ನವದೆಹಲಿ: ಕೊನೆಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಡಿಎಂಕೆ ಪಕ್ಷದ ಮೈತ್ರಿ ಸೂತ್ರ ಈಗ ಅಧಿಕೃತವಾಗಿ ಹೊರಬಿದ್ದಿದೆ. ಈ ಸೂತ್ರದ ಅನುಗುಣವಾಗಿ ಈಗ ಬಿಜೆಪಿ 5 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಆಡಳಿತ ಪಕ್ಷ ಎಐಡಿಎಂಕೆ ಪಟ್ಟಲ್ಲಿ ಮಕ್ಕಳ್ ಕಟ್ಚಿ(ಪಿಎಂಕೆ) ಜೊತೆ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿತ್ತು.
Tamil Nadu Deputy CM and AIADMK leader O Panneerselvam: BJP will contest on 5 seats in Lok Sabha elections & we will be contesting together in Tamil Nadu & Puducherry https://t.co/SpzCpy2utz
— ANI (@ANI) February 19, 2019
ಈ ಮೂಲಕ ಈಗ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿನ ಒಟ್ಟು 40 ಲೋಕಸಭಾ ಸ್ಥಾನಗಳಿಗಾಗಿ ಬಿಜೆಪಿ-ಎಐಡಿಎಂಕೆ-ಪಿಎಂಕೆ ಪಕ್ಷಗಳ ನಡುವೆ ಮೈತ್ರಿಕೂಟ ರಚನೆಯಾದಂತಾಗಿದೆ.ಈಗಾಗಲೇ ಎಐಡಿಎಂಕೆ ಮತ್ತು ಪಿಎಂಕೆ ನಡುವಿನ ಮೈತ್ರಿಕೂಟದ ಭಾಗವಾಗಿ 7 ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದಲ್ಲದೆ ಒಂದು ರಾಜ್ಯಸಭಾ ಸ್ಥಾನವನ್ನು ಆಫರ್ ಮಾಡಿದೆ.ಈ ತ್ರಿಪಕ್ಷೀಯ ಮೈತ್ರಿಕೂಟದ ಭಾಗವಾಗಿ ಈಗ ಬಿಜೆಪಿ ಮತ್ತು ಪಿಎಂಕೆ ಪಕ್ಷಗಳು ಎಐಡಿಎಂಕೆಗೆ 21 ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬೆಂಬಲ ನೀಡಲಿವೆ.
Piyush Goyal, BJP: We will support AIADMK in the by-elections on 21 assembly seats in Tamil Nadu. We have agreed to contest elections in the leadership of OPS & EPS in state & in leadership of Modi Ji in center pic.twitter.com/2nUZAPHiaM
— ANI (@ANI) February 19, 2019
ಮೈತ್ರಿಕೂಟದ ಘೋಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪಿಯುಶ್ ಗೋಯಲ್ "ನಾವು ಎಐಡಿಎಂಕೆ ಪಕ್ಷವನ್ನು 21 ಕ್ಷೇತ್ರಗಗಳಿಗಾಗಿ ನಡೆಯುವ ಉಪಚುನಾವಣೆಯಲ್ಲಿ ಬೆಂಬಲಿಸುತ್ತೇವೆ. ರಾಜ್ಯದಲ್ಲಿ ಓಪಿಎಸ್ ಮತ್ತು ಇಪಿಎಸ್ ಅವರ ನಾಯಕತ್ವದಲ್ಲಿ ಸ್ಪರ್ಧಿಸುತ್ತೇವೆ ಇನ್ನು ಕೇಂದ್ರದಲ್ಲಿ ಮೋದಿಯವರ ನೇತೃತ್ವದಲ್ಲಿ ನಾವು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದೇವೆ" ಎಂದು ತಿಳಿಸಿದರು.