ಮುಂಬೈ: ದೇಶದಲ್ಲಿ ಅಗ್ಗದ ವಿಮಾನ ಸೇವೆ ಒದಗಿಸಲು ಮುಂದಾಗಿರುವ AirAsia, ಒಂದು ಸೀಮಿತ ಅವಧಿಗೆ ತನ್ನ ಏರ್ ಟಿಕೆಟ್ ನಲ್ಲಿ 20 ಪ್ರತಿಶತ ರಿಯಾಯಿತಿಗಳನ್ನು ನೀಡಿದೆ. ಏರ್ ಏಷ್ಯಾ ಇಂಡಿಯಾದಲ್ಲಿ ಟಾಟಾ ಗ್ರೂಪ್ ನ 51% ಮತ್ತು ಮಲೇಶಿಯಾ ಏರ್ ಏಷ್ಯಾ 49% ಷೇರು ಪಾಲನ್ನು ಹೊಂದಿದೆ.
ಏರ್ ಏಷ್ಯಾ ಇಂಡಿಯಾದ ಈ 7 ದಿನಗಳ ಮಾರಾಟ ಫೆಬ್ರವರಿ 18 ರಂದು ಆರಂಭವಾಗಲಿದೆ ಎಂದು ಹೇಳಿಕೆ ನೀಡಿದೆ. ಫೆಬ್ರವರಿ 25 ಮತ್ತು ಜುಲೈ 31 ರ ನಡುವಿನ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ಬುಕ್ ಮಾಡಬಹುದು.
ಮಾಹಿತಿ ಪ್ರಕಾರ, ಈ ರಿಯಾಯಿತಿ ಕಂಪನಿಯ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ನಿಂದ ಎಲ್ಲಾ ಬುಕಿಂಗ್ನಲ್ಲಿ ಲಭ್ಯವಾಗುತ್ತದೆ. ಪ್ರವಾಸಿಗರು ತಮ್ಮ ದೇಶೀಯ ಮತ್ತು ವಿದೇಶಿ ಪ್ರಯಾಣ ಎರಡರಲ್ಲೂ ಇದರ ಲಾಭ ಪಡೆಯಬಹುದು.
ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಸುನಿಲ್ ಭಾಸ್ಕರನ್, ಈ ವಿನಾಯಿತಿ ಯೋಜನೆಯೊಂದಿಗೆ ಪ್ರಯಾಣಿಕರು ತಮ್ಮ ರಜಾದಿನಗಳಲ್ಲಿ ಕಡಿಮೆ ಅವಧಿಯಲ್ಲಿ ವಿಶ್ವದ ಅನೇಕ ಸ್ಥಳಗಳಿಗೆ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ.