Earthquake In Jammu Kashmir: ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದೆ. ಜನರು ಗಾಢ ನಿದ್ರೆಯಲ್ಲಿದ್ದ ಸಮಯದಲ್ಲಿ ಎಂದರೆ ಮುಂಜಾನೆ 3:49 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭೂಕಂಪದ ಅನುಭವವಾಗಿದ್ದು ಏಕಾಏಕಿ ಭೂಕಂಪದಿಂದಾಗಿ ಜನರು ಭಯಭೀತರಾಗಿದ್ದರು ಎಂದು ವರದಿಯಾಗಿದೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಬೆಳಗ್ಗೆ 3:49 ರ ಸುಮಾರಿಗೆ ಸಂಭವಿಸಿದ ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.6 ಎಂದು ಅಳೆಯಲಾಗಿದೆ. ಆದಾಗ್ಯೂ, ಇಂದು ಸಂಭವಿಸಿರುವ ಭೂಕಂಪದಲ್ಲಿ ಯಾವುದೇ ರೀತಿಯ ಪ್ರಾಣಹಾನಿ, ಇಲ್ಲವೇ ಆಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
An earthquake of magnitude 3.6 hits Jammu and Kashmir's Rajouri at around 3:49 am: National Center for Seismology pic.twitter.com/ziM4aUw092
— ANI (@ANI) August 16, 2023
ಇದನ್ನೂ ಓದಿ- ಚಂದ್ರನ ವೃತ್ತಾಕಾರದ ಕಕ್ಷೆ ಪ್ರವೇಶಿಸಲು ಚಂದ್ರಯಾನ 3 ಕ್ಷಣಗಣನೆ! ಇಸ್ರೋ ಸಿದ್ಧತೆ ಪೂರ್ಣ
ನೋಯ್ಡಾ, ಉತ್ತರಾಖಂಡ, ಮಹಾರಾಷ್ಟ್ರದಲ್ಲೂ ಕಂಪಿಸಿದ ಭೂಮಿ:
ಜಮ್ಮು-ಕಾಶ್ಮೀರದಲ್ಲಿ ಭೂಕಂಪಕ್ಕೂ ಮೊದಲು ನೋಯ್ಡಾ, ಉತ್ತರಾಖಂಡದ ಪೌರಿ ಗರ್ವಾಲ್ ಮತ್ತು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿಯೂ ಭೂಕಂಪದ ಬಗ್ಗೆ ವರದಿಗಳು ಬಂದಿವೆ. ಈ ಪ್ರದೇಶಗಳಲ್ಲಿ ನಿನ್ನೆ ತಡರಾತ್ರಿ ಭೂಕಂಪದ ಅನುಭವವಾಗಿದ್ದು ಜಮ್ಮು-ಕಾಶ್ಮೀರದ ರಾಜೌರಿಗೆ ಹೋಲಿಸಿದರೆ ಇಲ್ಲೆಲ್ಲಾ ಭೂಕಂಪದ ತೀವ್ರತೆ ಇನ್ನೂ ಕಡಿಮೆ ಇತ್ತು ಎನ್ನಲಾಗಿದೆ.
ಇದನ್ನೂ ಓದಿ- ದೆಹಲಿಯಲ್ಲಿ ಅಪಾಯದ ಮಟ್ಟಕ್ಕೆ ತಲುಪಿದ ಯಮುನಾ ನೀರಿನ ಪ್ರಮಾಣ
ರಾಷ್ಟ್ರೀಯ ಭೂಕಂಪ ಕೇಂದ್ರದ ವೆಬ್ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,
ನೋಯ್ಡಾದಲ್ಲಿ ರಾತ್ರಿ 8.57ಕ್ಕೆ 6 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ನೋಯ್ಡಾದ ಸೆಕ್ಟರ್-128 ಪ್ರದೇಶದಲ್ಲಿ ಭೂಕಂಪನ ಕೇಂದ್ರ ಪತ್ತೆಯಾಗಿದ್ದು ಇದರ ತೀವ್ರತೆ 1.5ನಷ್ಟಿತ್ತು ಎಂದು ತಿಳಿದು ಬಂದಿದೆ.
ಅದೇ ಸಮಯದಲ್ಲಿ, ಉತ್ತರಾಖಂಡದ ಪೌರಿ ಗರ್ವಾಲ್ ಪ್ರದೇಶದಲ್ಲಿ ಬುಧವಾರ ಸಂಜೆ 6ಗಂಟೆ ಸುಮಾರಿಗೆ ತೀವ್ರತೆಯ ಭೂಕಂಪ ಸಂಭವಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬುಧವಾರ ಬೆಳಿಗ್ಗೆ 3.4 ತೀವ್ರತೆಯ ಭೂಕಂಪ ದಾಖಲಾಗಿದೆ. ಆದಾಗ್ಯೂ ಎಲ್ಲಿಯೂ ಕೂಡ ಯಾವುದೇ ಆಸ್ತಿ ಅಥವಾ ಪ್ರಾಣಹಾನಿ ಸಂಭವಿಸಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.