯನ್ನು ನಿತ್ಯ ಸೇವಿಸುವುದರಿಂದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಯಾವ ಜನರು ಹಾಗಲಕಾಯಿಯನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಈ ಜನರು ಮರೆತು ಕೂಡ ಹಾಗಲಕಾಯಿಯನ್ನು ಸೇವಿಸಬಾರದು
ಗರ್ಭಿಣಿಯರು ಸೇವಿಸಬಾರದು
ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಋತುಚಕ್ರದ ಹರಿವು ಹೆಚ್ಚಾಗುತ್ತದೆ. ಇದೇ ವೇಳೆ, ಗರ್ಭಾವಸ್ಥೆಯಲ್ಲಿ ಹಾಗಲಕಾಯಿಯ ಅತಿಯಾದ ಸೇವನೆಯು ಗರ್ಭಪಾತಕ್ಕೆ ಕಾರಣವಾಗಬಹುದು, ಆದ್ದರಿಂದ ಗರ್ಭಿಣಿಯರು ಹಾಗಲಕಾಯಿ ರಸವನ್ನು ಕುಡಿಯುವುದನ್ನು ತಪ್ಪಿಸಬೇಕು.
ಯಕೃತ್ತು ಹಾನಿಗೊಳಗಾಗಬಹುದು
ಮಧುಮೇಹಿಗಳು ಹಾಗಲಕಾಯಿಯ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು. ಆದರೆ ಇದು ನಿಮ್ಮ ಯಕೃತ್ತಿಗೆ ಅಪಾಯಕಾರಿ ಎಂದು ಸಾಬೀತಾಗಬಹುದು. ಇದು ಯಕೃತ್ತಿಗೆ ಹಾನಿ ಉಂಟುಮಾಡಬಹುದು. ಆದ್ದರಿಂದ, ಮಧುಮೇಹಿಗಳು ಹಾಗಲಕಾಯಿಯನ್ನು ಪ್ರತಿದಿನ ಸೇವಿಸುವುದನ್ನು ತಪ್ಪಿಸಬೇಕು. ಇನ್ನೊಂದೆಡೆ, ನಿಮಗೆ ಯಕೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಹಾಗಲಕಾಯಿಯನ್ನು ಮರೆತೂ ಕೂಡ ಸೇವಿಸಬಾರದು.
ಇದನ್ನೂ ಓದಿ-Corn Silk: ಮೆಕ್ಕೆ ಜೋಳದ ಜುಟ್ಟಿನಲ್ಲಡಗಿದೆ ಆರೋಗ್ಯದ ಗುಟ್ಟು
ರಕ್ತದಲ್ಲಿ ಕಡಿಮೆ ಸಕ್ಕರೆ ಹೊಂದಿರುವ ರೋಗಿಗಳು ಸೇವಿಸಬಾರದು
ಹಾಗಲಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಯಾರ ರಕ್ತದಲ್ಲಿನ ಸಕ್ಕರೆ ಕಡಿಮೆ ಇರುತ್ತದೆಯೋ, ಅಂಥವರು ಹಾಗಲಕಾಯಿಯನ್ನು ಸೇವಿಸಬಾರದು. . ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಇದನ್ನೂ ಓದಿ-Taming Thyroid: ಈ ಚಹಾ ಸೇವನೆಯಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯ ಜೊತೆಗೆ ಈ ಕಾಯಿಲೆಗಳನ್ನು ಕೂಡ ಗುಣಪಡಿಸಬಹುದು
(ಹಕ್ಕುತ್ಯಾಗ- ಈ ಲೇಖನದಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.