ಭಾರತದ ಚಲನಚಿತ್ರ & ದೂರದರ್ಶನ ಸಂಸ್ಥೆ(FTII) ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ಇದಕ್ಕೂ ಮೊದಲು ಕಿರುತೆರೆ ಕಲಾವಿದ ಗಜೇಂದ್ರ ಚೌಹಾನ್ FTII ಅಧ್ಯಕ್ಷರಾಗಿದ್ದರು.

Last Updated : Oct 11, 2017, 03:57 PM IST
ಭಾರತದ ಚಲನಚಿತ್ರ & ದೂರದರ್ಶನ ಸಂಸ್ಥೆ(FTII) ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ title=

ಪ್ರಸಿದ್ದ ನಟ ಅನುಪಮ್ ಖೇರ್ FTII ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯೊಬ್ಬರು ಇದನ್ನು ದೃಢಪಡಿಸಿದ್ದಾರೆ. ಇದಕ್ಕೂ ಮೊದಲು ಕಿರುತೆರೆ ಕಲಾವಿದ ಗಜೇಂದ್ರ ಚೌಹಾನ್ FTII ಅಧ್ಯಕ್ಷರಾಗಿದ್ದರು. ಭಾರತದ ಚಲನಚಿತ್ರ & ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಗಜೇಂದ್ರ ಚೌಹಾನ್ ಅವರ ಎರಡು ವರ್ಷಗಳ ಅವಧಿ ಮುಗಿದಿದ್ದು, ಈಗ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.

62 ವರ್ಷ ವಯಸ್ಸಿನ ಅನುಪಮ್ ಖೇರ್ 500ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ರಂಗಭೂಮಿಯಲ್ಲಿ ಸಹ ಸಕ್ರಿಯರಾಗಿದ್ದಾರೆ. ಅವರಿಗೆ ಅವರಿಗೆ 2004 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ಮೊದಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ) ಅಧ್ಯಕ್ಷರಾಗಿದ್ದರು.

Trending News