ನವದೆಹಲಿ : ದೆಹಲಿ ಸರ್ಕಾರ (Delhi government) ರೈತರಿಗಾಗಿ ದೊಡ್ಡ ಘೋಷಣೆ ಮಾಡಿದೆ. ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ದೆಹಲಿ ಸರ್ಕಾರ ಪರಿಹಾರವನ್ನು ಘೋಷಿಸಿದೆ. ರೈತರ ಬೆಳೆಹಾನಿಯಾದರೆ ಪ್ರತಿ ಹೆಕ್ಟೇರ್ಗೆ 50,000 ರೂ. ಪರಿಹಾರವನ್ನು ಕೇಜ್ರಿವಾಲ್ ಸರ್ಕಾರ (Kejriwal government) ಘೋಷಿಸಿದೆ.
ಕೆಲವು ದಿನಗಳ ಹಿಂದೆ ದೆಹಲಿಯ ಕೆಲವು ರೈತರು, ತಮ್ಮನ್ನು ಭೇಟಿಯಾಗಲು ಬಂದಿದ್ದರು ಎಂದು ಸಿಎಂ ಅರವಿಂದ ಕೇಜ್ರಿವಾಲ್ (Aravind Kejriwal) ಹೇಳಿದ್ದಾರೆ. ಮಳೆಯಿಂದಾಗಿ ಆ ರೈತರ ಬೆಳೆ ಹಾನಿಯಾಗಿದೆ. ಹೀಗಾಗಿ ಪ್ರತಿಯೊಂದು ತೊಂದರೆಯಲ್ಲೂ ರೈತರೊಂದಿಗೆ ನಿಲ್ಲುವುದಾಗಿ ಅವರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ (Farmers) ಪ್ರತಿ ಹೆಕ್ಟೇರಿಗೆ 50 ಸಾವಿರ ರೂಪಾಯಿಗಳಂತೆ ಪರಿಹಾರವನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Medicine For Dengue Fever: ಕೊನೆಗೂ ಸಿಕ್ಕೆ ಬಿಟ್ತು ಡೆಂಗ್ಯೂ ಜ್ವರಕ್ಕೆ ಔಷಧಿ, ದೇಶದ ಈ 20 ಸ್ಥಳಗಳಲ್ಲಿ ನಡೆಯಲಿದೆ ಟ್ರಯಲ್
ಈ ಬಾರಿಯೂ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಹೆಕ್ಟೇರ್ಗೆ 50 ಸಾವಿರ ರೂಪಾಯಿಯಂತೆ ಪರಿಹಾರ (Compensation Per Hector) ನೀಡಲಾಗುವುದು ಎಂದು ಹೇಳಿದ್ದಾರೆ. ರೈತರ ಬೆಳೆ ಹಾನಿ ಬಗ್ಗೆ ಸಮೀಕ್ಷೆಯನ್ನು ಆರಂಭಿಸಿದ್ದೇವೆ. ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತರಿಗೂ ಸುಮಾರು ಒಂದೂವರೆ ತಿಂಗಳೊಳಗೆ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಬೆಳೆ ಹಾನಿಯಾದ ರೈತರು ಚಿಂತಿಸಬೇಡಿ, ನಾವು ನಿಮ್ಮೊಂದಿಗೆ ನಿಂತಿದ್ದೇವೆ. ಆದಷ್ಟು ಬೇಗ ಸಂಪೂರ್ಣ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ