ಬೆಂಗಳೂರು : ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದರ ಸಹಾಯದಿಂದ ಮಾತ್ರ ದೇಹದಲ್ಲಿ ತುಂಬಿರುವ ತ್ಯಾಜ್ಯ ಹೊರಬರಲು ಸಾಧ್ಯ. ಇದು ರಕ್ತವನ್ನು ಫಿಲ್ಟರ್ ಮಾಡುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.
ಕಿಡ್ನಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ಅದನ್ನು ಗುರುತಿಸುವುದು ಮತ್ತು ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸುವುದು ಮುಖ್ಯವಾಗಿದೆ.ಹಲವು ಬಾರಿ ಕಿಡ್ನಿ ಸಮಸ್ಯೆಯ ಲಕ್ಷಣಗಳು ಬೆಳಗಿನ ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತದೆ.
ಬೆಳಿಗ್ಗೆ ಆಯಾಸ ಮತ್ತು ದೌರ್ಬಲ್ಯ :
ಬೆಳಿಗ್ಗೆ ಏಳುತ್ತಿದ್ದಂತೆಯೇ ದಣಿಯುವ ಅನುಭವವಾಗುತ್ತಿದ್ದರೆ ಇದು ಗಂಭೀರ ಲಕ್ಷಣವಾಗಿರಬಹುದು. ಮೂತ್ರಪಿಂಡದ ಸಮಸ್ಯೆಗಳಿಂದಾಗಿ, ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಬೆಳಿಗ್ಗೆ ಎದ್ದ ನಂತರ ಸುಸ್ತಾಗಬಹುದು.
ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು :
ಬೆಳಗಿನ ಮೂತ್ರದ ಬಣ್ಣ ಮತ್ತು ಪ್ರಮಾಣವು ಮೂತ್ರಪಿಂಡದ ಆರೋಗ್ಯದ ಪ್ರಮುಖ ಸೂಚಕವಾಗಿದೆ.ಮೂತ್ರವು ತುಂಬಾ ಹಳದಿ, ನೊರೆ ಅಥವಾ ಅಸಾಮಾನ್ಯ ಬಣ್ಣದ್ದಾಗಿದ್ದರೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನ್ನಿಸುತ್ತಿದ್ದರೆ ಇದು ಮೂತ್ರಪಿಂಡದ ಸಮಸ್ಯೆಯ ಸಂಕೇತವಾಗಿರಬಹುದು.
ಹೊಟ್ಟೆ ಸೆಳೆತ :
ಬೆಳಿಗ್ಗೆ ಎದ್ದಾಗ ಹೊಟ್ಟೆಯಲ್ಲಿ ಊತ ಅಥವಾ ಸೆಳೆತದ ಅನುಭವವಾದರೆ ಅದು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಸಂಕೇತವಾಗಿರಬಹುದು.
ಇದನ್ನೂ ಓದಿ : ಪ್ರತಿದಿನ ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿದರೆ.. ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿ ನೀರಾಗುತ್ತೆ..!
ತುಂಬಾ ಬಾಯಾರಿಕೆ :
ಬೆಳಿಗ್ಗೆ ಎದ್ದಾಗ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ಇದು ಕೂಡಾ ಕಿಡ್ನಿ ವೈಫಲ್ಯದ ಚಿಹ್ನೆಯಾಗಿರಬಹುದು. ಮೂತ್ರಪಿಂಡದ ಸಮಸ್ಯೆಗಳಿಂದಾಗಿ, ದೇಹದಲ್ಲಿನ ನೀರಿನ ಸಮತೋಲನವು ತೊಂದರೆಗೊಳಗಾಗಬಹುದು.ಇದರಿಂದಾಗಿ ಹೆಚ್ಚು ಬಾಯಾರಿಕೆಯ ಅನುಭವವಾಗುವುದು.
ಚರ್ಮದಲ್ಲಿ ತುರಿಕೆ :
ಮೂತ್ರಪಿಂಡದ ಸಮಸ್ಯೆಗಳಿಂದಾಗಿ, ವಿಷವು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದು ಚರ್ಮದ ಮೇಲೆ ತುರಿಕೆ, ದದ್ದುಗಳು ಅಥವಾ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಬೆಳಿಗ್ಗೆ ಎದ್ದಾಗ ಚರ್ಮದಲ್ಲಿ ಅಸಾಮಾನ್ಯ ತುರಿಕೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ.
(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.