ಬಾರಾಬಂಕಿ: ಉತ್ತರ ಪ್ರದೇಶದ ಸಾತ್ರಿಕ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಆರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.
ಬಾಲಕಿಯು 65 ವರ್ಷ ವಯಸ್ಸಿನ ಪನ್ನಿ ಲಾಲ್ ಎನ್ನುವ ವ್ಯಕ್ತಿಯು ಅತ್ಯಚಾರಗೈದಿದ್ದಾನೆ ಎಂದು ಹೇಳಲಾಗಿದೆ.ಈ ಘಟನೆಯು ಒಂದು ವಾರದ ಹಿಂದೆ ಬಾಲಕಿಯು ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಅವಳನ್ನು ಅತ್ಯಾಚಾರಗೈದು ಪರಾರಿಯಾಗಿದ್ದನೆಂದು ಸಾತ್ರಿಕ್ ಪೋಲಿಸ್ ಠಾಣೆಯ ಉಸ್ತುವಾರಿ ಅತುಲ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.
ಈ ಘಟನೆಯ ನಂತರ ಬಾಲಕಿಯ ತಂದೆ ಮಂಗಳವಾರದಂದು ದೂರು ದಾಖಲಿಸಿದ್ದಾರೆ. ಆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.