ಸರ್ವಧರ್ಮ ಆರೋಗ್ಯ ಕೇಂದ್ರವಾಗಿ ಬದಲಾದ ಮಸೀದಿ! ಎಲ್ಲಿ ಗೊತ್ತಾ?

ಕೊಳೆಗೇರಿ ನಿವಾಸಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಸ್ಜಿದ್-ಇ-ಇಷ್ಕ್ ಮಸೀದಿಯನ್ನೇ ಆರೋಗ್ಯ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ.

Last Updated : Nov 14, 2018, 06:31 PM IST
ಸರ್ವಧರ್ಮ ಆರೋಗ್ಯ ಕೇಂದ್ರವಾಗಿ ಬದಲಾದ ಮಸೀದಿ! ಎಲ್ಲಿ ಗೊತ್ತಾ? title=

ಹೈದರಾಬಾದ್: ನಗರದ ಬಡಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ಸಲುವಾಗಿ ಮಸೀದಿಯೊಂದು ಆರೋಗ್ಯ ಸೇವಾ ಕೇಂದ್ರವಾಗಿ ಬದಲಾಗಿದೆ. 

ನಗರದ ಕೊಳೆಗೇರಿ ನಿವಾಸಿಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಸ್ಜಿದ್-ಇ-ಇಷ್ಕ್ ಮಸೀದಿಯನ್ನೇ ಆರೋಗ್ಯ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಸಹಯೋಗದಲ್ಲಿ ಬಡಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. 

ಈ ಮಸೀದಿಯ ವ್ಯಾಪ್ತಿಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು, 9 ಕೊಳೆಗೇರಿಗಳಿವೆ. ಇಲ್ಲಿನ್ ಅಜನರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯ್ ಒದಗಿಸುವ ಕಾರ್ಯವನ್ನು ಎನ್'ಜಿಒ ಸಹಯೋಗದಲ್ಲಿ ಮಾಡಲಾಗುತ್ತಿದೆ. ಇದರಿಂದ ಬಡಜನರಿಗೆ ಬಹಳ ಉಪಯೋಗವಾಗುತ್ತಿದೆ ಎಂದು ಹೆಚ್ ಹೆಚ್ ಎಫ್ ಟ್ರಸ್ಟಿ ಮುಜ್ತಾಬಾ ಆಸ್ಕರಿ ಹೇಳಿದ್ದಾರೆ. 

ಅಷ್ಟೇ ಅಲ್ಲದೆ ಪ್ರತಿನಿತ್ಯ ಈ ಆರೋಗ್ಯ ಕೇಂದ್ರದಲ್ಲಿ 40 ರಿಂದ 45 ಮಂದಿ  ಚಿಕಿತ್ಸೆ ಪಡೆಯುತ್ತಾರೆ. ಜೊತೆಗೆ ಬಡವರಿಗೆ ಸಾರಿಗೆ ಸೌಲಭ್ಯವನ್ನೂ ಒದಗಿಸುತ್ತೇವೆ. ಈ ರೀತಿ ಹೈದರಾಬಾದಿನ 13 ಕ್ಷೇತ್ರಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದಿದ್ದು, ಸ್ವಯಂ ಸೇವಕರು ಎಲ್ಲೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಸ್ವಯಂ ಸೇವಾ ಸಂಸ್ಥೆ ನಿರ್ದೇಶಕ ಫರೀದ್ ಹೇಳಿದ್ದಾರೆ. 
 

Trending News