ನವದೆಹಲಿ: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್(62) ಅವರ ಫಿಟ್ನೆಸ್ ಲೆವಲ್ ಮೇಲೆ ಹಲವಾರು ಯುವಕರು ಕಣ್ಣಿಟ್ಟಿದ್ದಾರೆ. ಅನಿಲ್ ಅವರ ಹೆಸರನ್ನು ಬಾಲಿವುಡ್ ನ ಫಿಟ್ ನಟರಲ್ಲಿ ಪರಿಗಣಿಸಲಾಗುತ್ತದೆ. ಇತ್ತೀಚೆಗಷ್ಟೇ ತಮ್ಮ ಫಿಟ್ನೆಸ್ ಹಿಂದಿನ ಗುಟ್ಟು ಬಹಿರಂಗಗೊಳಿಸಿರುವ ಅನಿಲ್ ಕಪೂರ್, "ನನ್ನ ಟ್ರೈನರ್ ನಿರಂತರವಾಗಿ ನನ್ನ ವರ್ಕ್ಔಟ್ಸ್ ಬದಲಿಸುತ್ತಾ ಇರುತ್ತಾರೆ. ಯಾವುದೇ ಒಂದು ನಿಶ್ಚಿತ ವ್ಯಾಯಾಮಕ್ಕೆ ನನ್ನ ಶರೀರ ಸಹಜವಾಗಲು ಅವರು ಬಿಡುವುದಿಲ್ಲ. ಕಾರ್ಡಿಯೋ ಹಾಗೂ ವೇಟ್ ಟ್ರೇನಿಂಗ್ ನಡುವೆ ಸಮತೋಲನ ಕಾಯುವುದು ಅವರ ಉದ್ದೇಶವಾಗಿರುತ್ತದೆ" ಎಂದಿದ್ದಾರೆ.
ಊಟ ಉಪಹಾರಗಳ ಕುರಿತು ವಿಚಾರಿಸಲಾಗಿ "ನಾನು ಯಾವುದೇ ವಿಶೇಷ ಡಯಟ್ ಪ್ಲಾನ್ ಪಾಲಿಸುವುದಿಲ್ಲ. ನನ್ನ ಶರೀರಕ್ಕೆ ಹಿತವೆನಿಸುವುದನ್ನು ಮಾತ್ರ ನಾನು ಸೇವಿಸುತ್ತೆನೆ. ಸಾಮಾನ್ಯವಾಗಿ ಅದು ಸ್ವಾಸ್ಥ್ಯವರ್ಧಕ ಹಾಗೂ ಸರಳ ಆಹಾರವಾಗಿರುತ್ತದೆ" ಎಂದು ಅನಿಲ್ ಹೇಳಿದ್ದಾರೆ. ಓರ್ವ ಒಳ್ಳೆಯ ಓಟಗಾರರಾಗಿರುವ ಅನಿಲ್ ಕಪೂರ್ ಇತ್ತೀಚೆಗಷ್ಟೇ ಜಮೈಕಾದ ಅನುಭವಿ ಓಟಗಾರ ಯೋಹಾನ್ ಬ್ಲಾಕ್ ಅವರ ಭಾರತ ಭೇಟಿಯ ವೇಳೆ ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ದೇಶದಲ್ಲಿ ರಸ್ತೆ ಸುರಕ್ಷೆಯ ಕುರಿತು ಅರಿವು ಮೂಡಿಸಲು ಬ್ಲಾಕ್ ಭಾರತಕ್ಕೆ ಭೇಟಿ ನೀಡಿದ್ದರು.
ಯೋಹಾನ್ ಜೊತೆ ಮಾತುಕತೆ ನಡೆಸಿದ್ದ ತಾವು ಕೇವಲ ಫಿಟ್ನೆಸ್ ಬಗ್ಗೆಯೇ ಮಾತನಾಡದೆ ಉಭಯರ ಇಷ್ಟ-ಇಷ್ಟವಾಗದೆ ಇರುವ ವಿಷಯಗಳು ಹಾಗೂ ವ್ಯಾಯಾಮದ ಕುರಿತು ಕೂಡ ಮಾತುಕತೆ ನಡೆಸಿರುವುದಾಗಿ ಹೇಳುತ್ತಾರೆ. ಬ್ಲಾಕ್ ಅವರ ಜೊತೆಗಿನ ಭೇಟಿಯ ತಮ್ಮ ಅನುಭವದ ಬಗ್ಗೆ ಹೇಳುವ ಅನೀಲ್ " ಅತ್ಯಂತ ವೃತ್ತಿಪರರಾಗಿರುವ ಯೋಹಾನ್ ಜೊತೆ ಭೇಟಿ ನಡೆಸಲು ಮತ್ತು ಮಾತುಕತೆ ನಡೆಸಲು ತಮಗೆ ಅವಕಾಶ ಸಿಕ್ಕಿರುವುದು ಅದೃಷ್ಟದ ವಿಷಯ" ಎಂದಿದ್ದಾರೆ.
80ರ ದಶಕದಲ್ಲಿ ಅನಿಲ್ ಕಪೂರ್ ಅವರಿಗೆ ಸ್ಟಾರ್ ಡಂ ಸಿಕ್ಕಾಗ ನಟರಿಗೆ ಅವರ ಫಿಟ್ನೆಸ್ ಪ್ರಮುಖವಾಗಿರಲಿಲ್ಲ. ಇಂದಿನ ಯುವ ನಟರು ತಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚಿಗೆ ಜಾಗರೂಕರಾಗಿದ್ದಾರೆಯೇ? ಎಂಬುದನ್ನು ಪ್ರಶ್ನಿಸಲಾಗಿ. ಸ್ಮಿತಹಾಸ್ಯದಿಂದ ಉತ್ತರಿಸಿರುವ ಅನಿಲ್ "ಇದೊಂದು ಸರಿಯಾದ ಪರಿಕಲ್ಪನೆ. ಇಂದಿನ ಯುವಕರು ಆರೋಗ್ಯ ಹಾಗೂ ಫಿಟ್ನೆಸ್ ಹಿಂದಿನ ಸೈನ್ಸ್ ಚೆನ್ನಾಗಿ ಅರಿತಿದ್ದಾರೆ ಹಾಗೂ ತಮಗೆ ಯಾವುದು ಸರಿಯಾಗಿದೆ ಎಂಬುದರ ಆಯ್ಕೆ ಅವರು ನಮಗಿಂತ ಚೆನ್ನಾಗಿ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಯಾವಾಗಲು ಚೈತನ್ಯಶೀಲವಾಗಿರಲು ಯಾವುದು ನಿಮಗೆ ಪ್ರೇರೇಪಿಸುತ್ತದೆ ಎಂದು ಕೇಳಲಾಗಿ, "ಉತ್ಸಾಹ, ಕಠಿಣ ಪರಿಶ್ರಮ ಹಾಗೂ ಜೀವನದ ಬಗ್ಗೆ ತಾವು ಹೊಂದಿರುವ ಸಕಾರಾತ್ಮಕ ಭಾವ" ಎಂದು ಅನಿಲ್ ಉತ್ತರಿಸಿದ್ದಾರೆ.
ನಾಲ್ಕು ದಶಕಗಳ ಬಳಿಕವೂ ಕೂಡ ಬಾಲಿವುಡ್ ನಲ್ಲಿ ಸಕ್ರೀಯವಾಗಿರುವ ಅನಿಲ್ ಕಪೂರ್ ಅವರು ಈ ವರ್ಷ ಅಭಿನಯಿಸಿರುವ 'ಏಕ್ ಲಡಕಿ ಕೋ ದೇಖಾ ತೋ ಐಸಾ ಲಗಾ', 'ಟೋಟಲ್ ಧಮಾಲ್' ಹಾಗೂ 'ಪಾಗಲಪಂತಿ' ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿವೆ. ಅವರ ಮುಂಬರುವ ಚಿತ್ರಗಳ ಪಟ್ಟಿಯಲ್ಲಿ 'ಮಲಂಗ್' ಹಾಗೂ ತಖ್ತ್' ಶಾಮೀಲಾಗಿವೆ.