ನವ ದೆಹಲಿ: ನಾಗರಿಕ ಸೇವೆಗಳಿಗೆ ಆಧಾರ್ ಗಡುವನ್ನು 31 ಮಾರ್ಚ್ ರ ತನಕ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಈ ಹಿಂದೆ ಡಿಸೆಂಬರ್ 31, 2017 ರ ವರೆಗೆ ವಿಸ್ತರಿಸಲಾಗಿದ್ದ ಆಧಾರ್ ಲಿಂಕ್ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಆಧಾರ್ ಅನ್ನು ಮೊಬೈಲ್, ಬ್ಯಾಂಕ್ ಖಾತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಡಿಸೆಂಬರ್ 31, 2017 ರವರೆಗೆ ಲಿಂಕ್ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.