ನವದೆಹಲಿ: ಭಾರತೀಯ ಜನತಾ ಪಕ್ಷದ 'ಅಚ್ಚೇ ದಿನ್' ಹೇಳಿಕೆಯನ್ನು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಚ್ಚೇ ದಿನ್ ಪ್ರಣಾಳಿಕೆಯನ್ನು ಬಿಜೆಪಿ ಚುನಾವಣೆ ಆದ್ಮೇಲೆ ಬಿಡುಗಡೆ ಮಾಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲೇಶ್, "ಪ್ರಧಾನಿಯವರ 'ಅಚ್ಚೇ ದಿನ್' ಚುನಾವಣಾ ಪ್ರಣಾಳಿಕೆ ಚುನಾವಣೆ ಆದ ಮೇಲೆ ಬಿಡುಗಡೆ ಆಗುತ್ತಾ? ಈ ಬಾರಿ ಬಿಜೆಪಿ ಕಾರ್ಯಕರ್ತರೇ ಅಚ್ಚೇ ದಿನ್ ಆನೇ ವಾಲ ಹೇ(ಒಳ್ಳೆಯ ದಿನ ಬರಲಿದೆ) ಎಂದು ಒಬ್ಬರು ಮತ್ತೊಬ್ಬರಿಗೆ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇನ್ನು, ದೇಶದ ಜನತೆಗೆ ಹೇಗೆ ಹೇಳುತ್ತಾರೆ? ಬಿಜೆಪಿಯ ಕ್ಷಣಗಣನೆ ಆರಂಭವಾಗಿದೆ" ಎಂದು ಹೇಳಿದ್ದಾರೆ.
‘विकास’ पूछ रहा है: प्रधान जी का ‘अच्छे दिन वाला घोषणा पत्र’ क्या चुनाव के बाद आयेगा? इस बार तो भाजपा वाले एक-दूसरे से भी नहीं कह पा रहे हैं कि ‘अच्छे दिन आने वाले हैं’ तो भला जनता से क्या कहेंगे.
भाजपा की उल्टी गिनती शुरू हो चुकी है...#VikasPoochhRahaHai pic.twitter.com/RccI8oqGZF
— Akhilesh Yadav (@yadavakhilesh) April 4, 2019
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಅಖಿಲೇಶ್ ಯಾದವ್ #VikasPoochhRahaHai ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸದ್ಯ ಈ ಹ್ಯಾಶ್ ಟ್ಯಾಗ್ ವೈರಲ್ ಆಗಿದೆ.